ಧುತ್ತರಗಿ ನಾಟಕ ಓದು-ಅಭಿಪ್ರಾಯ-ಸಂವಾದ ನಾಟಕಗಳು ಬದುಕಿನ ಪ್ರತಿಬಿಂಬ

Must Read

ಹುನಗುಂದ: ಸಮಾಜಕ್ಕೆ ತಲುಪಿಸಬೇಕಾದ ವಿಷಯವನ್ನು ರಂಗದ ಮೇಲೆ ನೈಜತೆಗೆ ಸವಾಲೆಸೆಯುವಂತೆ ಪ್ರದರ್ಶಿಸಿದಾಗ ಮಾತ್ರ ಅದು ಜನರಿಗೆ ಮುಟ್ಟಲು ಸಾಧ್ಯ ಎಂದು ಸಿಡಿಸಿ ಉಪಾಧ್ಯಕ್ಷ ವಿಜಯಮಹಾಂತೇಶ ಗದ್ದನಕೇರಿ ಅಭಿಪ್ರಾಯ ಪಟ್ಟರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪಿ.ಬಿ.ಧುತ್ತರಗಿ ಟ್ರಸ್ಟ್(ಸೂಳೇಬಾವಿ) ಬಾಗಲಕೋಟೆ ಹಮ್ಮಿಕೊಂಡ ಕವಿ ಪಿ.ಬಿ.ಧುತ್ತರಗಿ ಅವರ ಮದುಮಗಳು ನಾಟಕದ ವಿದ್ಯಾರ್ಥಿಗಳ ಓದು-ಅಭಿಪ್ರಾಯ-ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬದುಕಿನ ವಿವಿಧ ಆಯಾಮಗಳನ್ನು, ಸಾಮಾಜಿಕ ಸಂದೇಶಗಳನ್ನು ರಂಗದ ಮೂಲಕ ಮನೋಜ್ಞವಾಗಿ ಅಭಿನಯಿಸುವಂತೆ ಹಲವು ನಾಟಕಗಳನ್ನು ಬರೆದ ಪಿ.ಬಿ.ಧುತ್ತರಗಿ ನಮ್ಮ ನಾಡಿನ ದೈತ್ಯ ಮತ್ತು ಮೇರು ರಂಗ ಪ್ರತಿಭೆ. ಅವರ ಮದುಮಗಳು ನಾಟಕವನ್ನು ಇಂದಿನ ಯುವಜನಕ್ಕೆ ಅದರಲ್ಲೂ ವಿದ್ಯಾರ್ಥಿಗಳ ಮೂಲಕ ಓದು-ಸಂವಾದ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದರು.

