ನಟ ಹಿತೇಶ್ ಹಿರೇಮಠ ಗೆ ಸನ್ಮಾನ

0
463

ಸಿಂದಗಿ: ಶನಿವಾರ ಬೆಳಗ್ಗೆ ಸಿಂದಗಿಯ ಖ್ಯಾತ ವಕೀಲರಾದ ಎನ್ ಎಸ್ ಹಿರೇಮಠ ಅವರ ಪುತ್ರ ಹಾಗೂ ‘ಮೃತ್ಯುಂಜಯ’ ಚಿತ್ರದ ನಟ ಹಿತೇಶ್ ಎನ್ ಹಿರೇಮಠ ಅವರಿಗೆ ಸಿಂದಗಿಯಲ್ಲಿ ಚಿತ್ರ ಕಲಾವಿದವರು ಸನ್ಮಾನಿಸಿದರು.

ನಂತರ ಮಾತನಾಡಿದ ಯುವ ನಟ ಹಿತೇಶ್ “ಮೃತ್ಯುಂಜಯ” ಚಿತ್ರಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೆಂಬಲ ಬೇಕು. ಅತೀ ಶೀಘ್ರದಲ್ಲೇ ಚಿತ್ರ ಬಿಡುಗಡೆಯಾಗಲಿದ್ದು ಎಲ್ಲರೂ ಚಿತ್ರ ಮಂದಿರಕ್ಕೆ ಬಂದು ನನ್ನ ಸಿನಿಮಾ ನೋಡಬೇಕು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ‘ರತ್ನನ್ ಪ್ರಪಂಚ’ ಚಿತ್ರದ ಪ್ರಮುಖ ನಟ ಯಶವಂತ್ ಕುಚಬಾಳ, ನಟ ವಿಶ್ವಪ್ರಕಾಶ ಮಲಗೊಂಡ, ನಾಗರಾಜ್ ಸಂಗಮ, ಆಸೀಫ್ ಗುಂದಗಿ, ಕೆಎಸ್ ಟಿ ಕಾನ್ಸ್ಟೇಬಲ್ ಈರಣ್ಣ ಎಸ್ ಎಚ್ ಉಪಸ್ಥಿತರಿದ್ದರು.