ಎಸ್ಸಿಎಸ್ಟಿ ಹುದ್ದೆ ಭರ್ತಿಗಾಗಿ ಕೇಂದ್ರ ಮನವಿ

Must Read

ನವದೆಹಲಿ : ಸುಪ್ರೀಂಕೋರ್ಟ್ ತೀರ್ಪಿಗೆ ಅನುಗುಣವಾಗಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಿಗಳ ಬಡ್ತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರ ಮನವಿ ಸಲ್ಲಿಸಿದೆ.

2019 ರ ಏಪ್ರಿಲ್ 15 ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದಿಂದಾಗಿ 1.3 ಲಕ್ಷ ಎಸ್ಸಿ,ಎಸ್ಟಿ ಉದ್ಯೋಗಿಗಳ ಬಡ್ತಿ ತಡೆ ಹಿಡಿಯಲಾಗಿದೆ. ಕೋರ್ಟ್ ಆದೇಶ ಇರುವುದರಿಂದ ಕೇಂದ್ರವು ಅಸಹಹಾಯಕವಾಗಿದ್ದು ಇದರಿಂದಾಗಿ ನೌಕರರಿಗೆ ಆರ್ಥಿಕ ನಷ್ಟವಾಗಿದೆ.

2020 ರ ಜನವರಿ 31 ವರೆಗೆ ಒಟ್ಟು 78 ಇಲಾಖೆಗಳ ಪೈಕಿ 1.3 ಲಕ್ಷಕ್ಕೂ ಅಧಿಕ ಉದ್ಯೋಗಿಗಳ ಬಡ್ತಿ ತಡೆಯಲಾಗಿದೆ. ಇದರಿಂದ ಉದ್ಯೋಗಿಗಳು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಉಲ್ಲೇಖಿಸಿದೆ.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group