Homeಸುದ್ದಿಗಳುಮನೆಯಲ್ಲಿ ಬಸವಣ್ಣನವರ ಭಾವಚಿತ್ರ ಬಿಟ್ಟು ಇನ್ನುಳಿದ ಭಾವಚಿತ್ರ ಇಡದಂತೆ ಸಾಣೇಹಳ್ಳಿ ಶ್ರೀ ಕರೆ

ಮನೆಯಲ್ಲಿ ಬಸವಣ್ಣನವರ ಭಾವಚಿತ್ರ ಬಿಟ್ಟು ಇನ್ನುಳಿದ ಭಾವಚಿತ್ರ ಇಡದಂತೆ ಸಾಣೇಹಳ್ಳಿ ಶ್ರೀ ಕರೆ

spot_img

ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಅಂತಾ ನಮೂದಿಸಬೇಕು

ಬೀದರ – ಎಲ್ಲಾ ಮೌಢ್ಯತೆ ನಿರಾಕರಿಸಿ ಬಸವ ತತ್ವದಂತೆ ಬದುಕುತ್ತೇನೆ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ನಿಮ್ಮೆಲ್ಲರ ಮನೆಗಳಲ್ಲಿ ಬಸವಣ್ಣನವರ ಭಾವಚಿತ್ರ ಹೊರತಾಗಿ‌ ಇನ್ನ್ಯಾವ ಭಾವಚಿತ್ರವನ್ನೂ ಇಟ್ಟುಕೊಳ್ಳಬೇಕಾಗಿಲ್ಲ.ನಿಮ್ಮ ಅಂಗದ ಮೇಲೆ ಲಿಂಗ ಧರಿಸಿ ಪೂಜೆ ಮಾಡ್ಬೇಕು, ಬೇರೆ ಏನನ್ನೂ ಪೂಜೆ ಮಾಡುವ ಅವಶ್ಯಕತೆ ಇಲ್ಲ ಎಂದು ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದ ವೇದಿಕೆಯಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ಬೀದರನಲ್ಲಿ ಕರೆಯಲಾಗಿದ್ದ ವೇದಿಕೆಯೊಂದರಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ನಮ್ಮ ದೇವರ ಗೂಡುಗಳನ್ನ ನೋಡಿದ್ರೆ ಅದೊಂದು ಮ್ಯೂಸಿಯಂ ಆಗಿರುತ್ತೆ.ಆ ಮ್ಯೂಸಿಯಂ ತೆಗೆದು ಹಾಕಿ ಬಸವಣ್ಣ ನಮ್ಮ ಧರ್ಮ ಗುರು ಎಂದು ಭಾವಿಸಬೇಕು.ಅಂಗೈಯಲ್ಲಿ ಲಿಂಗವನ್ನ ಹಿಡಿದು ಪೂಜೆ ಮಾಡಿದ್ರೆ ಲಿಂಗಾಯತ ಧರ್ಮ ಖಂಡಿತ ಸ್ವತಂತ್ರ ಧರ್ಮವಾಗುತ್ತದೆ ಎಂದು ಲಿಂಗಾಯತರಿಗೆ ಏಕದೇವೋಪಾಸನೆಯ ಪಾಠ ಹೇಳಿದ ಸಾಣೇಹಳ್ಳಿ ಶ್ರೀಗಳು.

ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಅಂತಾ ನಮೂದಿಸಬೇಕು.ಜಾತಿಯ ಕಾಲಂ‌ನಲ್ಲಿ ನಿಮ್ಮ ನಿಮ್ಮ ಉಪಜಾತಿಗಳನ್ನ ನಮೂದಿಸಬೇಕು, 60 ಲಕ್ಷ ಸುಳ್ಳು ಎಂಬ ಅಂಶ ಬೆಳಕಿಗೆ ಬರುತ್ತೆ.ನೀವೇನಾದರೂ ಲಿಂಗಾಯತ ಪ್ರತ್ಯೇಕ ಧರ್ಮ ನಮೂದು ಮಾಡದೇ ಇದ್ರೆ, ನಮ್ಮ ಅಂಕಿ ಸಂಖ್ಯೆ 30 ಲಕ್ಷಕ್ಕೂ ಬರಬಹುದು.ಈ ಬಗ್ಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಈಗಾಗಲೇ ತೀರ್ಮಾನಿಸಿದೆ ಎಂದು ಶ್ರೀಗಳು ಹೇಳಿದರು.

ರಾಜ್ಯ ಸರ್ಕಾರ ಅಷ್ಟೇ ಲಿಂಗಾಯತ ಸ್ವತಂತ್ರ ಧರ್ಮ ಅಂತಾ ಕೊಟ್ಟಿದೆ. ಕೇಂದ್ರ ಸರ್ಕಾರವೂ ಕೊಡುವಂತೆ ಈ ಅಭಿಯಾನ ಎಚ್ಚರಿಕೆ ಘಂಟೆಯಾಗಬೇಕು ಎಂದು ವೇದಿಕೆ ಮೇಲೆ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ.

RELATED ARTICLES

Most Popular

error: Content is protected !!
Join WhatsApp Group