ಕರುಣದಿಂದಲಿ ಕಾಯೋ ಗುರುರಾಯ
ಕಲಿಯುಗ ದೈವ ಶ್ರೀ ರಾಘವೇಂದ್ರ
ಒಲಿದರೆ ಯಾವುದೇ ಭಯವಿಲ್ಲ
ನಲಿಯುವಿರೆಲ್ಲ ರಾಯರ ಕೃಪೆಯಿಂ
ಕಾಲಿಟ್ಟಲ್ಲಿ ಬರೀ ಜಯವೆಲ್ಲ
ಕರುಣಾಸಾಗರ ಈ ನಮ್ಮ ದೇವರು
ಹರಸುವರೆಲ್ಲರ ಕೃಪೆ ತೋರಿ
ನರವೇಷ ತೊಟ್ಟು ಭುವಿಗೆ ಬಂದಿಹ
ಪರಶಿವನೇ ಸರಿ ಕೈ ಮುಗಿರಿ
ಗುರುವಾರದ ದಿನ ಗುರುವಿನ ಧ್ಯಾನ
ಅರಿವಿನ ಹೊಳೆಯನೆ ಹರಿಸುವನು
ಬರಿಗೈ ಇರಲಿ, ಧನಿಕನೆ ಬರಲಿ
ಸರಿಸಮನಾಗಿ ಕಾಣುವನು
ತಂದೆಯು ನೀನೇ, ತಾಯಿಯು ನೀನೇ
ಬಂಧು ಬಳಗವು ನೀನಯ್ಯ
ಚೆಂದದ ಭಾವವ ಕರುಣಿಸಿ ಕಾಯೋ
ಮಂದಮತಿಯು ನಾ ಬಿಡದಿರು ಕೈಯ.
✍️ ಶ್ರೀಮತಿ ಕಮಲಾಕ್ಷಿ ಕೌಜಲಗಿ
ಬೆಂಗಳೂರು