spot_img
spot_img

ಮಿನಿ ಕತೆ

Must Read

- Advertisement -

ಸದ್ದಿಲ್ಲದ ಸುದ್ದಿಗಳು

ನರಹರಿರಾಯರು ಕೈಯಲ್ಲಿ ಚೀಲ ಹಿಡಿದುಕೊಂಡು ಗದಗ ಹುಬ್ಬಳ್ಳಿ ತಡೆ ರಹಿತ ಬಸ್ಸನ್ನು ನೋಡುತ್ತಾ ನಿಂತುಕೊಂಡವರು ; ಮೆಲ್ಲನೆ ಮೂಡಿದ ಮಾತಿನತ್ತ ಕಣ್ಣಾದರು.

“ಎಲ್ಲಿಗಮ್ಮ……….?” ಕಾರಿನ ಹ್ಯಾಂಡಲ್ ಬಲಗಡೆ ತಿರುವುತ್ತಾ ಕೇಳಿದ ಆ ಕಾರಿನ ಚಾಲಕ ಒಬ್ಬ ದಪ್ಪ ಹೆಣ್ಣು ಮಗಳನ್ನು. ಥಳ ಥಳ ಹೊಳೆವ ಕಾರು

“ಈಗೀಗ ತಂದಿದ್ದಿರಬಹುದೇ……? ” ನರಹರಿ ತರ್ಕಿಸತೊಡಗಿದರು. ಬ್ಲ್ಯಾಕ ಡ್ರಾಪ ಇನ್ ಚಾಕಲೇಟ ಕಲರ್ ಕಾರು ರಾಯರ ಕಣ್ಣನ್ನು ಬಿಟ್ಟೂ ಬಿಡದೇ ಸೆಳೆಯುತ್ತಿತ್ತು. ಕಾರ ಚಾಲಕ ಆ ಬಸ್ಟಾಪಿನಲ್ಲಿ ತುಂಬಿದ ಜನರಲ್ಲಿ ಆ ಹೆಣ್ಣು ಮಗಳನ್ನು ಆಯ್ಕೆ ಮಾಡಿ ಕೇಳಿದ್ದು ನರಹರಿಯವರ ಕುತೂಹಲಕ್ಕೆ ಕಾರಣವಾಗಿತ್ತು.

- Advertisement -

ಕಾರಿನ ಎಡಭಾಗಕ್ಕೆ ಸುಮಾರು ಮೂವತ್ತು ಜನ ಗಂಡಸರು ಕಾರಿನ ಬಲ ಭಾಗಕ್ಕೆ ಸುಮಾರು ಮೂವತ್ತು ಜನ ಹೆಂಗಸರು ಬಸ್ಸು ಕಾಯುತ್ತಾ ನಿಂತುಕೊಂಡಿದ್ದರು.

ಆ ದಪ್ಪ ಹೆಣ್ಣು ಮಗಳು : ” ಹುಬ್ಬಳ್ಳಿ ” ಎಂದಳು.
ಆ ಕಾರ್ ಚಾಲಕ : “ಬರ್ರಿ….” ಎಂದು ಕರೆದನು ಅವಳನ್ನೇ ನೋಡುತ್ತಾ.

ಅವಳು ತಲೆಯಲ್ಲಿಯ ಜಾಜಿ ಮಿಶ್ರಿತ ಮಲ್ಲಿಗೆ ಮಾಲೆಯನ್ನು ವೈಯಾರದಿಂದ ತಿರುವುತ್ತಾ, ಎಡಗೈಯಲ್ಲಿಯ ಚೀಲ ಬಲಗೈಗೆ ವರ್ಗಾಯಿಸುತ್ತಾ ಎರಡು ಹೆಜ್ಜೆ ನಡೆದು ಒಬ್ಬ ಹೆಣ್ಣು ಮಗಳ ಕಡೆ ಹೋಗಿ ಹೇಳಿದಳು. ” ಹುಬ್ಬಳ್ಳಿಗೆ ಹೊಕ್ಕೈತಂತಾ ಹೋಗುಣಾ…….? ” ಎಂದು.

- Advertisement -

ಅವಳು ನೀಲಿಛೂಡಿ , ಬಿಳಿ ಲೆಗ್ಗಿನ್ , ಕಾಲಿನಲ್ಲಿ ಹೈ ಹೀಲ್ಡ್ ಚಪ್ಪಲಿ ಧರಿಸಿದ ಆಕೆ ಕಾರಿನತ್ತ ಕ್ಷಣ ನೋಡಿ ಮುಖ ಪಟ್ಟನೇ ಬೇರೆಡೆ ಹೊರಳಿಸಿ ಉತ್ತರಿಸಿದಳು.” Non – stop Hubblli ಬಸ್ಸುಗಳು ಸಾಕಷ್ಟ ಅದಾವ ” ಎಂದ ಮಾತು ತೀಕ್ಷಣ ಮತ್ತು ಮೊನಚಾಗಿತ್ತು.

ಕಾರ ಚಾಲಕ ಅವಳ ಕಣ್ಣುಗಳ ಜೊತೆ ಸಂಬಾಷಿಸುವ ಪೂರ್ವದಲ್ಲಿಯೇ “ಗಾಡಿ’ ದುಡು ದುಡು’ ಮುಂದಕ್ಕೆಹೋಯಿತು. ಅವಳ ಮೈ ಮೇಲಿನ ಅಕ್ಷರಗಳು ಆತನನ್ನು ಕೊರೆದವೋ……!!

