spot_img
spot_img

ಮಕ್ಕಳಿಗಾಗಿ ಪ್ರೇರಣಾ ಕಾರ್ಯಾಗಾರ

Must Read

- Advertisement -

ದುಗುಡಕ್ಕೆ ಒಳಗಾಗದೇ ಪರೀಕ್ಷೆ ಎದುರಿಸಿ – ಬಿಇಓ ಮನ್ನಿಕೇರಿ

ಮೂಡಲಗಿ: ಶೈಕ್ಷಣಿಕ ಬದುಕಿಗೆ ಭದ್ರ ಬುನಾದಿ ಹಾಕುವ ಬದುಕಿನ ದಿಕ್ಸೂಚಿಯಾಗಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಗಳಾಗಿವೆ. ಮೂರು ಗಂಟೆಗಳಲ್ಲಿ ನಿಮ್ಮ ಸಾಮರ್ಥ್ಯ ಪರೀಕ್ಷಿಸುವ ಸಮಯ ಬಂದಿರುವದರಿoದ ಯಾವುದೇ ಒತ್ತಡ, ಆತಂಕ, ದುಗುಡ ದುಮ್ಮಾನಗಳಿಗೆ ಒಳಗಾಗದೆ ಹಿತ ಮಿತ ಆಹಾರ, ವೈಯಕ್ತಿಕ ಆರೋಗ್ಯ ಮತ್ತು ಸ್ವಚ್ಛತೆಯ ಕಡೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.

ಅವರು ಪಟ್ಟಣದ ಶ್ರೀ ಈರಣ್ಣ ದೇವಸ್ಥಾನದ ಕೆ.ಎಚ್ ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಜರುಗಿದ ಶೈಕ್ಷಣಿಕ ವಲಯದ ಪ್ರತಿಭಾವಂತ ಮಕ್ಕಳಿಗೆ ಶ್ರೇಷ್ಠ ಅಂಕ ಗಳಿಕೆಗಾಗಿ ಪ್ರೇರಣಾ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. 

- Advertisement -

ಮೂಡಲಗಿ ಶೈಕ್ಷಣಿಕ ವಲಯವು ಶಿಕ್ಷಣದ ಪ್ರತಿಯೊಂದು ಕಾರ್ಯಚಟುವಟಿಕೆಗಳಲ್ಲಿ ಯಶಸ್ವಿಯಾಗಲು ಸಾಧ್ಯವಾಗಿದೆ. ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಗಮವಾಗಿ ಸಾಗುವ ನಿಟ್ಟಿನಲ್ಲಿ ಶಾಲಾ ಹಂತದಲ್ಲಿ ಸಂಪನ್ಮೂಲ ಶಿಕ್ಷಕರ ಬಳಕೆ, ವಿದ್ಯಾರ್ಥಿಗಳಿಗೆ ವಿಷಯ ಉಜಳನೆ, ೩೯ ತಜ್ಞ ಶಿಕ್ಷಕರಿಂದ ಮಕ್ಕಳಿಗೆ ವಿಷಯ ಮನವರಿಕೆ, ತಾಲೂಕಿನ ಎಲ್ಲ ಪ್ರೌಢ ಶಾಲೆಗಳಿಗೆ ೨ ಹಂತದ ತಂಡ ಭೇಟಿ, ಪ್ರಗತಿ ಪರಿಶೀಲನೆ, ರೇಡಿಯೋ ಪಾಠ ಪುನರ್ಮನನ, ೧೦ ನೇ ತರಗತಿ ಮಕ್ಕಳಿಗೆ ಶಾಲೆಗಳಲ್ಲಿಯೇ ವಸತಿ ಸಹಿತ ವಿಷಯಗಳ ಅಧ್ಯಯನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ತಾಯಂದಿರ ಸಭೆ, ದೀರ್ಘ ಉತ್ತರ, ವಿಷಯಾಧಾರಿತ ಕ್ವಿಜ್, ಚಿತ್ರ ಬರೆ-ಸೂತ್ರ ಕಾರ್ಯಕ್ರಮ, ಸಾಮಾಜಿಕ ಜಾಲತಾಣಗಳ ಮೂಲಕ ವಲಯದ ೮೪ ಪ್ರೌಢ ಶಾಲಾ ವಿದ್ಯಾರ್ಥಿಗಳೊಂದಿಗೆ ಏಕಕಾಲದಲ್ಲಿ ಸಂವಹನ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಮಕ್ಕಳಿಗೆ ಪರೀಕ್ಷಾ ಭಯ ಹಾಗೂ ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶೈಕ್ಷಣಿಕ ವರ್ಷದ ಆರಂಭದಿಂದ ಕಾರ್ಯಗಳನ್ನು ಮಾಡುತ್ತ ಬಂದಿರುವುದಾಗಿ ತಿಳಿಸಿದರು. 

