ಸಿಂದಗಿ: ಸಿಂದಗಿ ತಾಲೂಕನ್ನು ವಿಭಜನೆ ಮಾಡಿದಾಗ ಸಿಂದಗಿಯಿಂದ ಕೇವಲ 12 ಕಿ.ಮೀ ದೂರವಿರುವ ಗಬಸಾವಳಗಿ ಗ್ರಾಮವನ್ನು ಸುಮಾರು 40 ಕಿ.ಮೀ ದೂರವಿರುವ ಆಲಮೇಲ ತಾಲೂಕಿಗೆ ಸೇರಿಸಿದ್ದು ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಸ್ಥರಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ ಎಂದು ಪತ್ರಕರ್ತ ಮಲ್ಲಿಕಾರ್ಜುನ್ ಹಿರೇಮಠ ಹೇಳಿದರು.
ನಿಯೋಜಿತ ತಾಲೂಕಿನ ಗಬಸಾವಳಗಿಯಲ್ಲಿ ಹೋರಾಟ ವೇದಿಕೆಯ ಸದಸ್ಯರು ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿ, ಎರಡೂ ಗ್ರಾಮಸ್ಥರು ಪ್ರತಿದಿನ ತಮ್ಮ ವ್ಯವಹಾರಗಳಿಗಾಗಿ ಹಾಗೂ ಸರ್ಕಾರಿ ಕೆಲಸಗಳಿಗಾಗಿ ಸಿಂದಗಿಯನ್ನೇ ಅವಲಂಬಿಸಿದ್ದಾರೆ. ಒಂದು ವೇಳೆ ಆಲಮೇಲ ತಾಲೂಕಿನಲ್ಲಿಯೇ ಮುಂದುವರಿಸಿದ್ದೇ ಆದರೆ, ಗ್ರಾಮಸ್ಥರು ದಿನನಿತ್ಯ ಪರದಾಡುವಂತಾಗುತ್ತದೆ. ಈ ಗ್ರಾಮಗಳನ್ನು ಸಿಂದಗಿ ತಾಲೂಕಿಗೆ ಮರು ಸೇರ್ಪಡೆ ಮಾಡಬೇಕೆಂದು ತಾಲೂಕು ಆಡಳಿತ ಹಾಗೂ ಶಾಸಕರಲ್ಲಿ ಮನವಿ ಮಾಡಿದರು.
ಈ ಬಗ್ಗೆ ಕಳೆದ 2019ರ ನವೆಂಬರ್‍ನಲ್ಲಿಯೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು ಆದರೆ ಅದಕ್ಕೆ ಯಾವುದೇ ಸ್ಪಂದನೆ ಸಿಗದ ಕಾರಣ ಗಬಸಾವಳಗಿ, ಬಿಸನಾಳ ಗ್ರಾಮಗಳನ್ನು ಆಲಮೇಲಕ್ಕೆ ಸೇರಿಸಿದ್ದು ಅವೈಜ್ಞಾನಿಕವಾಗಿದೆ. ಅದೇ ರೀತಿ ಆಲಮೆಲ ತಾಲೂಕಿಗೆ ಸೇರಿಸಿದ ಗಾಬಸಾವಳಗಿ ಹಾಗೂ ಬಿಸನಾಳ ಗ್ರಾಮಗಳನ್ನು ಮರಳಿ ಸಿಂದಗಿ ತಾಲೂಕಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ರೈತ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಗೌಡ. ನಾ ಬಿರಾದಾರ, ಅಶೋಕ.ಮ.ಬಿರಾದಾರ, ಸುರೇಶಬಾಬು ಕೋಟಿಖಾನಿ ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ಭೀಮನಗೌಡ. ಎ.ಬಿರಾದಾರ, ನಾನಾಗೌಡ, ಯ.ಬಿರಾದಾರ, ಅಯ್ಯಪ್ಪಗೌಡ.ಪ. ಬಿರಾದಾರ, ಪ್ರಭುಗೌಡ ಬಿರಾದಾರ, ಮಲ್ಲನಗೌಡ.ಪ.ಬಿರಾದಾರ, ದೇವು.ಚ ಕೊಳಕುರ, ಅಣ್ಣಾರಾಯ, ರಾ.ಪ.ಪೀರಾಪುರ, ಮಲ್ಲಿಕಾರ್ಜುನ. ಬಿ. ಬಿರಾದಾರ, ಪರಶುರಾಮ.ಸೊ. ಅನಶೆಟ್ಟಿ, ಬಸನಗೌಡ. ನಾ. ಬಿರಾದಾರ, ಮಲ್ಲನಗೌಡ, ಬಂಗಾರಪ್ಪಗೌಡ. ಬಿರಾದಾರ, ಶಿವಶರಣ ಹೆಳವರ ಸೇರಿದಂತೆ ಇತರರು ಇದ್ದರು.