spot_img
spot_img

ಹಾಲುಮತ ಸಮಾಜ ಶೈಕ್ಷಣಿಕವಾಗಿ ಮುಂದುವರಿಯುತ್ತಲಿದೆ – ಈರಣ್ಣ ಕಡಾಡಿ

Must Read

- Advertisement -

ಮೂಡಲಗಿ: ಹಾಲುಮತ ಸಮಾಜ ಸಂಗೋಳ್ಳಿ ರಾಯಣ್ಣನಂತಹ ತ್ಯಾಗ ಬಲಿದಾನ ಮತ್ತು ಪರಾಕ್ರಮಗಳಿಗೆ ಹೆಸರು ವಾಸಿಯಾದ ಮಹಾಪುರುಷರ ಹಿನ್ನೆಲೆ ಹೊಂದಿದ ಹಾಗೂ ಪ್ರಾಮಾಣಿಕತೆ ಮತ್ತು ನಂಬಿಕೆಗೆ ಹೆಸರುವಾಸಿಯಾದ ಸಮಾಜ. ಇಂತಹ ಸಮಾಜದ ಮುಖಂಡರ ಪರಿಶ್ರಮದಿಂದ ಕೌಜಲಗಿ ಗ್ರಾಮದಲ್ಲಿ ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿ ಶ್ರೀ ವಿಠ್ಠಲ ಬೀರದೇವರ ಮಂದಿರ ಕಟ್ಟಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹಾಲುಮತದ ಸಮಾಜದ ಕಾರ್ಯವನ್ನು ಕೊಂಡಾಡಿದರು.

2021-22ನೇ ಸಾಲಿನ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅರಭಾವಿ ಮತಕ್ಷೇತ್ರದ ಕೌಜಲಗಿ ಗ್ರಾಮದ ಶ್ರೀ ವಿಠ್ಠಲ ಬೀರದೇವರ ಮಂದಿರದ ಹತ್ತಿರ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಹಾಲುಮತ ಸಮಾಜದ ಯುವಕರು ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ಕಾರಣದಿಂದ ಸಮಾಜ ಇವತ್ತು ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಿದೆ. ಈ ರೀತಿಯಾದ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಹಾಲು ಮತ ಸಮಾಜ ತಾಲೂಕಿನಲ್ಲಿ ಒಂದು ಮಾದರಿಯಾಗಿದೆ ಎಂದರು.

ಶ್ರೀ ವಿಠ್ಠಲ ದೇವಋಷಿಗಳು ಸಾನ್ನಿಧ್ಯ ವಹಿಸಿದ್ದರು. ಸಿದ್ದಪ್ಪ ಬಿಸಗುಪ್ಪಿ. ಅಡಿವೆಪ್ಪ ದಳವಾಯಿ. ಶಿವಾನಂದ ಲೋಕನ್ನವರ, ಲಚ್ಚಪ್ಪ ದುಳಪನವರ, ಬಸವರಾಜ ಲೋಕನ್ನವರ, ಅಶೋಕ ಶಿವಾಪುರ, ತಮ್ಮಣ್ಣ ದೇವರ, ವೆಂಕಟೇಶ ದಳವಾಯಿ, ಪರಶುರಾಮ ಹಳ್ಳೂರ, ಈರಪಣ್ಣ ಬಿಸಗುಪ್ಪಿ, ಸಿದ್ದಪ್ಪ ಹಳ್ಳೂರ, ಗೋಪಾಲ ಮಿಸಿ, ಸಿದ್ದಪ್ಪ ಹುಚ್ಚಡಿ, ಜಗದೀಶ ದಳವಾಯಿ, ಯಲ್ಲಪ್ಪ ದಾನನ್ನವರ, ಶೇಖರ ಮೂಡಲಗಿ, ಚಂದ್ರು ದೂಳಪ್ಪನವರ, ಭೀಮಪ್ಪ ಲಗಳಿ, ಲಕ್ಷ್ಮಣ್ ಹೊಸಮನಿ, ಪುಂಡಲೀಕ ಹೊಸಮನಿ ಮತ್ತು ವಿಠ್ಠಲ ದೇವರ ಕಮೀಟಿಯ ಎಲ್ಲಾ ಸರ್ವ ಸದಸ್ಯರು ಹಾಗೂ ಕೌಜಲಗಿ ಮತ್ತು ಸುತ್ತ ಮುತ್ತಲಿನ ಗ್ರಾಮದ ಹಿರಿಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group