spot_img
spot_img

ಸಿಂದಗಿ; ರೂ 285ಲಕ್ಷಗಳ ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಮನಗೂಳಿ ಚಾಲನೆ

Must Read

- Advertisement -

ಸಿಂದಗಿ: ಚುನಾವಣೆಯ ಸಂದರ್ಭದಲ್ಲಿ ನೀಡಿದ ವಾಗ್ದಾನದಂತೆ ಕ್ಷೇತ್ರದ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ಕೇವಲ 10 ತಿಂಗಳ ಅಧಿಕಾರಾವಧಿಯಲ್ಲಿ ಸುಮಾರು ರೂ. 230 ಕೋಟಿಗೂ ಅಧಿಕ ಅನುದಾನ ತಂದು ಕ್ಷೇತ್ರದ ಜನತೆಯ ಋಣ ತೀರಿಸುತ್ತಿದ್ದಾರೆ ಇದನ್ನೆಲ್ಲ ಮುಂದಿನ ಚುನಾವಣೆಯಲ್ಲಿ ಅವಲೋಕನ ಮಾಡುವ ಮೂಲಕ ಮನಗೂಳಿ ಅವರಿಗೆ ಆರ್ಶಿವಾದ ನೀಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ತಾಲೂಕಾಧ್ಯಕ್ಷ ಸುರೇಶ ಪೂಜಾರಿ ಹೇಳಿದರು.

ಪಟ್ಟಣದ ಮೊಹ್ಮದಿಯಾ ನಗರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ, ಅನುಷ್ಠಾನ ಕೆಎಸ್‍ಎಚ್‍ಸಿ ವಿಜಯಪುರ ಸನ್2023-24 ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ರೂ.285ಲಕ್ಷಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಹಾಗೂ ಪೇವರ್ಸ ನಿರ್ಮಾಣ ಕಾಮಗಾರಿಯ ಭೂಮಿಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಪಟ್ಟಣದಲ್ಲಿ ಮತಗಳು ಕಡಿಮೆ ಬಿದ್ದಾಗ್ಯೂ ಕೂಡಾ ಪಟ್ಟಣದ ಅಭಿವೃದ್ಧಿಗೆ ಕಟಿಬದ್ಧರಾಗಿ ಯಾವುದೇ ಜಾತಿ, ಭೇದ ಎಣಿಸದೆ ಹಿಂದುಳಿದ ವಾರ್ಡುಗಳ ಜೀರ್ಣೋದ್ದಾರಕ್ಕೆ ವಿಶೇಷ ಅನುದಾನ ತರುವ ಮೂಲಕ ಜನಮಾನಸದಲ್ಲಿ ಉಳಿದುಕೊಳ್ಳುವಂಥ ಕಾರ್ಯದಲ್ಲಿ ತೊಡಗಿದ್ದಾರೆ ಈ ಎಲ್ಲ ಕಾಮಗಾರಿಗಳನ್ನು ಗುತ್ತಿಗೆದಾರರು ಅಚ್ಚುಕಟ್ಟುತನದಿಂದ ನಿರ್ಮಾಣ ಮಾಡಬೇಕು ಅದರಂತೆ ವಾರ್ಡ ಜನತೆಯು ಕೂಡಾ ನಿಗಾ ವಹಿಸಿ ಗುಣಮಟ್ಟದ ಕಾಮಗಾರಿ ತೆಗೆದುಕೊಳ್ಳುವುದು ಅಷ್ಟೆ ಮಹತ್ವದ್ದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸತತ 9 ಬಾರಿ ಮನಗೂಳಿ ಮನೆತನ ಚುನಾವಣೆ ಎದುರಿಸುತ್ತ ಬಂದಿದೆ. ನಮ್ಮ ತಂದೆಯವರನ್ನು ಕ್ಷೇತ್ರದ ಜನತೆ ನೆನೆಸುತ್ತಾರೆ ಎಂದರೆ ಮನಗೂಳಿ ಅವರ ಮನತನದಿಂದಲ್ಲ ಅವರ ಬದ್ಧತೆ, ಅವರ ಅಭಿವೃದ್ಧಿ ಚಿಂತನೆಯಿಂದ ಅನುದಾನ ತಂದು ಅಭಿವೃದ್ಧಿ ಪಡಿಸಿದ್ದಾರೆ ಅಲ್ಲದೆ ಮುಂದಿನ 2075 ಇಸ್ವಿಯವರೆಗೆ ನೀರಿನ ಕೊರತೆ ಆಗದಂತೆ ಭವಿಷ್ಯವನ್ನು ಪರಿಗಣಿಸಿ ಬಳಗಾನೂರ ಕೆರೆಯಿಂದ ನೀರು ತಂದಿದ್ದಾರೆ ಅವರ ಮುಂದಾಲೋಚನೆಯನ್ನು ನಾವೆಲ್ಲರು ನೆನೆಸಬೇಕು ಅದಕ್ಕೆ ಅವರು ಜನಮಾನಸದಲ್ಲಿದ್ದಾರೆ. ಅಧಿಕಾರ ಶಾಶ್ವತವಲ್ಲ ಮಾಡಿದ ಕಾಮಗಾರಿಗಳು ಶಾಶ್ವತವಾಗಿವೆ. ಸುಮಾರು 20 ವರ್ಷಗಳಿಂದ 7 ವಾರ್ಡಿನಲ್ಲಿ ಅಭಿವೃದ್ಧಿ ಕಾಮಗಾರಿಗಳಾಗಿಲ್ಲ ಎನ್ನುವದು ತಿಳಿದು ಬಂತು ಅದಕ್ಕೆ ಅಲ್ಪ ಸಂಖ್ಯಾತರ ಇಲಾಖೆಯಿಂದ ಸಿಂದಗಿ ನಗರಕ್ಕೆ 10 ಕೋಟಿ ಅನುದಾನ ನೀಡುವಂತೆ ಅಲ್ಪಸಂಖ್ಯಾತರ ಸಚಿವ ಜಮೀರಹ್ಮದ ಅವರಿಗೆ ವಿನಂತಿಸಲಾಗಿತ್ತು. ಸುಮಾರು ರೂ 5 ಕೋಟಿ ಅನುದಾನ ನೀಡಿದ್ದಾರೆ ಅದರಲ್ಲಿ  ಇಲ್ಲಿ ರೂ 285ಲಕ್ಷಗಳಲ್ಲಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ 110 ಲಕ್ಷ ಗಳಲ್ಲಿ ಶಿವಶಂಕರ ಬಡಾವಣೆಯ ಅಭಿವೃದ್ಧಿಗೆ ಮಿಸಲಿಟ್ಟಿದ್ದೇನೆ. ಅಲ್ಲದೆ 9 ನೇ ವಾರ್ಡಿಗೆ ರೂ 45 ಲಕ್ಷ, ಅಥಣೀ ಲೇಔಟನಲ್ಲಿ ರಸ್ತೆ ಕಾಮಗಾರಿಗೆ 55 ಲಕ್ಷ, ಗಾಜಿ ಹುಸೇನ ದರ್ಗಾಕ್ಕೆ 15 ಲಕ್ಷ, ಶಾದಿ ಮಹಲ್‍ಗೆ ರೂ 20 ಲಕ್ಷ ಅನುದಾನ ಮಂಜೂರು ಮಾಡಿದ್ದೇನೆ  ಅಲ್ಲದೆ ಶಾಶ್ವತ ಕಾಮಗಾರಿಗೆ ನಮ್ಮ ತಂದೆಯವರ ಆಶೆಯಂತೆ ಅಭಿವೃದ್ಧಿಗೆ ಮುಂದಾಗಿದ್ದೇನೆ. ಸಿಂದಗಿ ನಗರದಲ್ಲಿ ವಾಸಿಸುತ್ತಿರುವ ಜನತೆಗೆ ಸುಮಾರು 763 ಮನೆಗಳನ್ನು ತಂದಿದ್ದೇನೆ ಇನ್ನು 1 ಸಾವಿರ ಮನೆಗಳನ್ನು ತರುವ ಗುರಿ ಹೊಂದಿದ್ದೇನೆ. ಅಲ್ಲದೆ ಅಲ್ಪಸಂಖ್ಯಾತರು ಸಹಕಾರ ನೀಡಿದರೆ ಅಬ್ದುಲ ಕಲಾಂ ಭವನ ನಿರ್ಮಾಣ ಮಾಡುವ ಯೋಜನೆಯಲ್ಲಿದೆ ಅಧಿಕಾರ ಎನ್ನುವುದು ಶಾಶ್ವತವಲ್ಲ ಅಧಿಕಾರದಲ್ಲಿ ಮಾಡಿದ ಕಾರ್ಯಗಳೇನು ಅನ್ನುವುದು ಶಾಶ್ವತವಾಗಿರುತ್ತವೆ ಅಭಿವೃದ್ಧಿಗೆ ಸಹಕಾರ ನೀಡಿ ನನ್ನ ಜೊತೆ ಇರಿ ಎಂದರು.  

