spot_img
spot_img

ಏ.9 ರಂದು ಕು.ಲಾವಣ್ಯ  ಜಮಖಂಡಿ ಭರತನಾಟ್ಯ ರಂಗಪ್ರವೇಶ

Must Read

- Advertisement -

ಉದಯೋನ್ಮುಖ ಪ್ರತಿಭೆ ಕು. ಲಾವಣ್ಯ  ಜಮಖಂಡಿ ಭರತನಾಟ್ಯ ರಂಗಪ್ರವೇಶವನ್ನು ಇದೇ ಏಪ್ರಿಲ್ 9 ಭಾನುವಾರ ಸಂಜೆ 5.00ಕ್ಕೆ ನಗರದ  ಮಲ್ಲೇಶ್ವರಂ 16ನೇ ಅಡ್ಡರಸ್ತೆಯ ಚೌಡಯ್ಯ ಸ್ಮಾರಕ ಭವನದ ಹಿಂಬದಿಯ ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಲಾಯೋಗಿ ಗುರು ಪುಲಕೇಶಿ ಕಸ್ತೂರಿರವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿರುವ ಕು. ಲಾವಣ್ಯ ಜಮಖಂಡಿರವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಷಿ, ಕೈತಕಿ ನಾಟ್ಯ ವಾಹಿನಿಯ ನಿರ್ದೇಶಕಿ ಮಾಲಾ ಶಶಿಕಾಂತ, ಸಂಸ್ಕೃತ ವಿದ್ವಾಂಸ ಡಾ.ಗುರುರಾಜಾಚಾರ್ಯ ನಿಪ್ಪಾಣಿ, ಶಾಂತಲ ಆರ್ಟ್ಸ್‍ ನ ಅಧ್ಯಕ್ಷೆ ಪ್ರೊ. ಎಂ.ಆರ್.ಕಮಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.

- Advertisement -

ವಿದ್ವಾನ್ ರೋಹಿತ್ ಭಟ್ ಉಪ್ಪೂರು ರವರ ಗಾಯನ , ವಿದ್ವಾನ್ ಪಿ.ಜರ್ನಾಧನ ರಾವ್ ಮೃದಂಗ , ವಿ.ನಿತೀಶ್ ಅಮಣ್ಣಯ್ಯರವರ ವೇಣುವಾದನ , ವಿ.ಪ್ರಾದೇಶ್ ಆಚಾರ್ ವಯೋಲಿನ್, ವಿ.ಲಕ್ಷ್ಮೀನಾರಾಯಣ ರಿದಂಪ್ಯಾಡ್‍ನಲ್ಲಿ ಸಾಥ್ ನೀಡಲಿದ್ದಾರೆ. ಸುಗ್ಗನಹಳ್ಳಿ ಷಡಕ್ಷರಿರವರ ನಿರೂಪಣೆಯಲ್ಲಿ ವೈವಿಧ್ಯಮಯ ರಸಪ್ರಸಂಗಗಳನ್ನು ಆಸ್ವಾದಿಸಲು ಕಲಾಭಿಮಾನಿಗಳು ಆಗಮಿಸಲು ಆಯೋಜಕರು ಕೋರಿದ್ದಾರೆ.

ಕಿರುಪರಿಚಯ :

