ರೈತ ಮಹಿಳೆ
ಇವಳೆ ನೋಡು ರೈತ ಮಹಿಳೆ
ನಮ್ಮ ಅನ್ನದಾತಳು
ಹಗಲು ರಾತ್ರಿ ಬಿಡದೆ ಸತತ
ದುಡಿಮೆಯಲ್ಲಿ ನಿರತಳು
ಕೋಳಿ ಕೂಗುವ ಮುನ್ನ ಈಕೆಯು
ಎಚ್ಚರಾಗಿ ಏಳುವಳು
ಮನೆಯ ಕೆಲಸ ಮುಗಿಸಿ ಬೇಗ
ಹೊಲದ ಕಡೆಗೆ ನಡೆವಳು
ಗಂಡನೊಂದಿಗೆ ಹೆಗಲುಗೊಟ್ಟು
ಹೊಲದಿ ತಾನು ದುಡಿವಳು
ಭೂಮಿ ತಾಯಿ ದೇವರೆಂದು
ನಿತ್ಯ ಸೇವೆಯ ಗೈವಳು
ಮನೆಯಲೆರಡು ಹಸುಗಳನ್ನು
ಸಾಕಿಕೊಂಡು ಇರುವಳು
ಮೇವು ನೀರು ನೀಡಿ ಅವಕೆ
ತುಂಬ ಹಾಲನು ಪಡೆವಳು
ಮಕ್ಕಳೊಡನೆ ಆಟವಾಡುತ
ಬೇಸರವ ಕಳೆವಳು
ದುಡಿದು ದಣಿದು ತಾನು ನೊಂದು
ನಮ್ಮನೆಲ್ಲ ಸಲುವಳು
ಆರ್. ಎಸ್. ಚಾಪಗಾವಿ
ಬೆಳಗಾವಿ 8317404648

