ಸಿಂದಗಿ: ತಮ್ಮ ಶಾಲೆಯಲ್ಲಿ ಇರುವಂತಹ ಕುಂದು ಕೊರತೆಗಳು, ಬಾಲ್ಯವಿವಾಹ, ಮಕ್ಕಳ ಶಿಕ್ಷಣ, ವಸತಿ ನಿಲಯ, ವಿದ್ಯುತ್ ವ್ಯವಸ್ಥೆ, ಅಂಗನವಾಡಿ ಕೇಂದ್ರ ಸಮಸ್ಯೆಗಳನ್ನು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದು ಮೂಲಭೂತ ಸೌಕರ್ಯಗಳನ್ನು ಹಾಗೂ ಈ ಮೇಲೆ ತಿಳಿಸಿದ ವ್ಯವಸ್ಥೆಗಳನ್ನು ಪಡೆದುಕೊಳ್ಳುವುದು ಎಂದು ಸಂಗಮ ಸಂಸ್ಥೆ ಕಾರ್ಯಕ್ರಮದ ಸಂಯೋಜಕರಾದ ವಿಜಯ ಬಂಟನೂರ ಹೇಳಿದರು.
ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ ಹಾಗೂ ಗ್ರಾಮ ಪಂಚಾಯತ್ ಚಾಂದಕವಠೆ ಇವರ ಸಂಯುಕ್ತ ಆಶ್ರಯದಲ್ಲಿ ನ 5 ರಂದು ಚಾಂದಕವಠೆ ಗ್ರಾಮದಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆ ಹಮ್ಮಿಕೊಳ್ಳಲಾಯಿತ್ತು.
ವಿಶೇಷ ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳು ಇಟ್ಟ ಬೇಡಿಕೆಗಳು:
ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಶೌಚಾಲಯ, ಆಟದ ಸಾಮಾನುಗಳು ಹಾಗೂ ಆಟದ ಮೈದಾನ. ಸರಕಾರಿ ಗಂಡು ಮಕ್ಕಳ ಶಾಲೆಯ ಬೇಡಿಕೆಗಳು ಶೌಚಾಲಯ, ಬೆಂಚ್‍ಗಳು, ಶಾಲೆಗೆ ಕಿಟಕಿಗಳು, ನೀರಿನ ವ್ಯವಸ್ಥೆ, ಆಟದ ಮೈದಾನ ಹಾಗೂ ವಿದ್ಯುತ್‍ಶಕ್ತಿ. ಸರಕಾರಿ ಉರ್ದು ಶಾಲೆಯ ಮಕ್ಕಳ ಬೇಡಿಕೆಗಳು ಶಾಲಾ ಕೋಣೆಗಳು, ಆಟದ ಮೈದಾನ, ಶುದ್ಧ ಕುಡಿಯುವ ನೀರು ಹಾಗೂ ಬಿಸಿ ಊಟದ ಕೋಣೆ.
ಗ್ರಾಮ ಪಂಚಾಯತಿ ಅಬಿವೃದ್ಧಿ ಅಧಿಕಾರಿಗಳಾದ ಸುಜಾತ ನಾಯ್ಕೋಡಿ ಮಾತನಾಡಿ ಮಕ್ಕಳು ಮಂಡಿಸಿದ ಬೇಡಿಕೆಗಳನ್ನು ಈ ಶೈಕ್ಷಣಿಕ ವರ್ಷದ ಅಂತಿಮದೊಳಗೆ ಪೂರೈಸುವುದಾಗಿ ತಿಳಿಸಿದರು.
ಸಭೆಯಲ್ಲಿ ಸಂಗಮ ಸಂಸ್ಥೆ ಕಾರ್ಯಕರ್ತರು ರಾಜೀವ ಕುರಿಮನಿ ನಿರೂಪಣೆ ಮಾಡಿದರು ಸರಕಾರಿ ಉರ್ದು ಶಾಲೆಯ ಶಿಕ್ಷಕರಾದ ಕಾನಗೊಡರವರು ಸ್ವಾಗತಿಸಿದರು, ಸರಕಾರಿ ಗಂಡು ಮಕ್ಕಳ ಶಾಲೆ ಶಿಕ್ಷಕ ಹಾಳಕೇರಿಯವರು ವಂದಿಸಿದರು. ಸಂಗಮ ಸಂಸ್ಥೆಯ ಬ್ರದರ್ ನೊಯಲ್ ಹಾಜರಿದ್ದರು