spot_img
spot_img

ಕರ್ನಾಟಕದ ಸಂಕ್ಷಿಪ್ತ ಮರಾಠ ಸಾಂಸ್ಕೃತಿಕ ಪರಂಪರೆ

Must Read

- Advertisement -

ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಸಂಶೋಧನಾತ್ಮಕ ಕಿರುಸಂಪುಟ

ಕರ್ನಾಟಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮರಾಠ ಸಮಾಜ ವಹಿಸಿರುವ ಪಾತ್ರ ಅವಿಸ್ಮರಣೀಯ. ಇತಿಹಾಸ ಕಾಲದಿಂದಲೂ ಮರಾಠ ರಾಜವಂಶಗಳು ಕರ್ನಾಟಕದ ಚರಿತ್ರೆಯನ್ನು ರೂಪಿಸುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. 1637ರಲ್ಲಿ  ಷಹಜಿಯು ಬೆಂಗಳೂರನ್ನು  ಜಹಗೀರನ್ನಾಗಿ ಪಡೆದ ಮೇಲೆ  ಕರ್ನಾಟಕದಲ್ಲಿ ಮರಾಠರ ರಾಜಕೀಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಆರಂಭವಾದವು.

ಷಹಜಿಯು ಬೆಂಗಳೂರಿನಿಂದ ಆಳ್ವಿಕೆಯನ್ನು ನಡೆಸುತ್ತಿದ್ದನು. ಬಾಲ್ಯದಲ್ಲಿ ಶಿವಾಜಿಯು ಬೆಂಗಳೂರಿನಲ್ಲಿಯೇ ಇದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪರಿಚಯವು ಇತ್ತು ಎಂಬುದು ನಮಗೆ ಅಭಿಮಾನದ ವಿಷಯ. ಷಹಜಿಯ ನಂತರ, ಶಿವಾಜಿ, ಸಂಭಾಜಿ, ಏಕೋಜಿ ಮೊದಲಾದವರು ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುಭಾಗಗಳ ಮೇಲೆ ಆಳ್ವಿಕೆ ನಡೆಸಿದರು. ಶಿವಾಜಿಯು ಕೆಳದಿಯ ಚೆನ್ನಮ್ಮಾಜಿಗೆ ನೆರವಾಗಿದ್ದನು. ಶಿವಾಜಿಯ ಮಗ ರಾಜಾರಾಮನಿಗೆ ಕೆಳದಿಯ ಚೆನ್ನಮ್ಮನು ರಕ್ಷಣೆಯನ್ನು ನೀಡಿದ್ದು ಐತಿಹಾಸಿಕ ಸತ್ಯ. ಮುಂದೆ ಕರ್ನಾಟಕ ಮೂಲಕ ಅನೇಕ ಮರಾಠ ರಾಜವಂಶಜರು, ಪರಾಕ್ರಮಿಗಳು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಭಾಗವಹಿಸಿ ತ್ಯಾಗ ಬಲಿದಾನಗೈದಿದ್ದಾರೆ.

- Advertisement -

ಸ್ವಾತಂತ್ರ್ಯಾನಂತರದಲ್ಲಿ  ಹಿರಿಯರೂ ಖ್ಯಾತನಾಮರೂ ಆದ ಮರಾಠ ಸಮುದಾಯದ ಮುಖಂಡರು ಕರ್ನಾಟಕವನ್ನೇ ತಮ್ಮ ತಾಯಿನಾಡೆಂದು ಭಾವಿಸಿ ಸಮೃದ್ಧ ಕರ್ನಾಟಕದ ನಿರ್ಮಾಣಕ್ಕೆ ರಾಜಕೀಯವಾಗಿ, ಸಾಂಸ್ಕೃತಿಕವಾಗಿ,  ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.

ಮರಾಠ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರವು ಮರಾಠ ಅಭಿವೃದ್ಧಿ ನಿಗಮವನ್ನು ರಚಿಸಿದ್ದು, ಹಿಂದುಳಿದ ಮರಾಠ ಸಮುದಾಯದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪುರೋಭಿವೃದ್ಧಿಯ ಬಗ್ಗೆ ನಿಗಮವು ಅನೇಕ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯಪ್ರವೃತ್ತವಾಗಿದೆ. ಮರಾಠ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತವು ಡಾ. ಪ್ರಕಾಶ್ ಆರ್. ಪಾಗೋಜಿರವರ ಪ್ರಧಾನ ಸಂಪಾದಕತ್ವದಲ್ಲಿ ಮತ್ತು ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶರವರು ಸಂಪಾದಕರಾಗಿ ವಿದ್ವಾಂಸರ ನೆರವಿನಿಂದ ಸಮಗ್ರ ಅಧ್ಯಯನ ನಡೆಸಿ, “ಕರ್ನಾಟಕದ ಸಂಕ್ಷಿಪ್ತ ಮರಾಠ ಸಾಂಸ್ಕೃತಿಕ ಪರಂಪರೆ” ಎಂಬ ಸಂಶೋಧನಾತ್ಮಕ ಕಿರು ಸಚಿತ್ರ ಸಂಪುಟವನ್ನು ಪ್ರಕಟಿಸುವ ಮೂಲಕ ಕರ್ನಾಟಕ ಮತ್ತು ಮರಾಠಿಗರ ಸಾಂಸ್ಕøತಿಕ ಬಾಂಧವ್ಯವು ಇನ್ನಷ್ಟು ಗಟ್ಟಿಯಾಗಿ ನೆಲೆಗೊಳ್ಳುವಲ್ಲಿ ಇದೊಂದು ಮೈಲಿಗಲ್ಲಾಗಲಿದೆ. 

        ಫೆ.19 ಸೋಮವಾರ ಛತ್ರಪತಿ ಶಿವಾಜಿಯವರ 394 ನೇ ಜಯಂತಿ ಅಂಗವಾಗಿ ಬೆಂಗಳೂರು ರವೀಂದ್ರಕಲಾಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ     ಇಲಾಖೆ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಜಂಟಿಯಾಗಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು  ಈ ಕಿರು ಸಂಪುಟವನ್ನು ಮತ್ತು ನಿಗಮದ ನೂತನ ಯೋಜನೆಗಳನ್ನು ಲೋಕಾರ್ಪಣೆಗೊಳಿಸುವರು. ಗೋಸಾಯಿ ಮಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ಸಚಿವ ಶಿವರಾಜ ತಂಗಡಗಿ ಹಾಗು ಸಮುದಾಯದ ಅನೇಕ ಗಣ್ಯಮಾನ್ಯರು ಉಪಸ್ಥಿತರಿರುವರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group