spot_img
spot_img

ಸಾವರ್ಕರ್ ‘ ವೀರ ‘ ಹೇಗಾದರು ?

Must Read

spot_img
- Advertisement -

ಭಾರತದ ಸ್ವಾತಂತ್ರ್ಯ ಹೋರಾಟದ ಸಾವಿರಾರು ಕೆಚ್ಚಿನ ಕಲಿಗಳಲ್ಲಿ ‘ ವೀರ ‘ ಸಾವರ್ಕರ್ ಒಬ್ಬರು. ವಿನಾಯಕ ದಾಮೋದರ ಸಾವರ್ಕರ್ ಎಂಬುದು ಅವರ ನಿಜ ನಾಮಧೇಯ. ಮೊದಲಿಗೆ ಸಾವರ್ಕರ್ ಹೆಸರಿನ ಹಿಂದೆ ‘ ವೀರ ‘ ಇರಲಿಲ್ಲ. ಅದು ಆಮೇಲೆ ಬಂದಿದ್ದು.

ವಿನಾಯಕ ಸಾವರ್ಕರ್, ವೀರ ಸಾವರ್ಕರ್ ಆಗಿರುವುದರ ಹಿಂದೆ ಒಂದು ರೋಚಕ ಕಥೆಯಿದೆ.

ವೀರ ಎಂಬ ಉಪಾಧಿಯನ್ನು ಸಾವರ್ಕರ್ ಅವರ ಹೆಸರಿಗೆ ಜೋಡಿಸಬೇಕಾದರೆ ಅದರ ಹಿಂದೆ ರೋಚಕ ಕಥೆಗಳಿವೆ. ವಾಸ್ತವವಾಗಿ ಆಚಾರ್ಯ ಎಂದು ಕರೆಯಲ್ಪಡುತ್ತಿರುವವರೆ ಸಾವರ್ಕರ್ ಅವರಿಗೆ ‘ ವೀರ ‘ ಎಂಬ ಬಿರುದು ನೀಡಿದರು. ಯಾಕೆ ಎಂಬುದನ್ನು ನೋಡೋಣ.

- Advertisement -

ಆಗಿನ ಕಾಂಗ್ರೆಸ್ ಜೊತೆಗೆ ಒಂದುಸಲ ಸಾವರ್ಕರ್ ಅವರಿಗೆ ಭಿನ್ನಾಭಿಪ್ರಾಯ ಉಂಟಾಯಿತು. ಆಗ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಯಿತು. ಆಗ ಸಾವರ್ಕರ್ ಬೆಂಬಲಕ್ಕೆ ನಿಂತವರು ಸಿನಿಮಾ ನಟ ಪಿ ಕೆ ಅತ್ರೆ. ಅತ್ರೆಯವರು ಒಮ್ಮೆ ಬಾಲಮೋಹನ ಥಿಯೇಟರ್ ನಲ್ಲಿ ಸಾವರ್ಕರ್ ಅವರ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಇದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ಆದಾಗ್ಯೂ ಸಾವಿರಾರು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾವರ್ಕರ್ ರನ್ನು ಹೊಗಳಿದರು. ಆಗಲೇ ಅತ್ರೆಯವರು ಸಾವರ್ಕರ್ ಅವರನ್ನು ‘ ವೀರ ‘ ಎಂದು ಕರೆದು ಸನ್ಮಾನಿಸಿದರು.

ಹೊರಗೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅತ್ರೆಯವರು, ಕಪ್ಪು ನೀರಿನ ಶಿಕ್ಷೆ ಅನುಭವಿಸಿ ಬಂದಿರುವ ‘ ಸ್ವಾತಂತ್ರ್ಯ ವೀರ’ ನಿಗೆ ಈ ಕಪ್ಪು ಬಾವುಟ ಪ್ರದರ್ಶನದಿಂದ ಯಾವುದೇ ಭಯವಿಲ್ಲ ಎಂದು ಹೇಳಿ ಕಾಂಗ್ರೆಸಿಗರನ್ನು ತಣ್ಣಗೆ ಮಾಡಿದರು.

ಆಗಿನ ಸ್ವಾತಂತ್ರ್ಯ ವೀರ ಉಪಾಧಿಯೇ ಸಾವರ್ಕರ್ ಅವರಿಗೆ ಶಾಶ್ವತವಾಗಿ ಉಳಿದು ‘ ವೀರ ಸಾವರ್ಕರ್ ‘ ಎನಿಸಿಕೊಂಡರು.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group