ನರ ಹರಿಯವರಿಗೆ ದಿಗಿಲಾಯಿತು.
“ಅಲ್ಲಾ….. ಹುಬ್ಬಳ್ಳಿಗೆ ಹೋಗಾವ್ರ ತುಂಬೇವಿ ಗಂಡಸ್ರ ಹೆಂಗಸ್ರ…… ಇವರ್ರ್ಯಾರೂ ಇಂವಗ ಕಾಣ್ಸಲಿಲ್ಲೇನ……………? !! “ಎನ್ನುತ್ತಾ ಆ ದಪ್ಪ ಹೆಣ್ಣು ಮಗಳನ್ನೇ ನೋಡತೊಡಗಿದರು.

ಪ್ರಾಯದ ವಯಸ್ಸನ್ನು ಅವಳು ದಾಟಿದ್ದರೂ ಮುಪ್ಪಿನ ಅಂಚನ್ನು ದಾಟಿರಲಿಲ್ಲ. ಕೂಳಿಗೆ ನೀರಿಗೆ ತಾಪತ್ರಯ ಇಲ್ಲದಂತೆ ಬೆಳೆದ ದೇಹ, ಗೋಧಿ ಕನಕದಂತಹ ಮೈ ಬಣ್ಣ. ಅಗಲವಾದ ದೊಡ್ಡ ಹೊಟ್ಟೆ , ಜನ ಜಂಗುಳಿಯಲ್ಲಿ ತೆರೆದ ಹೊಟ್ಟೆಯನ್ನು ಮುಚ್ಚಿಕೊಳ್ಳಬೇಕೆಂಬ ಜ್ನಾನವಿಲ್ಲದ ಅವಳ ಭಾವ ಭಂಗಿಗಳು, ಕೊರಳಲ್ಲಿ ಚಿನ್ನದ ಚಪಲ ಹಾರ , ಚಿನ್ನದ ದೊಡ್ಡ ನೆಲ್ಲಿಕಾಯಿ ಸರ , ಎರಡೆಳೆ ಚಿನ್ನದ ತಾಳಿ ಮತ್ತು ಕಿವಿಯಲ್ಲಿ ಜಾಗೆ ಬಿಡದ ಹಾಗೆ ಎದ್ದುಕಾಣುವ ಕಿವಿಯೋಲೆಗಳು, ಅವಳ ಶ್ರೀಮಂತಿಕೆಯನ್ನು ಎತ್ತಿ ಹೇಳುತ್ತಿದ್ದವು.

ನರಹರಿಯವರು ಅವಳ ಶ್ರೀಮಂತಿಕೆಯನ್ನು ಅಳೆಯುತ್ತಿದ್ದಂತೆ
” ಓ…….ಹೋ……!!!!!! ” ಉದ್ಘರಿಸಿದರು.

ಆದರೆ ಹೈ ಹೀಲ ಚಪ್ಪ ಲಿ ಮೆಟ್ಟಿದವಳನ್ನು ನೋಡುತ್ತಿದ್ದಂತೆ ಕಾರ ಚಾಲಕ ಬೆಂಕಿ ಹತ್ತಿದವರಂತೆ ದೂರ ಹೋದದ್ದು ನರ ಹರಿಯವರ ಎದೆಯಲ್ಲಿ ಸಂತಸದ ಸೆಲೆ ಬಿದ್ದು ಆನಂದ ಫುಳಕಿತರಾಗಿದ್ದರು.


ಅದು ಬೆಳಗಿನ ಸಮಯ. ನರಹರಿಯವರು ಪೇಪರ ಓದುತ್ತಾ ಕುಳಿತುಕೊಂಡಿದ್ದರು. ಪೇಪರಿನ ಮುಖ ಪುಟದಲ್ಲಿ …….ಬ್ಲ್ಯಾಕ ಡ್ರಾಪ ಚಾಕಲೇಟ್ ಕಲರ್ ಕಾರನ್ನು…..ಪೋಲೀಸರು ಸೀಜ್ ಮಾಡಿ ನಿಂತಿದ್ದರು. ಗಾಡಿಯ ಮಗ್ಗುಲಲ್ಲಿ ಹೆಣ್ಣು ಮಗಳ ಶವವೊಂದು ಬಿದ್ದಿತ್ತು…….ನರಹರಿಯವರು ಅವಾಕ್ಕಾದರು. ಅವರು ಮತ್ತೆ ಮತ್ತೆ ಆ ಕಾರು ಆ ಶವ ನೋಡುತ್ತಾ ನೋಡುತ್ತಾ……

“ಸದ್ದಿಲ್ಲದ ಸುದ್ದಿಗಳು ……..ಸದ್ಯಕ್ಕೆ ಶವ ಇದೆಯಲ್ಲಾ……” ಎಂದು ನಿಟ್ಟುಸಿರೊಂದನ್ನು ಬಿಟ್ಟಿದ್ದರು.

ಯಮುನಾ.ಕಂಬಾರ. ರಾಮದುರ್ಗ

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group