ಮಲ್ಲಕಂಬ ಕ್ರೀಡೆಯಲ್ಲಿ ಸಾಧನೆ

Must Read

ಮೂಡಲಗಿ: ಪಟ್ಟಣದ ಸೆಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯ 3 ನೇ ತರಗತಿಯ ವಿದ್ಯಾರ್ಥಿ ಶಿವಪ್ರಸಾದ ಕಡಾಡಿ ಗದಗ ಜಿಲ್ಲೆಯ ನೀಲಗುಂದದಲ್ಲಿ ಜರುಗಿದ 20 ನೇಯ ರಾಜ್ಯ ಮಟ್ಟದ ಮಲ್ಲಕಂಬ ಕ್ರೀಡಾ ಕೂಟದಲ್ಲಿ 12 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ 3 ನೇ ಸ್ಥಾನ ಪಡೆದು ಆಂಧ್ರಪ್ರದೇಶದ ವಿಜಯವಾಡದಲ್ಲಿ ಜರುಗುವ ರಾಷ್ಷ್ರ ಮಟ್ಟದ ಮಲ್ಲಕಂಬ ಕ್ರೀಡಾಕೂಟಕ್ಕೆ  ಆಯ್ಕೆಯಾಗಿರುವುದಾಗಿ ಸಂಸ್ಥೆಯ ಅಧ್ಯಕ್ಷ ಡ್ಯಾನಿಯಲ್ ಸರ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗೆ ಚೈತನ್ಯ ಆಶ್ರಮ ವಸತಿ ಶಾಲೆಯ ಮಲ್ಲಕಂಬ ಯೋಗ ಶಿಕ್ಷಕ ಮೆಹಬೂಬ ಬಂಡಿವಾಡ ತರಬೇತಿ ನೀಡಿದ್ದಾರೆ. ಬಿಇಒ ಅಜೀತ ಮನ್ನಿಕೇರಿ, ಪ್ರಧಾನಗುರು ಐ.ಎಚ್ ಶೇಖ ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕ ಸಮೂಹ ವಿದ್ಯಾರ್ಥಿಯ ಯೋಗ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group