spot_img
spot_img

ಅತಿ ಹೆಚ್ಚು ದಿನಗಳ ಕಾಲ ತುಂಬು ಪ್ರದರ್ಶನ ಕಂಡ ಕನ್ನಡದ ಚಿತ್ರಗಳು

Must Read

spot_img
- Advertisement -

Kannada films with the highest number of days in theatres

ಕನ್ನಡ ಸಿನಿಮಾರಂಗದಲ್ಲಿ ಸುಮಾರು ವರ್ಷಕ್ಕೆ 200 ರಿಂದ 250 ಸಿನಿಮಾಗಳು ತಯಾರಾಗುತ್ತವೆ. ಅದರಲ್ಲಿ ಕೆಲವು ಫ್ಲಾಪ್ ಆದರೆ ಇನ್ನು ಕೆಲವು ಹಿಟ್ ಆಗುತ್ತವೆ. ಅವುಗಳಲ್ಲಿ ಕೆಲವು ಬ್ಲಾಕ್ಬಸ್ಟರ್ ಆಗುತ್ತದೆ. ನಮ್ಮ ಕನ್ನಡ ಚಿತ್ರರಂಗದಲ್ಲಿ 500ಕ್ಕೂ ಹೆಚ್ಚು ದಿನಗಳು ಪ್ರದರ್ಶನ ಕಂಡ ಕನ್ನಡ ಚಿತ್ರಗಳ ಬಗ್ಗೆ ತಿಳಿಸುತ್ತೇವೆ, ಕಸ್ತೂರಿ ನಿವಾಸ   1971 ರಲ್ಲಿ ತೆರೆಕಂಡ ಚಿತ್ರ, ರಾಜಕುಮಾರ್ ಮತ್ತು ಜಯಂತಿಯವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಸುಮಾರು 17 ಚಿತ್ರಮಂದಿರ ಕು ಹೇಚ್ಚು ಮತ್ತು 700 ದಿನಗಳಿಗೂ ಹೆಚ್ಚು ದಿನಗಳಷ್ಟು ಪ್ರದರ್ಶನ ಕಂಡು ರಾಷ್ಟ್ರಪ್ರಶಸ್ತಿ ಪಡೆಯಿತು. ಬಂಗಾರದ ಮನುಷ್ಯ 1972 ರಲ್ಲಿ ತೆರೆಕಂಡ ಚಿತ್ರ ರಾಜಕುಮಾರ್ ಮತ್ತು ಭಾರತಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪಟ್ಟಣದಿಂದ ಹಳ್ಳಿಗೆ ಬಂದು ಬೇಸಾಯ ಮಾಡಿ ಬದುಕು ಕಟ್ಟಿಕೊಳ್ಳುವ ಒಬ್ಬ ಯುವ ರೈತನ ಪಾತ್ರದಲ್ಲಿ ಡಾ ರಾಜಕುಮಾರ್ ಅವರು ಮಿಂಚಿದ್ದರು. ಈ ಚಿತ್ರ ಸುಮಾರು ಎರಡು ವರ್ಷಗಳ ಕಾಲ ಪ್ರದರ್ಶನ ಕಂಡಿದೆ.

ನಾಗರಹಾವು 1972 ರಲ್ಲಿ ತೆರೆಕಂಡ ಚಿತ್ರ. ವಿಷ್ಣುವರ್ಧನ್ ಆರತಿಯವರು ನಟಿಸಿರುವ ಈ ಚಿತ್ರ ಪ್ರಪ್ರಥಮ ಬಾರಿಗೆ ಮೂರು ಚಿತ್ರಮಂದಿರಗಳಲ್ಲಿ 100 ದಿನಗಳನ್ನು ದಾಟಿದ ಚಿತ್ರ. ಪ್ರೇಮಲೋಕ 1987 ರಲ್ಲಿ ತೆರೆಕಂಡ ಚಿತ್ರ, ರವಿಚಂದ್ರನ್ ಮತ್ತು ಜೂಲಿ ಚಾವ್ಲಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಂಬರೀಶ್ ವಿಷ್ಣುವರ್ಧನ್ ಪ್ರಭಾಕರ್ ಅವರು ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಟನೆ ಜೊತೆಗೆ ನಿರ್ದೇಶನ ಮಾಡಿದ ಮೊದಲ ಚಿತ್ರ. ಪ್ರೇಮಲೋಕ ಕನ್ನಡದ ಎವರ್ಗ್ರೀನ್ ಚಿತ್ರ ಸುಮಾರು ಒಂದು ವರ್ಷಗಳ ಕಾಲ ಸತತವಾಗಿ ಪ್ರದರ್ಶನವನ್ನು ಕಂಡಿದೆ. ನಂಜುಂಡಿ ಕಲ್ಯಾಣ 1979 ರಲ್ಲಿ ತೆರೆಕಂಡ ಚಿತ್ರ ರಾಘವೇಂದ್ರ ರಾಜಕುಮಾರ್ ಮತ್ತು ಮಾಲಾಶ್ರೀ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪಾರ್ವತಮ್ಮ ರಾಜಕುಮಾರ್ ಅವರು ವಜ್ರೇಶ್ವರಿ ಕಂಬೈನ್ಸ್ ನ ಅಡಿಯಲ್ಲಿ ತಾವೇ ನಿರ್ಮಾಣ ಮಾಡಿದ ಚಿತ್ರ. ಈ ಚಿತ್ರ ಸುಮಾರು ಇನ್ನೂರು ದಿನಗಳಿಗೂ ಹೆಚ್ಚು ಪ್ರದರ್ಶನ ಕಂಡಿತು.

