spot_img
spot_img

ಶಿಕ್ಷಕ ಆರೋಗ್ಯಕರ ಸಮಾಜದ ಹಿತಚಿಂತಕ: ಹಾಸಿಂಪೀರ ವಾಲಿಕಾರ

Must Read

spot_img
- Advertisement -

ಸಿಂದಗಿ: ಆರೋಗ್ಯಕರ, ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಅದಕ್ಕೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ. ಒಬ್ಬ ಆದರ್ಶ ಶಿಕ್ಷಕ ಸಾವಿರಾರು ವಿದ್ಯಾರ್ಥಿಗಳ ಬಾಳ ದೀವಿಗೆಯಾಗಿ ವಿದ್ಯಾರ್ಥಿಗಳ ಯಶಸ್ವಿನ ಪ್ರತಿಬಿಂಬವಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ಪಟ್ಟಣದ ಜ್ಞಾನ ಭಾರತಿ ಪ್ರೌಢ ಶಾಲೆಯಲ್ಲಿ ನಬಿರೊಷನ್ ಪ್ರಕಾಶನ ಬೋರಗಿ ವತಿಯಿಂದ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ, ಆದರ್ಶ ಶಿಕ್ಷಕ ಸೇವಾ ಪುರಸ್ಕಾರ ಹಾಗೂ ಕವಿಗೋಷ್ಠಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ದೇಶದ ಮತ್ತು ಮಕ್ಕಳ ಸರ್ವಮಗೀಣ ಉನ್ನತಿಗೆ ಶಿಕ್ಷಕರೇ ಮೂಲ ಆಧಾರ ಸ್ತಂಭವಾಗಿದ್ದಾರೆ. ಭಾರತ ಪ್ರಜ್ವಲಿಸುತ್ತಿದೆ ಎಂದರೆ ಅದಕ್ಕೆ ಕಾರಣ ಶಿಕ್ಷಕರ ಪರಿಣಾಮಕಾರಿ ಬೋಧನೆ ಎಂದರು.

ಕಸಾಪ ನಿಕಟ ಪೂರ್ವ ಅಧ್ಯಕ್ಷ ಸಿದ್ದಲಿಂಗ ಚೌಧರಿ, ವರದಿಗಾರ ಪ್ರೊ. ಸಿದ್ಧಲಿಂಗ ಕಿಣಗಿ, ನಬಿರೋಷನ್ ಪ್ರಕಾಶನದ ಸಂಚಾಲಕ ಆರಕ್ಷಕ ಮೌಲಾಲಿ ಕೆ. ಆಲಗೂರ ಮಾತನಾಡಿದರು.

- Advertisement -

ವೈದ್ಯ, ಸಾಹಿತಿ ಡಾ.ಸಮೀರ ಹಾದಿಮನಿ, ಡಾ|| ಜ್ಯೋತಿ ಆರ್. ಪೂಜಾರಿ, ಅಪ್ಪಾಜಿ ಶಿಕ್ಷಣ ಸಂಸ್ಥೆಯ ಬಾಪುಗೌಡ ಪಾಟೀಲ್, ಎಲೈಟ್ ಕಾಲೇಜಿನ ಮಹಿಬೂಬ ಅಸಂತಾಪುರ ಮಾತನಾಡಿದರು. ಇದೇ ವೇಳೆ ಬಾಗಲಕೋಟೆಯ ಉಪನ್ಯಾಸಕ ಶಿವು ಎಂ.ಬಿಂಗಿ,  ಮುಖ್ಯೋಪಾಧ್ಯಾಯ ಜಗನ್ನಾಥ ಸಿ. ಪಾಟೀಲ್, ಅಪ್ಪಾಜಿ ಶಿಕ್ಷಣ ಸಂಸ್ಥೆಯ ಬಾಪುಗೌಡ ಎಂ.ಪಾಟೀಲ್, ಕುರಬತಹಳ್ಳಿ ಶಿಕ್ಷಕ ಕುದರತ್ ಅಲಿ ಡಿ.ಭೂಸನೂರ, ಜಾಲವಾದ ಶಿಕ್ಷಕ ಅಪ್ಪಾಸಾಹೇಬ ಎ.ಕರಿಕಬ್ಬಿ, ಹೊಸಕೆರಾ ಶಿಕ್ಷಕ ಚಂದ್ರಶೇಖರ ಎಂ.ದುದ್ದಣಗಿ, ಬೆಳಗಾವಿಯ ದೈಹಿಕ ಶಿಕ್ಷಕ ಧರೆಪ್ಪ ನವಲು ಬಾಳಿಗೇರಿ, ರಾಮನಹಳ್ಳಿ ಶಿಕ್ಷಕ ಮುಜಾಮಿಲ್, ಗಣಿಹಾರದ ದೈಹಿಕ ಶಿಕ್ಷಕ, ಎಸ್.ಎ, ಸಾಹೇಬಪಟೇಲ ರು. ಮಾಲಿಪಟೇಲ, ಉಪನ್ಯಾಸಕ ಮಹಿಬೂಬ ಅಸಂತಾಪುರ ಇವರಿಗೆ ಆದರ್ಶ ಶಿಕ್ಷಕ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ ಉಪನ್ಯಾಸಕಿ ಡಾ. ಜ್ಯೋತಿ ಆರ್. ಪೂಜಾರ, ಉಪನ್ಯಾಸ ಮಹಾಂತೇಶ ನೂಲನವರ, ಪ್ರಾಧ್ಯಾಪಕ ವೆಂಕಟೇಶ ಮುಧೋಳ, ಹಾಗೂ ಗುಬ್ಬೆವಾಡ ಗ್ರಾಮ ಪಂಚಾಯತನ ನೂತನ ಅಧ್ಯಕ್ಷರ ಪ್ರತಿನಿಧಿ ನಿತ್ಯಾನಂದ ಕಟ್ಟಿಮನಿ ಇವರು ಸನ್ಮಾನಿ ಗೌರವಿಸಲಾಯಿತು. 

ಬಸವರಾಜ ಅಗಸರ, ಶಿವಕುಮಾರ ಶಿವಸಿಂಪಿಗೆರ, ರುಕ್ಮಿಣಿ ಮಡಿವಾಳ, ಸುಧಾ ಬಿರಾದಾರ, ಸಬಿಯಾ ಮರ್ತೂರ, ರಿಜ್ವಾನ ಜೆರಟಗಿ,  ವಿಶಾಲಕ್ಷಿ ಕಾಳೆ, ಪಾರ್ವತಿ ಸೊನ್ನದ ಸೇರಿದಂತೆ ಹಲವು ಕವಿಗಳು ತಮ್ಮ ಕವನ ವಾಚನ ಮಾಡಿದರು. 

ವೇದಿಕೆ ಮೇಲೆ ರಾಂಪೂರ ಆರೂಢ ಮಠದ ನಿತ್ಯಾನಂದ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು, ಜ್ಞಾನ ಭಾರತಿ ಶಾಲೆಯ ಅಧ್ಯಕ್ಷ ಸತೀಶ ಹಿರೇಮಠ, ನಬಿ ಆಲಗೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರೀತಿ ನಾರಾಯಣಪುರ ಸ್ವಾಗತಿಸಿದರು, ಲಕ್ಷ್ಮೀ ಹೊಸಮನಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group