spot_img
spot_img

ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 88ನೇ ಅನ್ನದಾಸೋಹ

Must Read

- Advertisement -

‘ಅನ್ನದಾನವು ಶ್ರೇಷ್ಠ ದಾನವಾಗಿದೆ’ 

ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ 88ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು.

ಅತಿಥಿ ಮೂಡಲಗಿಯ ಪಶು ಸಂಗೋಪನಾ ಇಲಾಖೆಯ ತಾಲ್ಲೂಕಾ ಸಹಾಯಕ ನಿರ್ದೇಶಕ  ಡಾ. ಮೋಹನ ಕಮತ  ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ‘ಅನ್ನದಾನವು ಶ್ರೇಷ್ಠದಾನವಾಗಿದೆ, ಹಸಿದರವರಿಗೆ ಅನ್ನ ನೀಡುವುದು ಮಾನವೀಯತೆಯ ಪ್ರತೀಕವಾಗಿದೆ’ ಎಂದರು. 

- Advertisement -

ಲಯನ್ಸ್ ಕ್ಲಬ್‍ವು ಪ್ರತಿ ತಿಂಗಳದಲ್ಲಿ ಎರಡು ಬಾರಿ ರೋಗಿಗಳಿಗೆ ಅನ್ನದಾಸೋಹ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಇದು ಇತರ ಸಂಸ್ಥೆಗಳಿಗೆ ಮಾದರಿಯೆನಿಸಿದೆ ಎಂದರು.  

ಲಯನ್ಸ್ ಕ್ಲಬ್ ಸದಸ್ಯ ವೆಂಕಟೇಶ ಸೋನವಾಲಕರ ಅನ್ನದಾಸೋಹ ಸೇವೆ ಮಾಡಿದರು.  

ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀಶೈಲ ಲೋಕನ್ನವರ ಪ್ರಾಸ್ತಾವಿಕ ಮಾತನಾಡಿ, ಪ್ರತಿ ತಿಂಗಳು ಎರಡು ಬಾರಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಅನ್ನದಾಸೋಹವನ್ನು ಏರ್ಪಡಿಸಲಾಗುತ್ತಿದೆ ಎಂದರು. 

- Advertisement -

ಕಾರ್ಯದರ್ಶಿ ಸುಪ್ರೀತ ಸೋನವಾಲಕರ, ಸಂಜಯ ಮೋಕಾಶಿ ಪ್ರಾಸ್ತಾವಿಕ ಮಾತನಾಡಿದರು. 

400ಕ್ಕೂ ಅಧಿಕ ಸಂಖ್ಯೆಯಲ್ಲಿ ಆಸ್ಪತ್ರೆಯ ಆರೋಗ್ಯ ತಪಾಸಣೆ ಬಂದಿದ್ದ ಸಾರ್ವಜನಿಕರು ಮತ್ತು ಅವರ ಸಂಬಂಧಿಕರು ಅನ್ನದಾಸೋಹದಲ್ಲಿ ಭಾಗಹಿಸಿದ್ದರು.

ಸುಪ್ರೀತ ಸೋನವಾಲಕರ, ಸಂಜಯ ಮೋಕಾಶಿ, ಮಹಾಂತೇಶ ಹೊಸೂರ, ಶಿವಶಂಕರ ಶಾಬನ್ನವರ, ಸುರೇಶ ಆದಪ್ಪಗೋಳ, ಬಾಳಗೌಡ ಪಾಟೀಲ, ಶಿವರುದ್ರಪ್ಪ ಮಿಲ್ಲಾನಟ್ಟಿ ಮತ್ತಿತರರು ಇದ್ದರು.

- Advertisement -
- Advertisement -

Latest News

ವಾಹನ ಸವಾರರಿಗೆ ಬೆಲೆ ಏರಿಕೆ ಬರೆ – ಈರಣ್ಣ ಕಡಾಡಿ

ಮೂಡಲಗಿ:ಲೋಕಸಭಾ ಚುನಾವಣೆ ನಂತರ ರಾಜ್ಯದ ವಾಹನ ಸವಾರರಿಗೆ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ 3 ರೂ, ಡೀಸೆಲ್ 3.50 ರೂ. ಏರಿಸುವ ಮೂಲಕ ಗ್ಯಾರಂಟಿ ಬರೆ ನೀಡಿದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group