ಜೀವನ ಚೈತ್ರ, 1992 ರಲ್ಲಿ  ತೆರೆಕಂಡ ಚಿತ್ರ,
ಡಾಕ್ಟರ್ ರಾಜಕುಮಾರ್ ಮತ್ತು ಮಾಧವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಟನೆಯಿಂದ ಕೆಲ ಕಾಲ ವಿರಾಮ ತೆಗೆದುಕೊಂಡು ಮೂರು ವರ್ಷಗಳ ನಂತರ ಡಾಕ್ಟರ್ ರಾಜಕುಮಾರ್ ಅವರು ನಟಿಸಿದ ಈ ಚಿತ್ರ ಒಂದು ವರ್ಷಗಳ ಕಾಲ ಪ್ರದರ್ಶನ ಕಂಡಿತು. ಈ ಚಿತ್ರದ ನಾದಮಯ ಗೀತೆಗೆ ರಾಜಕುಮಾರ್ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರಕಿದೆ. ಓಂ 1995 ರಲ್ಲಿ ತೆರೆಕಂಡ ಚಿತ್ರ. ಶಿವರಾಜ್ಕುಮಾರ್ ಮತ್ತು ಪ್ರೇಮ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಸುಮಾರು 600 ಕಿಂತ  ಹೆಚ್ಚು ಭಾರಿ ಬಿಡುಗಡೆಯಾಗಿ ಲಿಂಕ ದಾಖಲೆ ಮಾಡಿದೆ. ಚಿತ್ರ ಬಿಡುಗಡೆಯಾದ 20 ವರ್ಷಗಳ ನಂತರ ಉದಯ ಟಿವಿ  ಚಿತ್ರದ ಸ್ಯಾಟಲೈಟ್ ಬೆಲೆಯನ್ನು 10 ಕೋಟಿಗೆ ತೆಗೆದುಕೊಂಡಿದೆ.

- Advertisement -

ಇನ್ನು ಇದೇ ತರಹ ಇನ್ನು ಮುಂತಾದ  ಕನ್ನಡದ ಬ್ಲಾಕ್ಬಸ್ಟರ್ ಮೂವಿ ಗಳಾದ ಮತ್ತು ಅತ್ಯಧಿಕ ದಿನ ಚಿತ್ರಮಂದಿರಗಳಲ್ಲಿ ತಮ್ಮ ಪ್ರದರ್ಶನವನ್ನು ಕೊಟ್ಟು ಹೆಸರುಗಳಿಸಿರುವ ಚಿತ್ರಗಳು ಇಲ್ಲಿವೆ, ಜನುಮದ ಜೋಡಿ, ಯಜಮಾನ ಕನ್ನಡದ ಬ್ಲಾಕ್ಬಸ್ಟರ್ ಮೂವಿ ಒಂದು ವರ್ಷಗಳ ಕಾಲ ಸತತವಾಗಿ ಹೊಡಿ ಯಶಸ್ಸನ್ನು ಕಂಡ ಚಿತ್ರ ಇದು. ಚಂದ್ರ ಚಕೋರಿ, ಕರಿಯ 2003 ರಲ್ಲಿ ತೆರೆಕಂಡ ಚಿತ್ರ ಪ್ರೇಮ್ ನಿರ್ದೇಶನದಲ್ಲಿ ದರ್ಶನ್ ನಾಯಕನಟನಾಗಿ ಅಭಿನಯ ಮಾಡಿದ್ದು ಭೂಗತಲೋಕದ ಕಥಾಹಂದರವುಳ್ಳ ಈ ಚಿತ್ರ 800 ದಿನಗಳ ಕಾಲ ಪ್ರದರ್ಶನ ನೀಡಿದೆ. ನಂತರ ಆಪ್ತಮಿತ್ರ, ಜೋಗಿ, ಮುಂಗಾರುಮಳೆ 2006 ರಲ್ಲಿ 2 ಕೋಟಿ ಬಜೆಟ್ ನಲ್ಲಿ ತಯಾರಾದ ಈ ಚಿತ್ರ 865 ಕ್ಕೂ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಂಡು 75 ಕೋಟಿ ಗಳಿಕೆ ಮಾಡಿತು. ಮಿಲನ 2007 ರಲ್ಲಿ ತೆರೆಕಂಡ ಚಿತ್ರ, 15 ಚಿತ್ರಮಂದಿರಗಳಲ್ಲಿ ಸುಮಾರು 200 ದಿನಗಳ ಕಾಲ ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದು, ಮಲ್ಟಿಪ್ಲೆಕ್ಸ್ ನಲ್ಲಿ 600 ದಿನಗಳ ಕಾಲಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದು ದಾಖಲೆ ಮಾಡಿರುವ ಚಿತ್ರ ಇದಾಗಿದೆ…

 

- Advertisement -
- Advertisement -

Latest News

ಜಮೀರ್ ಖಾನ್ ಒಬ್ಬ ಹುಚ್ಚ – ರಟಗಲ್ ಶ್ರೀಗಳು

ಬೀದರ - ಜಮೀರ ಖಾನ್ ಏನ್ ಮಾತನಾಡುತ್ತಾನೋ ಅವನಿಗೇ ತಿಳಿಯೋದಿಲ್ಲ ಆತ ಒಬ್ಬ ಹುಚ್ಚನಂತೆ ಇದ್ದಾನೆ ಅಂಥವನಿಗೆ ಸಿದ್ಧರಾಮಯ್ಯ ಬೆಂಬಲ ಕೊಡುತ್ತಿದ್ದಾರೆ ಎಂದು ರಟಗಲ್ ಶ್ರೀಗಳು...
- Advertisement -

More Articles Like This

- Advertisement -
close
error: Content is protected !!
Join WhatsApp Group