spot_img
spot_img

ರೂ.500 ಕ್ಕೆ ಕೊಲೆಯೊಂದು ನಡೆದು ಹೋಯಿತು

Must Read

spot_img

ವರ್ಷದ ಹಿಂದಿನ ಪ್ರಕರಣ ಭೇದಿಸಿದ ಬೀದರ ಪೊಲೀಸರು

ಬೀದರ: ಕಲಿಯುಗದಲ್ಲಿ ಬರ್ತಾ ಬರ್ತಾ ಕೊಲೆ ಅಂದರೆ ಈರುಳ್ಳಿ ಕತ್ತರಿಸಿದ ಹಾಗೆ ಆಗುತ್ತಿದೆಯೇನೋ ಎಂಬಂತಾಗಿದ್ದು ಕೇವಲ ಐದು ನೂರು ರೂಪಾಯಿಗೆ ವ್ಯಕ್ತಿಯೊಬ್ಬನ್ಙು ಭೀಕರವಾಗಿ ಕೊಲೆ ಮಾಡಿದ ಪ್ರಕರಣವನ್ನು ಬೀದರ ಪೊಲೀಸರು ಭೇದಿಸಿದ್ದಾರೆ. 

ಕಳೆದ ವರ್ಷ ಬೀದರ ನಲ್ಲಿ ಒಬ್ಬ ವ್ಯಕ್ತಿ ನೇಣುಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂಬಂತೆ ಬಿಂಬಿಸಲು ಹೊರಟ ಕೊಲೆ ಮಾಡಿದವರು. ಆದರೆ ಬೀದರ ಪೊಲೀಸರು ಚಾಣಕ್ಯ ನೀತಿ ನಿಯಮಗಳನ್ನು ಅನುಸರಿಸಿ ಎಸ್ ಪಿ ಚನ್ನಬಸವ ಲಂಗೋಟಿ ಅವರ ನೇತೃತ್ವದಲ್ಲಿ ಒಂದು ತಂಡ ರೆಡಿ ಮಾಡಿ ಡಿವೈಸ್ ಪಿ ಸತೀಶ್ ಒಳಗೊಂಡ ತಂಡ ತನಿಖೆಗೆ ಇಳಿದು ಸತ್ಯಾಸತ್ಯತೆಯನ್ನು ಹೊರಗೆ ಹಾಕಿದ್ದಾರೆ.

ಐದು ನೂರು ರೂಪಾಯಿ ಗೋಸ್ಕರ ಜಗಳ ಕೊಲೆ ಯಲ್ಲಿ ಅಂತ್ಯ:

ದಿ. 02/11/2021 ರಂದು ನಗರದ ಯಲ್ಲಾಲಿಂಗ ಕಾಲೋನಿಯಲ್ಲಿ ಹೊನ್ನಳಿಯ ನಿವಾಸಿಯಾದ  ಗಣೇಶ ತಂದೆ ಬಾಬುರಾವ್ ಮೂಲಗೆ  ಅವರ ಜೊತೆ  ಆರೋಪಿಗಳು ಕೇವಲ 500 ರೂಪಾಯಿ ಗಳಿಗಾಗಿ ಜಗಳ ಮಾಡಿಕೊಂಡಿದ್ದರು. ಮಾತಿಗೆ ಮಾತು ಬೆಳೆದು ಜಗಳ ಕೊಲೆಯಲ್ಲಿ ಮುಕ್ತಾಯವಾದಾಗ ಆರೋಪಿಗಳು ಶವವನ್ನು ಫ್ಯಾನಿಗೆ ನೇಣುಹಾಕಿ ಮೇಲ್ನೋಟಕ್ಕೆ ಅದು ಆತ್ಮಹತ್ಯೆ  ಎಂದು ಪೋಲಿಸರು ನಂಬುವಂತೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.

ಬಲೆ ಬೀಸಿದ ಬೀದರ ಸಬ್ ಡಿವಿಜನ್ ಡಿವೈಎಸ್ಪಿ ಯಾದ ಸತೀಶ ಮತ್ತು ಸಬ್ ಇನ್ಸ್ಪೆಕ್ಟರ್ ರಾದ ವೆಂಕಟೇಶ ಬಲೆಗೆ ಸಿಕ್ಕಿಬಿದ್ದ ನಾಲ್ಕು ಆರೋಪಿಗಳನ್ನು ಇಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರದ ಪೋಲಿಸ್ ಅಧೀಕ್ಷಕರ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೋಲಿಸ್ ವರಿಷ್ಠ ರಾದ ಚನ್ನಬಸವ ಲಂಗೋಟಿ ಅವರು ತಿಳಿಸಿದರು.

ಪೊಲೀಸರು  ಆತ್ಮಹತ್ಯೆ ಎಂದು ದಾಖಲೆ ಮಾಡಿಕೊಂಡ ಅನುಮಾನಾಸ್ಪದ ಕೇಸನ್ನು ಕೊಲೆಯೆಂದು ಪರಿಗಣಿಸಿ ಸ್ವಲ್ಪಕಾಲ ತಡಮಾಡಿ ಯಾದರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿಗಳ ಕಾರ್ಯಕ್ಕೆ ಮಚ್ಚುಗೆ ವ್ಯಕ್ತಪಡಿಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ...
- Advertisement -

More Articles Like This

- Advertisement -
close
error: Content is protected !!