spot_img
spot_img

ಸಾಹಿತ್ಯ ಮನಸ್ಸಿಗೆ ನೆಮ್ಮದಿ ನೀಡುವ ಸಾಧನ – ಚಂದ್ರಕಾಂತ ಗುರಪ್ಪ ಬೆಲ್ಲದ

Must Read

- Advertisement -

ಬೈಲಹೊಂಗಲ: ಉತ್ತಮ ಸಾಹಿತ್ಯವನ್ನು ಓದುವುದರಿಂದ ಹೃದಯ ವಿಸ್ತಾರಗೊಳ್ಳುವುದಲ್ಲದೇ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಗುರಪ್ಪ ಬೆಲ್ಲದ ಹೇಳಿದರು.

ಬೈಲಹೊಂಗಲ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಟ್ಟಣದ ಶ್ರೀ ಶಿವಬಸವ ಮಹಾಸ್ವಾಮಿಗಳ ಕಲ್ಯಾಣ ಮಂಟಪದಲ್ಲಿ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಫಕೀರನಾಯ್ಕ ದುಂಡಪ್ಪ ಗಡ್ಡಿಗೌಡರ ಅವರ ‘ತಲ್ಲಣಗಳ ನಡುವೆ ನೆಮ್ಮದಿಯ ಹುಡುಕಾಟ’, ‘ಪ್ರೇಮ ಪರ್ವ’, ‘ವಚನ ಭಾಸ್ಕರ’ ಹಾಗೂ ‘ವಾಸ್ತವದ ಹತ್ತಿರ’ ಎಂಬ ನಾಲ್ಕು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಬೈಲಹೊಂಗಲದ ಶಾಖಾ ಮೂರು ಸಾವಿರ ಮಠದ ಪರಮ ಪೂಜ್ಯ ಶ್ರೀ ಮ.ನಿ.ಪ್ರ. ಪ್ರಭು ನೀಲಕಂಠ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಸಾಹಿತ್ಯ ಮತ್ತು ಸಂಸ್ಕೃತಿ ಬದುಕಿನ ಅವಿಭಾಜ್ಯ ಅಂಗಗಳಾದಾಗ ಸಾರ್ಥಕತೆ ದೊರೆಯುತ್ತದೆ ಎಂದು ಹೇಳಿದರು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ ಮಾತನಾಡಿ, ಸಂಶೋಧನಾ ಪ್ರವೃತ್ತಿಯನ್ನು ಮೈಗೂಡಿಸಿಕೊಂಡ ಗಡ್ಡಿಗೌಡರ ಅವರ ಸಂವೇದನಾಶೀಲತೆ ಅವರ ಕಾವ್ಯದಲ್ಲಿ ಮೂಡಿಬಂದಿದೆ ಎಂದು ಹೇಳಿದರು. ಡಾ. ಎಫ್.ಡಿ. ಗಡ್ಡಿಗೌಡರ ಪ್ರಸ್ತಾವಿಕವಾಗಿ ಮಾತನಾಡಿ ನನ್ನ ಅಂತರಾಳದೊಳಗೆ ಸದಾ ಜಾಗೃತನಾಗಿರುವ ಒಬ್ಬ ಕವಿ ಪ್ರೀತಿಯಿಂದ ಕೈಹಿಡಿದು ಸ್ಪೂರ್ತಿ ತುಂಬಿ ಬರೆಯುವಂತೆ ಪ್ರೇರೇಪಿಸುತ್ತಾನೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೈಲಹೊಂಗಲ ಶಾಸಕರಾದ ಮಹಾಂತೇಶ ಎಸ್. ಕೌಜಲಗಿ ಮಾತನಾಡಿ, ತನ್ನ ಭಾವನೆಗಳನ್ನು ಓದುಗರಿಗೆ ತಲುಪಿಸುವ ಕಾಯಕದಲ್ಲಿಯೇ ಕವಿಗೆ ಆತ್ಮತೃಪ್ತಿ ದೊರೆಯುತ್ತದೆ ಎಂದರು.

