Homeಕವನಕವನ : ಕಾವ್ಯ ಮಾತನಾಡುತ್ತದೆ

ಕವನ : ಕಾವ್ಯ ಮಾತನಾಡುತ್ತದೆ

ಕಾವ್ಯ ಮಾತನಾಡುತ್ತದೆ

ಕಾವ್ಯ ಮಾತನಾಡುತ್ತದೆ
ಹೌದು ತನ್ನೊಳಗೆ
ಅನಂತ ಭಾವ ತೀರದೊಳಗೆ
ದೋಣಿಯಲಿ ಹುಟ್ಟು ಹಾಕಿ ನಡೆಸುವ ಅಂಬಿಗನಂತೆ
ಪಯಣದ ಗುರಿ ತಲುಪಲು
ಕಾವ್ಯ ಮಾತನಾಡುತ್ತದೆ

ಬಿಂಕ ಭಾವದ ಜನರನು
ಬದಿಗೆ ಸರಿಸಿ
ಬಂಧು ಬಾಂಧವ ನೇಹ ಸ್ನೇಹದ
ಪಯಣದಲಿ
ಕಾವ್ಯ ಮಾತನಾಡುತ್ತದೆ

ಒಳಗೊಳಗೆ ಬಿಕ್ಕಿ
ಮುರಿದ ಭಾವಗಳ ಒಂದುಗೂಡಿಸಿ
ಕಟ್ಟುತ್ತದೆ ಐಕ್ಯಭಾವ
ಭಾವ ತಿಮಿರದಲಿ
ಕಾವ್ಯ ಮಾತನಾಡುತ್ತದೆ

ಸೊಲ್ಲು ಸೊಲ್ಲಿಗೂ
ಸೋಲನರಿಯದ ಸವಿಮನದಿ
ಹೆಣೆದ ಭಾವ ಅಕ್ಷರಗಳ
ಪದಮಾಲೆಯ ರಾಗ ತಾಳ ಮಾಡಿ
ಹಾಡುವ ಸ್ವರ ಕಾವ್ಯಗಳ ಮುತ್ತು ಪೋಣಿಸಿ ಹಾಡುವ ಕಾವ್ಯ ಮಾತನಾಡುತ್ತದೆ

ಅದೆಷ್ಟೋ ಬಿಕ್ಕಿದೆ ಕಾವ್ಯ
ಭಾವಗಳ ಕಂಗಳಲಿ ನೆನಪು
ತುಂಬಿ ಹರಿಯುವ ಹಳ್ಳ ಕೊಳ್ಳಗಳಲಿ
ಕೊಚ್ಚಿ ಹೋಗಿ ಹುಚ್ಚಿ ಎನ್ನುವ
ಪದ ಕಟ್ಟಿ ತೆರೆದ ಬಾಗಿಲಿಗೆ
ಚಿಲಕಹಾಕಿ ಕಾವ್ಯ ಬಿಕ್ಕುತ್ತಿದೆ
ಸೂತ್ರ ಹರಿದ ಗಾಳಿಪಟದಂತೆ
ಕಾವ್ಯ ಮಾತನಾಡುತ್ತಿದೆ
———————–

ಸಾವಿತ್ರಿ ಕಮಲಾಪೂರ
ಸಾಹಿತಿ
ಬೆಳಗಾವಿ

RELATED ARTICLES

Most Popular

error: Content is protected !!
Join WhatsApp Group