spot_img
spot_img

ರಾಮನ್ ರನ್ನು ಹಾಗೂ ವಿಜ್ಞಾನಿಗಳನ್ನು ಗೌರವಿಸುವ ದಿನ

Must Read

- Advertisement -

ಮೂಡಲಗಿ: ಫೆ.28 ಅನ್ನೋದು ರಾಮನ್ ಎಫೆಕ್ಟ್ ಪ್ರಕಟವಾದ ದಿನ. ಬೆಳಕಿನ ಪ್ರತಿಫಲನದ ಕುರಿತು ಬೆಂಗಳೂರಿನ ಪ್ರೊ.ಸಿ.ವಿ. ರಾಮನ್ ನಡೆಸಿದ ಆ ಸಂಶೋಧನೆಗೆ ರಾಮನ್ ಎಫೆಕ್ಟ್ ಎಂತಲೇ ಜಾಗತಿಕ ಖ್ಯಾತಿ ಬಂದಿದೆ ಅಷ್ಟೇ ಅಲ್ಲ, ದೇಶದ ಪ್ರಗತಿಯಲ್ಲಿ ವಿಜ್ಞಾನದ ಪಾತ್ರ ಮಹತ್ವದಾಗಿದ್ದು, ವಿಜ್ಞಾನದ ಮೊದಲ ನೊಬೆಲ್ ಪ್ರಶಸ್ತಿಯನ್ನೂ ತಂದು ಕೊಟ್ಟ ಸರ್ ಸಿ.ವಿ.ರಾಮನ್ ಅವರ ಸ್ಮರಣೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಮೂಡಲಗಿ ಶ್ರೀನಿವಾಸ ಶಾಲೆಯ ಪ್ರಾಚಾರ್ಯ ಮನೋಜ ಭಟ್ಟ ಹೇಳಿದರು.

ಸೋಮವಾರ ಪಟ್ಟಣದ ಶ್ರೀನಿವಾಸ ಸಿಬಿಎಸ್‍ಇ ಶಾಲೆಯಲ್ಲಿ ಜರುಗಿದ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ಉಪಕರಣ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ವೈಜ್ಞಾನಿಕ ಮನೋಭಾವ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿರಬೇಕು ಎಂಬ ಅಂಶವನ್ನು ನಾವು ಬಾರತೀಯರು ನಮ್ಮ ಸಂವಿಧಾನದಲ್ಲೇ ಅಳವಡಿಸಿಕೊಂಡಿದ್ದೇವೆ. ಫೆಬ್ರುವರಿ 28 ಆ ಮಹತ್ವದ ಸಂಶೋಧನೆ ಪ್ರಕಟವಾದ ದಿನ. ಹಾಗಾಗಿ ರಾಮನ್ನರನ್ನು ಮತ್ತು ವಿಜ್ಞಾನವನ್ನು ಗೌರವಿಸಬೇಕಾದ ದಿನ ಎಂದರು.

ನಮ್ಮ ಎಲ್ಲ ವಿಜ್ಞಾನಿಗಳ ಸಾಧನೆಗಳಿಗೆ ಕೃತಜ್ಞತೆಗಳು ಸಲ್ಲಿಸುವ ಜೊತೆಗೆ ಯುವ ವಿಜ್ಞಾನಿಗಳಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ನಮ್ಮ ವಿಜ್ಞಾನಿಗಳು ನಮ್ಮ ಹೆಮ್ಮೆ ಎಂದರು.

- Advertisement -

ನಮ್ಮಲ್ಲಿ ವೈಜ್ಞಾನಿಕ ಶೋಧ ಬುದ್ಧಿ, ಇಲ್ಲದೇ ಇದ್ದಿದ್ದರೆ ನಾವೂ ಇತರ ಪ್ರಾಣಿಗಳ ಹಾಗೆ ಗುಹೆಯಲ್ಲೊ ಮರದ ಪೊಟರೆಯಲ್ಲೊ, ಬಂಡೆಗಳ ಸಂದುಗಳಲ್ಲೊ ಚಳಿಗೆ ಮಳೆಗೆ, ರೋಗರುಜಿನಗಳಿಗೆ ತುತ್ತಾಗುತ್ತ ಹೇಗೋ ಬದುಕುತ್ತಿದ್ದೆವು. ಆಧುನಿಕ ವಿಜ್ಞಾನ ನಮಗೆ ಹೇಗೆಲ್ಲ ಸಹಾಯ ಮಾಡಿದೆ ಅನ್ನೋದನ್ನು ಸ್ಮರಣೆ ಮಾಡಿಕೊಳ್ಳಬೇಕಾಗಿದೆ ಎಂದರು.