- Advertisement -

ಕಿತ್ತೂರು ಶಾಸಕರಾದ ಮಹಾಂತೇಶ ಬ. ದೊಡಗೌಡರ ಮಾತನಾಡಿ, ಗಡ್ಡಿಗೌಡರ ಅವರು ಒಂದೇ ಸಾರಿ ನಾಲ್ಕು ಕೃತಿಗಳನ್ನು ಹೊರತಂದಿರುವುದು ಅವರ ಸಾಹಿತ್ಯ ಪ್ರತಿಭೆಯನ್ನು ಎತ್ತಿ ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಲಪ್ರಭಾ-ಘಟಪ್ರಭಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ವಿಶ್ವನಾಥ ಈ. ಪಾಟೀಲ ಮಾತನಾಡಿ, ಅತ್ಯಂತ ಮೌಲಿಕ ಕೃತಿಗಳಲ್ಲಿ ಬದುಕಿನ ವಾಸ್ತವ ಅಂಶಗಳನ್ನು ಎತ್ತಿ ತೋರಿಸುವ ಕವಿತೆಗಳು ಬಹಳ ಅರ್ಥಪೂರ್ಣವಾಗಿವೆ ಎಂದರು.

ಖ್ಯಾತ ಚಲನಚಿತ್ರ ನಟ-ನಿರ್ಮಾಪಕರಾದ ಶಿವರಂಜನ ಬೋಳಣ್ಣವರ ಮಾತನಾಡಿ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಉತ್ತಮ ಕೆಲಸಗಳು ನಡೆಯುತ್ತಿದ್ದು ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಧಾರವಾಡ ರಂಗಾಯಣದ ನಿರ್ದೇಶಕರಾದ ರಮೇಶ ಎಸ್.ಪರವೀನಾಯ್ಕರ ಮಾತನಾಡಿ, ಕೆಳದಿ ಚನ್ನಮ್ಮನ ವಂಶಸ್ಥರಾದ ಡಾ. ಎಫ್.ಡಿ.ಗಡ್ಡಿಗೌಡರ ಅವರ ಸಾಹಿತ್ಯ ಸೇವೆ ನಿತ್ಯ ನಿರಂತರವಾಗಿ ಸಾಗಲಿ ಎಂದು ಶುಭ ಕೋರಿದರು.

ಹಾವೇರಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಅಶೋಕ ಗಡ್ಡಿಗೌಡರ ಮಾತನಾಡಿ, ಬದುಕಿನ ದಟ್ಟ ಅನುಭವಗಳು ಹಾಗೂ ಹೋರಾಟದ ಹೆಜ್ಜೆಗಳನ್ನು ಕಾವ್ಯ ಪ್ರತಿಬಿಂಬಿಸುತ್ತದೆ ಎಂದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಳಗಾವಿ ಜಿಲ್ಲಾಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ ಲೋಕಾರ್ಪಣೆಗೊಂಡ ಕೃತಿಗಳಲ್ಲಿ ಮಾನವೀಯ ಮೌಲ್ಯಗಳು ತುಂಬಿವೆ ಎಂದರು. ಬೈಲಹೊಂಗಲದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಬಿ.ಕೆ.ಮದವಾಲ ಮಾತನಾಡಿ, ಬೋಧನೆಯೊಂದಿಗೆ ಸಾಹಿತ್ಯ ಕೃಷಿಯಲ್ಲಿಯೂ ಸೈ ಎನಿಸಿಕೊಂಡ ಗಡ್ಡಿಗೌಡರ ಅವರು ನಮ್ಮ ಕಾಲೇಜಿನ ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿದರು. ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರಾಜಶೇಖರ ಬಿರಾದಾರ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಪ್ರೇಮಕ್ಕಾ ಅಂಗಡಿ ಕೃತಿಗಳ ಪರಿಚಯ ಮಾಡಿಕೊಟ್ಟರು.

ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ಮಾರ್ಗದರ್ಶಕ ಮಂಡಳಿಯ ಸದಸ್ಯರಾದ ಎಸ್.ಡಿ.ಗಂಗಣ್ಣವರ, ಬಿ.ಕೆ.ತಲ್ಲೂರ, ಗೌರವ ಕಾರ್ಯದರ್ಶಿಗಳಾದ ಪ್ರಕಾಶ ಮೆಳವಂಕಿ, ಮಂಜುಳಾ ಶೆಟ್ಟರ, ಗೌರವ ಕೋಶಾಧ್ಯಕ್ಷರಾದ ಮಹೇಶ ಕೋಟಗಿ, ಸದಸ್ಯರಾದ ಸಂತೋಷ ಹಡಪದ, ಶಶಿಕಲಾ ಯಲಿಗಾರ, ಹಿರಿಯರಾದ ದುಂಡಪ್ಪ ಗಡ್ಡಿಗೌಡರ, ಸಾವಿತ್ರಿ ಗಡ್ಡಿಗೌಡರ, ತಮ್ಮನಗೌಡ ಪಾಟೀಲ, ಶಿವಲೀಲಾ ಪಾಟೀಲ, ಹಿರಿಯ ನ್ಯಾಯವಾದಿಗಳಾದ ಬಿ.ಆರ್.ಅಲಸಂದಿ, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ವೀರನಗೌಡ ಪಾಟೀಲ, ವಿಜಯ ಸೋಶಿಯಲ್ ಕ್ಲಬ್ ಅಧ್ಯಕ್ಷರಾದ ಬಿ.ಎಸ್.ಕಿವಡಸಣ್ಣವರ, ನಾಗನಗೌಡ ಪಾಟೀಲ, ಮಹಾಬಳೇಶ್ವರ ಬೋಳಣ್ಣವರ, ಮಹಾಂತೇಶ ಬೋಳಣ್ಣವರ, ಈಶ್ವರ ಕೊಪ್ಪದ, ಪ್ರಕಾಶ ಮಾವಿನಕಟ್ಟಿ, ಬಸವರಾಜ ಮಾವಿನಕಟ್ಟಿ, ಶಂಕರಗೌಡ ಗೌಡರ, ಈರಪ್ಪ ತಳವಾರ, ಫಕೀರಪ್ಪ ಅಮ್ಮವಗೋಳ, ಬಸನಗೌಡ ಪಾಟೀಲ, ಸಿದ್ಧನಾಯ್ಕ ಭಾವಿ, ಸಕ್ಕರನಾಯ್ಕ ಪಾಟೀಲ ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕುಮಾರಿ ಅನುರಾಧಾ ಜಗದೀಶ ಬಾಗನವರ, ಕುಮಾರಿ ಅಶ್ವಿನಿ ಜಗದೀಶ ಬಾಗನವರ, ಹಾರ್ಮೋನಿಯಂ ವಾದಕ ಮಂಜುನಾಥ ಸುಣಗಾರ (ತೇರದಾಳ), ತಬಲಾ ವಾದಕ ಬಸವರಾಜ ಗಜೇಂದ್ರಗಡ ವಚನ ಗಾಯನ ನಡೆಸಿಕೊಟ್ಟರು. ಕುಮಾರ ಕಡೇಮನಿ ನಾಡಗೀತೆ ಹಾಡಿದರು. ಚಂದ್ರಶೇಖರ ಕೊಪ್ಪದ ಪ್ರಾರ್ಥಿಸಿದರು. ಕಸಾಪ ತಾಲೂಕಾಧ್ಯಕ್ಷ ಎನ್.ಆರ್.ಠಕ್ಕಾಯಿ ಸ್ವಾಗತಿಸಿದರು. ರಾಜು ಹಕ್ಕಿ ನಿರೂಪಿಸಿದರು. ಲಕ್ಷ್ಮೀ ಮುಗಡ್ಲಿಮಠ ವಂದಿಸಿದರು.

- Advertisement -
- Advertisement -

Latest News

ಬಡವರ ಮನೆ ಊಟ ಚಂದ ಸ್ಥಿತಿವಂತರ ಮನೇಲಿ ಆಟ ಚಂದ ಆದರೂ ಯಾರ ನೆಮ್ಮದಿ ಎಲ್ಲಿ ಅಡಗಿದೆಯೋ ಬಲ್ಲವರಾರು?

ಅಮ್ಮ ನಿನಗ್ ಎಷ್ಟ ಸಲ ಹೇಳಿದಿನಿ ಪಕ್ಕದ ಮನೆಗೆ ಹೋಗಬೇಡಾ ಅಂತ.ನಿನಗೆ ಬೇಜಾರಾದ್ರೆ ಟಿವಿ ನೋಡು,ನಿದ್ದೆ ಮಾಡು, ಬೇಕಿದ್ರೆ ಮನೇಲೆ ಭಜನೆ, ದೇವರ ನಾಮಸ್ಮರಣೆ ಇಂತದ್ದೇನೋ...
- Advertisement -

More Articles Like This

- Advertisement -
close
error: Content is protected !!
Join WhatsApp Group