ಕವನ : ಅರ್ಥವಾಗಲಿಲ್ಲವೇನು ?

Must Read

ಅರ್ಥವಾಗಲಿಲ್ಲವೇನು ?

ಅವತ್ತು ಇದೇ ಹಾದಿಯಲ್ಲಿ
ಪುರುಷ ಕಣ್ಣಿನ ನೇತ್ರ ಚೆಲುವೆ
ನಿಟ್ಟಿಸಿರು ಬಿಟ್ಟು ಹಂಬಲಿಸಿದ್ದು
ಸೆರಗೊಡ್ಡಿ ಬೇಡಿದ್ದು
ಕಣ್ಣಿಗೆ ಕಾಣಲಿಲ್ಲವೇನು ?

ಅಳುವ ಮೋರೆಯೊಳಗೆ ಅವಳ ಕನಸ್ಸು
ಸೋತು ಕಣ್ಣು ರೆಪ್ಪೆಯೊಳಗೆ
ಹುಡುಕಿ ನಲಿಯುವ ಸೊಗಸು
ಕಾಣದ ಕೈಗಳು
ಚಿವುಟಿ ಒಗೆದಿದ್ದವು
ಕರುಣೆ ಬರಲಿಲ್ಲವೇನು ?

ಜಾನಕಿಯ ಒಲವು ರಾಮನ ಗೆಲುವು
ಹೊಟ್ಟೆಯೊಳಗೆ ಕಂದಮ್ಮಗಳು
ಕಾನನದ ಪಯಣದಲಿ ಒಂಟಿ
ಕರ್ಕಶ ಶಬ್ದ ಪ್ರಾಣಿ ಪಕ್ಷಿಗಳಂತೆ
ಬಿಟ್ಟು ಹೊರಟು ಹೋದ ಸೌಮಿತ್ರಿ
ದುಃಖ ಬರಲಿಲ್ಲವೇನು ?

ಪೌರುಷ ಮೃದು ಹೃದಯಿದುಷ್ಯಂತ
ಬರೀ ಹೆಸರಿಗೆ
ಬಿಕ್ಕುವ ಮನದಲಿ ಕಳೆದು ಹೋದ ಉಂಗುರ ಜಲದ ಮತ್ಸ್ಯಕ್ಕೆಆಹಾರ
ಅರಿವಾಗಲಿಲ್ಲವೇನು ?

ಹೊಟ್ಟೆಯೊಳಗಿನ ಕಂದ
ತನ್ನದೆಂದು ತಿಳಿಯದ ಪ್ರೇಮಿ ದುಷ್ಯಂತ
ಶಕುಂತಲೆಯ ನಿತ್ಯ ರೋಧನ
ಕಳೆದು ಸವೆಸಿದ ಇರುಳು ರಾತ್ರಿ
ಸತಿ ತನ್ನವಳೆಂದು
ಎಚ್ಚರವಾಗಲಿಲ್ಲವೇನು ?

ತಾಯಿಗೆ ಸಮ ಪಾಂಚಾಲಿ
ಕೊಳಕು ತೊಡೆಯ ತೋರಿಸಿ
ಅವಮಾನಿಸಿದ ಭೂಪ
ಕೌರವ ದುಶ್ಯಾಸನ
ತಾಯೊಲವಿನ ಕಿಂಕರತ್ವ.
ಅರ್ಥವಾಗಲಿಲ್ಲವೇನು ?

ಡಾ.ಸಾವಿತ್ರಿ ಕಮಲಾಪೂರ

LEAVE A REPLY

Please enter your comment!
Please enter your name here

Latest News

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಾನೂನು ಅರಿವು ಅತ್ಯಗತ್ಯ: ಪ್ರೊ. ಸುನಿತಾ ಕುರಬೇಟ

​ಮೂಡಲಗಿ: ಮಹಿಳೆಯರು ತಮ್ಮ ಹಕ್ಕುಗಳು ಮತ್ತು ರಕ್ಷಣಾ ಕಾನೂನುಗಳ ಬಗ್ಗೆ ಅರಿವು ಹೊಂದಿದಾಗ ಮಾತ್ರ ದೌರ್ಜನ್ಯಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯ ಎಂದು ರಾಯಬಾಗದ ಎಸ್.ಪಿ.ಎಮ್. ಕಾನೂನು...

More Articles Like This

error: Content is protected !!
Join WhatsApp Group