- Advertisement -

ಓಬಿಸಿ ಮುಖಂಡ ಮಲೀಕ ಖತೀಬ, ಸುನಂದಾ ಯಂಪೂರೆ ಮಾತನಾಡಿದರು.

ಕಾಮಗಾರಿಗೆ ಚಾಲನೆ ನೀಡಿದ ಪುರಸಭೆ ಮಾಜಿ ಅದ್ಯಕ್ಷ ಡಾ.ಶಾಂತವೀರ ಮನಗೂಳಿ, ಕೆಡಿಪಿ ಸದಸ್ಯೆ ಮಹಾನಂದಾ ಬಮ್ಮಣ್ಣಿ, ಪಿಡ್ಲ್ಯೂಡಿ ಎಇಇ ತಾರಾನಾಥ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಸದಸ್ಯರಾದ ಬಾಷಾಸಾಬ ತಾಂಬೋಳಿ, ಹಾಸೀಂ ಆಳಂದ, ಬಸವರಾಜ ಯರನಾಳ, ಜೆಇ ಆಕಾಶ, ಗುತ್ತಿಗೆದಾರ ಸತೀಶಗೌಡ ಬಿರಾದಾರ, ಡಾ.ರಾಜಶೇಖರ ಸಂಗಮ, ಅಂಬಿಕಾ ಪಾಟೀಲ, ಬಸೀರ ಮರ್ತೂರ, ಇಬ್ರಾಹೀಂ ನಾಟೀಕಾರ, ಇಕ್ಬಾಲ ತಲಕಾರಿ, ಮಹಿಬೂಬ ಮಚ್ಚಿವಾಲೆ, ಮಮತಾಜ ಖೇಡ, ಜಯಶ್ರೀ ಹದನೂರ, ಮಹಿಬೂಬ ಶಹಾಪುರ ಸೇರಿದಂತೆ ಅನೇಕರಿದ್ದರು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group