ವಿಜ್ಞಾನ ದಿನನಾಚರಣೆಯ ಅಂಗವಾಗಿ ಶಾಲೆಯ ಮೂರ ರಿಂದ ಒಂಬತ್ತನೇ ವರ್ಗದ ಸುಮಾರು 150 ವಿದ್ಯಾರ್ಥಿಗಳಿಂದ ಜರುಗಿದ ವಿಜ್ಞಾನ ಉಪಕರಣ ಮತ್ತು ವಸ್ತು ಪ್ರದರ್ಶನದಲ್ಲಿ ಜಲಚಕ್ರ, ಸೌರಮಂಡಲ. ಸೌರ ವಿದ್ಯುತ್, ಗಾಳಿ ಶಕ್ತಿ, ಜಲ ಮಾಲಿನ್ಯ ಮತ್ತು ಶುದ್ಧಿಕರಣ, ವಾಯು ಮಾಲಿನ್ಯ ಪರಿಣಾಮಗಳು, ಹಸಿರು-ಉಸಿರು, ಮರುಬಳಕೆ ಮಾಡಬಹುದಾದ ಇಂಧನಗಳು, ಬೆಳಕಿನ ಪ್ರತಿಫಲನ, ಸಸ್ಯದ ಭಾಗಗಳು, ಜೀರ್ಣಕ್ರಿಯೆ. ಶ್ವಾಸಾಂಗವ್ಯೂಹ,ಮೆದುಳು ಕಣ್ಣು, ಹೃದಯ, ಕೃತಕ ಉಪಗ್ರಹ, ಸ್ಯಾನಿಟೈಸರ್ ಮಶೀನ್ ಪ್ರದರ್ಶನ ಗಮನಸೆಳೆದವು.

ಶಿಕ್ಷಕ-ಶಿಕ್ಷಕಿಯರು ಸರ್ ಸಿ.ವಿ.ರಾಮನ್ ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ನಮನಗಳನ್ನು ಸಲ್ಲಿಸಿದರು.

- Advertisement -

ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ವೆಂಕಟೇಶ ಪಾಟೀಲ, ವಿಜ್ಞಾನ ಶಿಕ್ಷಕಿಯರಾದ ವಿದ್ಯಾ ಹೆಗಡೆ, ದೀಪಾ ಅರಿಬೆಂಚಿ, ಪ್ರೇಮಾ ದಿನಕರ, ಅಖಿಲಾ ಕೊಡಿಯಾ ಮತ್ತು ಶಿಕ್ಷಕಿಯರು, ಪಾಲಕರು ಹಾಗೂ ವಿದ್ಯಾರ್ಥಿಗಳು ಮತ್ತಿತರು ಉಪಸ್ಥಿತರಿದ್ದರು.

- Advertisement -
- Advertisement -

Latest News

“ಅಪ್ನಾದೇಶ” ಬೆಳೆದು ಬಂದ ಹಿನ್ನೆಲೆ

೨೦೧೧ ರಲ್ಲಿ ಧಾರವಾಡದಲ್ಲಿ “ಅಪ್ನಾದೇಶ” ಎಂಬ ಸಂಘಟನೆ ಜನ್ಮ ತಾಳಿತು.ಇದಕ್ಕೆ ಸ್ಪೂರ್ತಿ ಅಂದಿನ ಐ.ಎ.ಎಸ್. ಅಧಿಕಾರಿ ಭರತಲಾಲ್ ಮೀನಾ. ಶಿಕ್ಷಕರು, ಸಮಾಜ ಚಿಂತಕರು, ನ್ಯಾಯವಾದಿಗಳು, ವಿವಿಧ...
- Advertisement -

More Articles Like This

- Advertisement -
close
error: Content is protected !!
Join WhatsApp Group