ಸಮಾಜ ಸೇವಕ ಅಪ್ರೋಜ ಪಾಷಾ ಸನ್ಮಾನ

Must Read

ಬಾಗಲಕೋಟೆ – ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಸಹಯೋಗದಲ್ಲಿ ರೋಟರಿ ಬೆಂಗಳೂರು ಎಚ್ ಎಸ್ ಆರ್ ಕ್ಲಬ್ ಆಯೋಜಿಸಿದ್ದ ಸೈನಿಕರೊಂದಿಗೆ ರಕ್ಷಾಬಂಧನದ ಸಂದರ್ಭದಲ್ಲಿ ಬೆಂಗಳೂರಿನ ಯಶವಂತಪುರದ ನಿವಾಸಿ ಸಮಾಜ ಸೇವಕ ಅಪ್ರೋಜ ಪಾಷಾ ಅವರನ್ನು ಸನ್ಮಾನಿಸಲಾಯಿತು.

ಅವರು ಸಮಾಜಕ್ಕೆ ವಿವಿಧ ರೀತಿಯಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ನೀಡಿರುವುದನ್ನು ಗುರುತಿಸಿ ಸಂಘದ ಪ್ರಮುಖರಾದ ಡಾ. ಶಿವಣ್ಣ ಎಂ ಕ್ಯಾಪ್ಟನ್ ಗುರು ನಾಯಕ್ ಕ್ಯಾಪ್ಟನ್ ವೀರಪ್ಪ ಮೇಜರ್ ವಿನಾಯಕ್ ಇತರೆ ಸದಸ್ಯರು ಸನ್ಮಾನಿಸಿದರು

ಸನ್ಮಾನ ಪರ ಅಪ್ರೋಚ್ ಪಾಷಾ ಮಾತನಾಡಿ, ಸಮಾಜಕ್ಕೆ ವಿವಿಧ ರೀತಿಯಲ್ಲಿ ನನ್ನ ವಿಶ್ವಾಸ ಸೇವೆಯನ್ನು ಗುರುತಿಸಿ ನನ್ನನ್ನು ಸನ್ಮಾನಿಸಿದ ಸಂಘದ ಪದಾಧಿಕಾರಿಗಳಿಗೆ ಕೃತಜ್ಞನಾದ್ದೇನೆ ಎಂದರಲ್ಲದೆ ಸಮಾಜ ಸೇವೆ ಮಾಡಲು ಬಡವರ ದೀನದಲಿತರ ಪರವಾಗಿ ನಿಸ್ವಾರ್ಥದಿಂದ ಕೆಲಸ ಮಾಡುತ್ತಿದ್ದೇನೆ. ಸನ್ಮಾನ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ನಾನು ಇನ್ನೂ ಸಮಾಜ ಸೇವೆ ಮಾಡಲೆಂದು ಪ್ರೋತ್ಸಾಹಿಸಲು ನನ್ನನ್ನು ಸನ್ಮಾನ ಮಾಡಿದ್ದಿರೆಂದು ನಾನು ಅಂದುಕೊಂಡಿದ್ದೇನೆ ಎಂದು ನುಡಿದರು.

ಮುಂದುವರೆದು ರಾಷ್ಟ್ರಕ್ಕಾಗಿ ಸಾಯಲು ಸಿದ್ದರಾಗಿರುವ ಸೈನಿಕರ ಕಾರ್ಯ ಶ್ಲಾಘನೀಯವಾಗಿದೆ ಎಂದ ಅವರು ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾವೇನು ಶ್ರಮಿಸಿದ್ದೇವೆ ಎಂಬುದನ್ನು ತಿಳಿದುಕೊಂಡು ಎಲ್ಲರೂ ದೇಶಾಭಿಮಾನವನ್ನು ರೂಡಿಸಿಕೊಳ್ಳುವುದು ಇಂದು ಅವಶ್ಯವಾಗಿದೆ ಇಂದಿನ ಯುವಕರಲ್ಲಿ ರಾಷ್ಟ್ರ ಅಭಿಮಾನವನ್ನು ರೂಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group