ಮದುಮಗಳು ನಾಟಕ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಚಾರ್ಯ ಶರಣಪ್ಪ ಹೂಲಗೇರಿ ಅವರು, ಸಾಮಾಜಿಕ ವ್ಯವಸ್ಥೆಯಲ್ಲಿ ನಡೆಯುವ ವೈಪರೀತ್ಯ ಮತ್ತು ತಲ್ಲಣಗಳನ್ನು ಮನೋಜ್ಞವಾಗಿ ಕಟ್ಟಿಕೊಡುವ ಶಕ್ತಿ ಧುತ್ತರಗಿಯವರಿಗಿತ್ತು. ಮಹಿಳೆಯರು ನಿತ್ಯ ಅನುಭವಿಸುವ ಯಾತನೆಗಳು ಮದುಮಗಳು ನಾಟಕದಲ್ಲಿ ಅನಾವರಣಗೊಳ್ಳುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟಿನ ಅಧ್ಯಕ್ಷ ಎಸ್ಕೆ ಕೊನೆಸಾಗರ ಅವರು ರಂಗಭೂಮಿಯ ದೈತ್ಯ ಪ್ರತಿಭೆ ಪಿ.ಬಿ.ಧುತ್ತರಗಿಯವರ ನಾಟಕಗಳ ಆಶಯವನ್ನು ವಿದ್ಯಾರ್ಥಿಗಳ ಮೂಲಕ ನಾಡಿಗೆ ಮರು ಪರಿಚಯಿಸುವ ಕೆಲಸ ನಮ್ಮ ಪ್ರತಿಷ್ಠಾನದಿಂದ ಆಗುತ್ತಿರುವುದು ನಮ್ಮ ಹೆಮ್ಮೆ. ಈ ಕಾರ್ಯಕ್ರಮ ರಾಜ್ಯದ ಐದು ಜಿಲ್ಲೆಗಳಲ್ಲಿ ಬೇರೆ ಬೇರೆ ನಾಟಕಗಳ ಕುರಿತು ನಡೆಯುವುದು ಎಂದರು. ರೇಣುಕಾ ಕುರಿ, ಮುತ್ತಣ್ಣ ನಂದಾಪುರ, ಸಹನಾ ಮೇರಾಖೋರ, ರಜಿಯಾ ನದಾಫ್, ಕಾವ್ಯಶ್ರೀ ಪಟ್ಟಣದ ನಾಟಕದ ಕುರಿತಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಹಿರಿಯ ರಂಗಕರ್ಮಿಗಳಾದ ಜಿ.ವಿ.ದೇಶಪಾಂಡೆ, ಬಿ.ವೈ.ಕೊಡಗಾನೂರ, ಅರುಣಾಚಾರ್ಯ ಹುನಗುಂದ, ವ್ಯಾಸತೀರ್ಥ ಜೋಶಿ ಅತಿಥಿಗಳಾಗಿದ್ದರು.ಇದೇ ಸಂದರ್ಭದಲ್ಲಿ ಧುತ್ತರಗಿಯವರ ನಾಟಕಗಳ ಫೋಟೋ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು ಹಾಗೂ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.

ಧುತ್ತರಗಿ ಪ್ರತಿಷ್ಠಾನದ ಸದಸ್ಯ ಡಾ.ಸಿತಿಮಾ ವಜ್ಜಲ, ರಂಗಾಸಕ್ತ ಅನಂತ ಬಬಲೇಶ್ವರ, ಶಿವಪುತ್ರಪ್ಪ ತಾರಿವಾಳ, ಹಿರಿಯ ಲೇಖಕ ಜಿ.ಬಿ.ಕಂಬಾಳಿಮಠ, ವಿಜಯಕುಮಾರ ಕುಲಕರ್ಣಿ, ಕಾಲೇಜು ಸಿಡಿಸಿ ಸದಸ್ಯ ಸಂಗಣ್ಣ ಎಮ್ಮಿ, ಕಸಾಪ ಅಧ್ಯಕ್ಷ ಮಲ್ಲಿರ್ಜುನ ಸಜ್ಜನ, ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು. ಸುಪ್ರಿಯಾ ಬೆಣಗಿ ಪ್ರಾರ್ಥಿಸಿದರು. ಈರಪ್ಪ ಗೋತಗಿ ಧುತ್ತರಗಿ ಅವರ ಮದುಮಗಳು ನಾಟಕದ ರಂಗಗೀತೆಗಳನ್ನು ಹಾಡಿದರು. ಡಾ.ಮುರ್ತುಜಾ ಒಂಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಲಿಂಗಪ್ಪ ಬೀಳಗಿ ನಿರೂಪಿಸಿದರು. ಡಾ.ನಾಗರಾಜ ನಾಡಗೌಡ ವಂದಿಸಿದರು.

Latest News

ಗಾರ್ಡನ್ ಅಭಿವೃದ್ದಿಗೆ  ರೂ.೨೩.೩೯ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ

ಸಿಂದಗಿ; ಆಯಾ ವಾರ್ಡುಗಳು ಸಾರ್ವಜನಿಕರು, ವಯೋ ವೃದ್ಧರು ವಾಯು ವಿಹಾರಕ್ಕೆ ಅನುಕೂಲವಾಗಲೆಂದು ಪಟ್ಟಣದ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಒಟ್ಟು ೭೨...

More Articles Like This

error: Content is protected !!
Join WhatsApp Group