ಬೆಳಗಾವಿ ವಿಭಾಗದಲ್ಲಿ ವಿಜೃಂಭಿಸಿದ ಮೂಡಲಗಿಯ ಕಬಡ್ಡಿ ತಂ
ಜುಲೈ 30 ರಿಂದ ಆಗಸ್ಟ್ 1, 2025 ರವರೆಗೆ ಸಂಗನಬಸವ ಇಂಟರ್ನ್ಯಾಶನಲ್ ರೆಸಿಡೆನ್ಸಿಯಲ್ ಸ್ಕೂಲ್, ಕವಲಗಿ, ವಿಜಯಪುರದಲ್ಲಿ ಆಯೋಜಿಸಿದ್ದ CBSE ಕ್ಲಸ್ಟರ್ VIII ಕಬಡ್ಡಿ ಟೂರ್ನಮೆಂಟ್ನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಈ ಟೂರ್ನಮೆಂಟಿನಲ್ಲಿ ರಾಜ್ಯದ ವಿವಿಧ ಭಾಗಗಳಿಂದ 200 ಶಾಲೆಗಳು ಭಾಗವಹಿಸಿ, ಅಂಡರ್ 14 ವಿಭಾಗದ ಹೆಣ್ಣುಮಕ್ಕಳ ಕಬಡ್ಡಿಯಲ್ಲಿ 82 ತಂಡಗಳು ಭಾಗವಹಿಸಿ ಉತ್ಸಾಹದಿಂದ ಕಬಡ್ಡಿ ಕ್ರೀಡೆಗೆ ಪ್ರೀತಿಯನ್ನು ತೋರಿದವು.
ಈ ಗೌರವಯುತ ಕ್ರೀಡಾಕೂಟದಲ್ಲಿ ಶ್ರೀನಿವಾಸ ಶಾಲೆ, ಮೂಡಲಗಿ ವಿದ್ಯಾರ್ಥಿಗಳ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಮೂರನೇ ಸ್ಥಾನವನ್ನು ಗಳಿಸುವ ಮೂಲಕ ಶಾಲೆಯ ಹೆಮ್ಮೆ ಹೆಚ್ಚಿಸಿದೆ. ತಂಡದ ಆಟಗಾರರು ತೋರಿದ ಶಿಸ್ತಿನ ಆಟ, ಸಂಘಟನೆಯ ಶಕ್ತಿ ಮತ್ತು ಗೆಲುವಿನ ಸಂಕಲ್ಪ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಸಂದರ್ಭದಲ್ಲಿ ವಿಜಯಪುರದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಕಬಡ್ಡಿ ತಂಡಕ್ಕೆ ಟ್ರೋಫಿಯನ್ನು ನೀಡಿ ಗೌರವಿಸಿದರು.
ಈ ಸಾಧನೆ ಶಾಲೆಯ ಕ್ರೀಡಾ ವಿಭಾಗದ ಶ್ರಮ, ತರಬೇತುದಾರರ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ನಿಷ್ಠೆಯ ಫಲಿತಾಂಶವಾಗಿದೆ. ಅವರ ಸಾಧನೆಯು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯ ಮೂಲವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸುಗಳನ್ನು ತರುವತ್ತ ಪ್ರೇರೇಪಿಸುತ್ತದೆ ಎಂದು ಈ ಜಯವನ್ನು ಅನುಭವಿಸುತ್ತಾ, ಶಾಲೆಯ ಅಧ್ಯಕ್ಷ ಡಾ. ಆರ್. ಎನ್. ಸೋನವಾಲ್ಕರ ನುಡಿದರು.
ಕಾರ್ಯದರ್ಶಿ ವಿ. ಎಚ್. ಪಾಟೀಲ, ಪ್ರಾಂಶುಪಾಲರು ಎಸ್. ಬಿ. ಮಠಪತಿ ಮತ್ತು ಸಂಯೋಜಕರಾದ ಅನಿಲ್ಕುಮಾರ ಐ.ಸಿ. ಅವರು ತಂಡದ ತರಬೇತಿದಾರರಾದ ಅಮರ ಕಾಂಬಳೆ ಹಾಗೂ ಸುಭಾಷ ಶಿಂಗಿ ಹಾಗೂ ತಂಡದ ಎಲ್ಲಾ ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.