ಲಿಂಗಾಯತ ಸಂಘಟನೆಯಿಂದ ವಾರದ ಪ್ರಾರ್ಥನೆ

Must Read

ಬೆಳಗಾವಿ – ಲಿಂಗಾಯತ ಸಂಘಟನೆ ಬೆಳಗಾವಿ ಇದರ ಆಶ್ರಯದಲ್ಲಿ ವಾರದ ಪ್ರಾರ್ಥನೆಯು ವಚನ ಪಿತಾಮಹ ಪ.ಭು. ಹಳಕಟ್ಟಿಯವರ ಸಭಾಭವನದಲ್ಲಿ ಜರುಗಿತು.

ಉಪನ್ಯಾಸಕರಾಗಿ ಆಗಮಿಸಿದ ಸುನಂದಾ ಎಮ್ಮಿ ಯವರು ಮಾತನಾಡುತ್ತಾ, ಒನಕೆ ಓಬವ್ವನ ಸಾಹಸವನ್ನು ಹಾಗೂ ಚಿತ್ರ ದುರ್ಗ ದ ಕೋಟೆಯೋಳಗೆ ಟಿಪ್ಪು ಸೈನಿಕರ ನುಸುಳಿಕೆಯನ್ನುನೋಡಿ, ಕಾವಲು ಗಾರನಾದ ಗಂಡ ಊಟ ಮಾಡುವ ಸಂದರ್ಭದಲ್ಲಿ ಸೈನ್ಯ ನುಸುಳುವುದನ್ನು ಕಂಡು ಕೋಟೆಯ ಕಿಂಡಿಯಿಂದ ನುಗ್ಗುವ ಟಿಪ್ಪು ಸೈನಿಕರನ್ನು ಒನಕೆಯಿಂದ ಪ್ರತಿಯೊಬ್ಬ ಸೈನಿಕನನ್ನು ಸಾಯಿಸುತ್ತಾ ಹೆಣಗಳ ರಾಶಿ ಮಾಡಿದಳು.

ಊಟ ಮಾಡಿ ಬಂದ ಗಂಡ ಇದನ್ನು ನೋಡಿ, ಆಶ್ಚರ್ಯ ಚಕಿತನಾದನು. ದೊರೆ ಮದಕರಿನಾಯಕನಿಗೆ ಈ ವಿಷಯ ತಿಳಿಸಿದ ಓಬವ್ವನ ಸಾಹಸಕ್ಕೆ ಮೆಚ್ಚಿ ನಾಯಕರು ಬಳುವಳಿಯಾಗಿ ಒಂದು ಊರಿನ ಜಮೀನನ್ನು ಬಿಟ್ಟಕೊಟ್ಟದ್ದು ಇತಿಹಾಸ ಅಂಥ ವೀರ ಮಹಿಳೆಯ ಸಾಹಸ ಸಮಯ ಪ್ರಜ್ಞೆ ನಮ್ಮಲ್ಲಿ ಬೆಳೆಯಲಿ ಎಂದು ತಿಳಿಸಿದರು.

ಸಭೆಯಲ್ಲಿ ಲಿಂಗಾಯತ ಸಂಘಟನೆ ಅಧ್ಯಕ್ಷರಾದ ಈರಣ್ಣ ದೆಯಣ್ಣವರ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಗಳಾದ ಎಂ.ವ್ಯೆ ಮೆಣಸಿನಕಾಯಿ, ಅಕ್ಕಮಹಾದೇವಿ ತೆಗ್ಗಿ, ಬಿ. ಬಿ. ಮಠಪತಿ, ಡಾ. ಅಡಿವೆಪ್ಪ ಇಟಗಿ, ವಿ.ಕೆ. ಪಾಟೀಲ, ಸದಾಶಿವ ದೇವರಮನಿ,ಭಾಗಿಯಾಗಿದ್ದರು. ಸಂಗಮೇಶ ಅರಳಿ ಸ್ವಾಗತಿಸಿದರು, , ಮಹಾದೇವಿ ಅರಳಿ ವಚನ ಪ್ರಾರ್ಥನೆ ಸಲ್ಲಿಸಿದರು,ಸುರೇಶ ನರಗುಂದ ನಿರೂಪಿಸಿದರು,ವಚನ ಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group