ನುಡಿ ನಮನ
ಅಪ್ಪನಿಗಿಂತಲೂ ಮಿಗಿಲು ನಿಮ್ಮ ಪ್ರೀತಿ
ಅಮ್ಮನಿಗಿಂತಲೂ ಮೇಲು ನಿಮ್ಮ ಕಾಳಜಿ
ಆಗಲೂ ಈಗಲೂ ಮುಂದೆಯೂ ಎಂದಿಗೂ
ಆಗದು ನಿಮ್ಮನ್ನು ಮೀರಿಸಲು ಯಾರಿಗೂ
ಇಹಪರ ಲೋಕದಲಿ ನೀವೇ ಪ್ರಧಾನ
ಇರುವರು ಯಾರು ನಿಮಗೆ ಸಮಾನ
ಈಶ್ವರನ ಪ್ರತಿ ರೂಪವು ನೀವೇ
ಈಶ್ವರಿಯ ಸ್ವರೂಪವೂ ನೀವೇ
ಉತ್ತುಂಗ ಶಿಖರದಲ್ಲಿದೆ ನಿಮ್ಮ ಸ್ಥಾನಮಾನ
ಉಳಿಸಿಕೊಳ್ಳ ಬೇಕಿದೆ ಆ ಅಭಿಮಾನ
ಊರು ಕೇರಿ ಸುತ್ತಿ ಕರೆತರುವಿರಿ ಶಾಲೆಗೆ
ಊರುಗೋಲು ನೀವೇ ಶಾಲೆಬಿಟ್ಟ ಮಕ್ಕಳಿಗೆ
ಋಷಿಗಳಂತೆ ದೃಢಸಂಕಲ್ಪ ಹೊಂದಿದವರು ನೀವು
ಋಣ ತೀರಿಸಲಾರೆವು ಎಂದಿಗೂ ನಾವು
ಎಲ್ಲರ ಚಿತ್ತ ಎಂದಿಗೂ ನಿಮ್ಮತ್ತ
ಎಲ್ಲದಕ್ಕೂ ಮಾರ್ಗದರ್ಶಕ ನೀವು ಮಾತ್ರ
ಏಳಿ ಎದ್ದೇಳಿರೆಂದು ಹುರಿದುಂಬಿಸುವವರು ನೀವು
ಏನಾದರಾಗಲೀ ಮುಂದೆ ಸಾಗೆಂದು ಹರಿಸುವವರು ನೀವು
ಐಕ್ಯತೆಯನ್ನು ಮೈಗೂಡಿಸುವವರು ನೀವು
ಐಕ್ಯತೆಯನ್ನೇ ಉಸಿರಾಗಿಸಿಕೊಂಡವರು ನೀವು
ಒಲವಿನಲಿ ಕಲಿಸುತ ನಲಿಸುವವರು ನೀವು
ಒಲಿಯದ ವಿದ್ಯೆಯನು ಒಲಿಸಿಯೇ ತೀರುವಿರಿ ನೀವು
ಓ ಗುರುವೆ ಇದೋ ನಿಮಗೆ ನಮನ
ಓ ಚೈತನ್ಯ ಶಕ್ತಿಯೇ ನಿಮಗೆ ನನ್ನ ನಮನ
ಔಷಧವು ನೀವೇ ಅಜ್ಞಾನಿಗಳಿಗೆ
ಔಪಧರ್ಮವನು ಹೇಳಲಾರಿರಿ ಮಕ್ಕಳಿಗೆ
ಅಂಧಕಾರವ ತೊಲಗಿಸಿ ಬೆಳಕ ನೀಯುವ ತಂದೆ
ಅಂತಃಕರಣದ ಸಾಕಾರ ಮೂರ್ತಿಯೇ
ನಿಮಗೆ ನಾನು ಶರಣು ಎಂದೆ
ಶ್ರೀಮತಿ ಜ್ಯೋತಿ ಕೋಟಗಿ
ಬೈಲಹೊಂಗಲ ಬಿ ಆರ್ ಪಿ ಚ ಕಿತ್ತೂರು

