ಬಿಂದು
ನಾನು
ಎನ್ನುವುದು ಒಂದು
ಸಣ್ಣ ಬಿಂದುವಾಗೇ
ಇರಬಹುದು
ಅಥವಾ ಒಂದು
ಸಣ್ಣ ಕಣವಾಗಿರಬಹುದು
ಅಥವಾ ನಾನು ನಾನೇ
ಆಗಿರಬಹುದು!!
ಇದನ್ನು ನೀವು ಅಹಂ
ಎನ್ನಬಹುದು
ಅಥವಾ ಅಸ್ಮಿತೆ
ಎನ್ನಬಹುದು!
ನಾನು ನಾನಾಗದ್ದಿದ್ದರೆ
ಇನ್ನೇನಾಗಬಹುದು?
ನಾನು ನಾನೇ ಹೊರತು
ಬೇರೊಬ್ಬನಾಗಲು
ಸಾಧ್ಯವಿಲ್ಲ!!
ಇದರಲ್ಲಿ ಅಹಂಕಾರದ
ಮಾತೇ ಇಲ್ಲ
ಇದು ನನ್ನ ಗುರುತು
ಇದು ನನ್ನ ಕುರುಹು
ಯಾರು ಎಷ್ಟೇ ನನ್ನ ತುಳಿಯ
ಬಯಸಿದರೂ
ಯಾರು ಎಷ್ಟೇ ನನ್ನ ಪರಿಗಣಿಸದೇ ಇದ್ದರೂ
ಚಿಂತೆ ಇಲ್ಲ
ಇದು ನನಗೆ ಆ ದೇವರೇ
ಕೊಟ್ಟ ಗುರುತು
ಅದನು ಬೆಳೆಸಿಕೊಂಡು
ನಾನು ಇಂದು ನಾನಾಗಿರುವೆ!
ನನ್ನ ಅಳಿಸಿಹಾಕಿದರೂ
ನನ್ನತನ ಉಳಿದೇ ಉಳಿಯುವುದು
ನನ್ನ ಚಾರಿತ್ರ್ಯಹೀನನನ್ನಾಗಿ
ಮಾಡಬಯಸುವವರು
ಉಳಿಯರು
ಅವರ ಪಾಪಕ್ಕೆ ಅವರೇ
ಪ್ರಶ್ಚಾತಾಪ ಪಡುವರು
ಬಯಸಿದರೆ ಪ್ರಾಯಶ್ಚಿತ
ಪಡೆಯಬಹುದು!
ಆದರೆ ನಾನು ನಾನಾಗೇ
ಉಳಿವೆ!
ನನ್ನ ಗುರುತು
ನನ್ನ ಅಸ್ಮಿತೆ
ಆ ದೇವರ ಕೊಡುಗೆ!
ನೆನಪಿರಲಿ ಇನ್ನೊಬ್ಬರನು
ಅಸೂಯೆ ಪಡಿಸಲು ಹೋಗಿ
ನಗೆಪಾಟಲಾಗುವಿರಿ!
ಇನ್ನೊಬ್ಬರ ಮನಸು ನೋಯಿಸಿ
ಏನೂ ಆಗದವರಂತೆ
ಧೂರ್ಥ ನರಿಯಂತೆ ಬದುಕುವುದ ಬಿಟ್ಟು
ಮನುಷ್ಯ ರಂತೆ ಬಾಳಿ!
ಏಕೆಂದರೆ ಇಲ್ಲಿ ನಾನು
ನಾನೇ
ನೀವು ನೀವಾಗಿರಬಹುದು
ಆದರೆ ನಾನು ನಾನೇ
ಇಲ್ಲಿ ನಾನು ಎಂಬುವುದು
ಅಹಂ ಅಲ್ಲ!
ಅದು ಗುರುತರ ಕುರುಹು
ಆಗಿ ವಿಶಿಷ್ಟ ಅಸ್ಮಿತೆ ಯಾಗಿ
ಸದಾ ನಕ್ಷತ್ರ ದಂತೆ ಮಿನುಗುವುದು!!
ಮೋಸ ವಂಚನೆ ದಗಲ್
ಬಾಜಿತನಕ್ಕೆ ಅದು ಬಗ್ಗುವುದಿಲ್ಲ
ಅಂಜುವುದಿಲ್ಲ ಅಳುಕುವುದಿಲ್ಲ
ನಾನು ಎನ್ನುವುದು ಅಜೀವವಲ್ಲ
ಅದು ಸಜೀವ ಅದು ಚಿರಂಜೀವ
ಅದು ಅನುಪಮ
ಪ್ರಖರತೆಯ ಜ್ಯೋತಿ
ಸದಾ ಬೆಳಗುತಿರುವುದು!!
ಡಾ. ಜಯಾನಂದ ಧನವಂತ