ಭರವಸೆಯ ನಾಟ್ಯಪ್ರವೀಣೆ ಲಾವಣ್ಯ ಜಮಖಂಡಿ

- Advertisement -

ಶ್ರೀಮತಿ ಕವಿತಾ ಮತ್ತು ಶ್ರೀ ವಿಷ್ಣುತೀರ್ಥ ಜಮಖಂಡಿ ರವರ ಪುತ್ರಿ ಕುಮಾರಿ ಲಾವಣ್ಯ, ಆರನೇ ವಯಸ್ಸಿನಲ್ಲಿ ಗುರು ಶ್ರೀಮತಿ ಶಮಾಕೃಷ್ಣ ಅವರಲ್ಲಿ ಭರತನಾಟ್ಯದಲ್ಲಿ ಆರಂಭಿಕ ತರಬೇತಿಯನ್ನು ಪ್ರಾರಂಭಿಸಿದರು. ಕಳೆದ 14 ವರ್ಷಗಳಿಂದ ಶಾಂತಲಾ ಕಲಾ ಅಕಾಡೆಮಿಯಲ್ಲಿ ಗುರು ಪುಲಿಕೇಶಿ ಕಸ್ತೂರಿಯವರ ಮಾರ್ಗದರ್ಶನದಲ್ಲಿ ಕಲಿಯುತ್ತಿದ್ದಾರೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸಿದ ಭರತನಾಟ್ಯದಲ್ಲಿ ಜೂನಿಯರ್, ಸೀನಿಯರ್ ಮತ್ತು ಪ್ರಿ-ವಿದ್ವತ್ ಪರೀಕ್ಷೆಗಳನ್ನು ಮತ್ತು ಕರ್ನಾಟಕ ಸಂಗೀತದಲ್ಲಿ ಜೂನಿಯರ್ ಪರೀಕ್ಷೆಯನ್ನು ಲಾವಣ್ಯ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಗುರು ಪುಲಿಕೇಶಿ ಕಸ್ತೂರಿಯವರ ಮಾರ್ಗದರ್ಶನದಲ್ಲಿ ಲಾವಣ್ಯ ಅವರು ಚೆನ್ನೈನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗಳು, ಓಪನ್ ಸ್ಟ್ರೀಟ್ ಫೆಸ್ಟಿವಲ್-ಬೆಂಗಳೂರು, ಯಡಿಯೂರಿನಲ್ಲಿ ಸಹಸ್ರ ದೀಪೋತ್ಸವ, ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮ ಶತಮಾನೋತ್ಸವ, ಶಾಂತಲಾ ತ್ರಿಂಶತ್ ಉತ್ಸವ, ಬೆಂಗಳೂರಿನ ಶೆರಾಟನ್‍ನಲ್ಲಿ ಇಸ್ರೋ ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮ , ಹುಬ್ಬಳ್ಳಿಯಲ್ಲಿ ನಿರ್ಮಲಾ ಸೀತಾರಾಮನ್ ಉದ್ಘಾಟಸಿದ ರಾಷ್ಟ್ರೀಯ ತೆರಿಗೆ ದಿನಾಚರಣೆಯಂತಹ ವಿವಿಧ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ಲಾವಣ್ಯ ಶಾಂತಲಾ ಆರ್ಟ್ಸ್  ಅಕಾಡೆಮಿಯ ದಶಾವತಾರ, ಆಳ್ವಾರ್ ದರ್ಶನ, ಸಮುದ್ರ ಮಥನ, ಶಾಲಿವಾಹನ ಮುಂತಾದ ವಿವಿಧ ನೃತ್ಯ ನಿರ್ಮಾಣಗಳ ಭಾಗವಾಗಿದ್ದಾರೆ.

ಅವರು ಜೂನ್ 2019 ರಲ್ಲಿ ತಮ್ಮ ‘ಗೆಜ್ಜೆ ಪೂಜೆ’ಯನ್ನು ಪೂರೈಸಿ,
ಎಸ್‍ಎಸ್‍ಎಲ್‍ಸಿಯಲ್ಲಿ ಶೇ.91 , ಪಿಯುಸಿಯಲ್ಲಿ ಶೇ.96 ಅಂಕ ಗಳಿಸಿದ್ದಾರೆ. ಅವರು ಎಂಇಎಸ್ ಪದವಿ ಕಾಲೇಜಿನಲ್ಲಿ ಡಿಸ್ಟಿಂಕ್ಷನ್‍ನೊಂದಿಗೆ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಕಂಪನಿ ಕಾರ್ಯದರ್ಶಿ (ಅ) ಪರೀಕ್ಷೆಗಳ ಫೌಂಡೇಶನ್ ಮತ್ತು ಎಕ್ಸಿಕ್ಯೂಟಿವ್ ಹಂತವನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ, ಅವರು ಕಂಪನಿ ಕಾರ್ಯದರ್ಶಿ ಕೋರ್ಸ್‍ನ ವೃತ್ತಿಪರ (ಅಂತಿಮ) ಹಂತವನ್ನು ಅಭ್ಯಸಿಸುತ್ತಿದ್ದಾರೆ.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group