ಕಲಾವಿದರ ಬೇಡಿಕೆಗಳನ್ನು ಪರಿಹರಿಸಲು ನಿಮ್ಮೊಂದಿಗೆ ಇರುತ್ತೇನೆ :ಎಸ್ ಜಿ ನಂಜಯ್ಯನ ಮಠ

Must Read

ಬಾಗಲಕೋಟೆ –  ಕಲಾವಿದರ ಬದುಕು. ಅವರ ಕಷ್ಟ-ನಷ್ಟಗಳು ಜೀವನ ಸಾಗಿಸಲು ನಡೆಸುವ ಹೋರಾಟಗಳನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಕಲಾವಿದರು ಶ್ರೀಮಂತರಲ್ಲ. ಹಾಗಾಗಿ ಕಲಾವಿದರ ಸಮಸ್ಯೆಗಳು ಏನೇ ಇರಲಿ ಅವೆಲ್ಲವುಗಳನ್ನ ನನ್ನ ಹೆಗಲ ಮೇಲೆ ಹೊತ್ತು ಪರಿಹಾರ ನೀಡುವ ಕೆಲಸವನ್ನು ಮಾಡುತ್ತೇನೆ ಎಂದು ಮಾಜಿ ಶಾಸಕ .ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜಯ್ಯನ ಮಠ ಹೇಳಿದರು.

ಜಿಲ್ಲೆಯ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಪವಾಡ ಪುರುಷ ಲಡ್ಡು ಮುತ್ಯಾ ದೇವಸ್ಥಾನದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟವು ಆಯೋಜಿಸಿದ ಸರ್ವ ಕಲಾವಿದರ ಮೂರನೇ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸರ್ವ ಕಲಾವಿದರ ಒಕ್ಕೂಟದ ಅಧ್ಯಕ್ಷರು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವ ಶಾಸ್ತ್ರಿಗಳು ಮಂಡಿಸಿದ ಹಲವು ವಿಚಾರಗಳನ್ನು ಆಲಿಸಿ ಮಾತನಾಡಿದ ನಂಜಯ್ಯನ ಮಠ, ನಾನು ಕೂಡ ನಿಮ್ಮೊಂದಿಗೆ ಇದ್ದೇನೆ. ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬುಧವಾರ ದಿ. 18 ರಂದು ಮುಂಜಾನೆ 11:00ಗೆ ಬಂದು ಸಹಾಯಕ ನಿರ್ದೇಶಕರ ಜೊತೆ ಮಾತನಾಡಿ ಪರಿಹಾರ ಒದಗಿಸುವ ಕಾರ್ಯ ಮಾಡುತ್ತೇನೆ ಎಂದು ಸಭೆಯಲ್ಲಿ ಕಲಾವಿದರಿಗೆ ಬೆಂಬಲ ಸೂಚಿಸಿ ಮಾತನಾಡಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಪವಿತ್ರ ಜಕ್ಕಪ್ನವರ್ ಗೌರವಾಧ್ಯಕ್ಷರಾದ ಚಿನ್ನಪ್ಪ ಗೌಡ ಗಿಡ್ಡಪ್ಪಗೋಳ, ಸಮಸ್ಯೆಗಳನ್ನು ಹಂಚಿಕೊಂಡರು.

ಮುಖಂಡರಾದ ಯಲ್ಲಪ್ಪ ಪೂಜಾರ, ಶಂಕರಪ್ಪ ತಂಬಾಕದ, ಶಂಕರ್ ಲಮಾಣಿ, ಈಶ್ವರ್ ಹೊರಟ್ಟಿ,  ರಾಮಪ್ಪ ಕನಸಗೇರಿ, ಲಕ್ಕವ್ವ ಕಪರಟ್ಟಿ, ಪಾಂಡುರಂಗ ಕನಸಗೇರಿ ಮುಂತಾದವರು ಸೇರಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾಕ್ಟರ್ ವೆಂಕಪ್ಪ ಸುಗತೇಕರ ಅವರನ್ನು ಮುರನಾಳದ ಮಳೆರಾಜೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ 20 ಕ್ಕೂ ಹೆಚ್ಚು ಕಲಾವಿದರನ್ನು ಸತ್ಕರಿಸಲಾಯಿತು

ಇಂದು ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿಗಳೊಂದಿಗೆ ನಂಜಯ್ಯನ ಮಠ ಚರ್ಚೆ : 2009ರಿಂದ 2018 ರ ವರೆಗೆ ಸಂದಶ೯ನಗೊಂಡ ಕಲಾವಿದರು ತಮ್ಮ ಸಂದರ್ಶನ ಪತ್ರದೊಂದಿಗೆ ಆಗಮಿಸಿ ನಿಮ್ಮೊಂದಿಗೆ ಅಧಿಕಾರಿಗಳ ಜೊತೆ ಚರ್ಚಿಸೋಣ ಎಂದು ಮೂರನೇ ಸಭೆಯಲ್ಲಿ ನಂಜಯ್ಯನ ಮಠ ರು ಹೇಳಿದ ಪ್ರಕಾರ, ಕಲಾವಿದರು ಆಗಮಿಸಬೇಕೆಂದು ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪವಿತ್ರ ಜಕ್ಕಪ್ಪನವರ ಪ್ರಕಟಣೆಯಲ್ಲಿ ಕೋರಿದ್ದಾರೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group