- Advertisement -

ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ ಚಿನ್ನನ್ನವರ ಮಾತನಾಡಿ, ಮೂಡಲಗಿ ವಲಯವು ಶೈಕ್ಷಣಿಕವಾಗಿ ಪ್ರತಿ ವರ್ಷವು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಲು ಪ್ರಮುಖ ಕಾರಣ ಇಲ್ಲಿಯ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಹಾಗೂ ಶೈಕ್ಷಣಿಕ ಕಾಳಜಿಯುಳ್ಳ ಗುರು ಬಳಗದ ಸೇವಾ ಕಾರ್ಯ ಮೆಚ್ಚುವಂತಹುದು.

ಮೂಡಲಗಿ ಶೈಕ್ಷಣಿಕ ವಲಯದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೬೨೫ ಕ್ಕೆ ೬೨೫ ಪೂರ್ಣ ಪ್ರಮಾಣದ ಅಂಕ ಪಡೆಯುತ್ತೇವೆಂದು ಸ್ವಯಂ ಪ್ರೇರಿತರಾಗಿ ಈ ಕಾರ್ಯಾಗಾರದಲ್ಲಿ ಭಾಗವಹಿಸಿರುವದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಸ್ಥಳೀಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಶೈಕ್ಷಣಿಕ ಕಾಳಜಿ ಹಾಗೂ ಇಚ್ಛಾಶಕ್ತಿ ಮೆಚ್ಚುವಂತಹದು. ಗ್ರಾಮೀಣ, ಬಡತನ ಹಾಗೂ ಇನ್ನೂ ಅನೇಕ ಕೊರತೆಗಳ ಮಧ್ಯೆ ಇದ್ದು ಶೈಕ್ಷಣಿಕವಾಗಿ ತಮ್ಮ ಪ್ರತಿಭೆಗೆ ಒಳ್ಳೆಯ ಅವಕಾಶ ಪಡೆದುಕೊಂಡು ತಮ್ಮ ಭವಿಷ್ಯ ಉಜ್ವಲಗೊಳಿಸಬೇಕು ಎಂದು ನುಡಿದರು.

ಕಾರ್ಯಾಗಾರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ತಾಲೂಕಾ ನೋಡಲ್ ಅಧಿಕಾರಿ ಸತೀಶ ಬಿ.ಎಸ್, ವಿಶೇಷ ಸಂಪನ್ಮೂಲ ಶಿಕ್ಷಕರಾಗಿ ಅರುಣ ಆಗೇರ, ಈರಣ್ಣ ನುಚ್ಚುಂಡಿ, ಗಡಾದ, ರಾಷ್ಟ್ರಮಟ್ಟದ ಯುವ ಸಂಸತ್ತಿನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಶುಭಂ ವಾನನ್ನವರ, ಪ್ರಕಾಶ ಕುರಬೇಟ,  ಹಾಗೂ ಮೂಡಲಗಿ ವಲಯದ ಎಲ್ಲ ಪ್ರೌಢ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

- Advertisement -
- Advertisement -

Latest News

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group