ಅಲ್ಲಮಪ್ರಭುದೇವರ ಜಯಂತಿ ಆಚರಣೆ

Must Read

ಬೆಳಗಾವಿ – ಇದೇ ದಿ. 30ರಂದು ವಚನ ಪಿತಾಮಹ ಡಾ.ಫ. ಗು.ಹಳಕಟ್ಟಿಭವನ ಲಿಂಗಾಯಿತ ಸಂಘಟನೆ ಮಹಾ೦ತೇಶ ನಗರ ಬೆಳಗಾವಿಯಲ್ಲಿ ಶರಣ. ಅಲ್ಲಮಪ್ರಭುದೇವರ ಜಯಂತಿ ಕಾರ್ಯಕ್ರಮ ಜರುಗಿತು.

ಮಹಾದೇವಿ ಅರಳಿ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಬಸವರಾಜ ಬಿಜ್ಜರಗಿ ಆನಂದ ಕಕಿ೯, ಶಾಂತಾ ತಿಗಡಿ, ಸುನೀಲ ಸಾಣಿಕೊಪ್ಪ, ಸುಜಾತಾ ಮತ್ತಿಕಟ್ಟಿ, ಶ್ರೀದೇವಿ ನರಗುಂದ, ಬಸವರಾಜ ಗುರುನ ಗೌಡ, ಬಿ. ಪಿ. ಜೇವನಿ,ಪವಿತ್ರಾ ನರಗುಂದ ಹಾಗೂ ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು.

ಭಾರತೀಯ ನೂತನ ವರ್ಷ ಆರಂಭ ದಿನ ಇಂದು,ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಶೂನ್ಯಸಿಂಹಾಸನದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭು ಪ್ರಭು ದೇವರು, ಅವರು ಅತಿ ಎತ್ತರದ ಸ್ಥಾನದಲ್ಲಿದ್ದರು. ಹೆಣ್ಣಿಗಾಗಿ ಸತ್ತವರು ಕೋಟಿ ಜನ ,ಮಣ್ಣಿಗಾಗಿ ಸತ್ತವರು ಕೋಟಿ ಜನ ,ಗುಹೇಶ್ವರ ನಿನಗಾಗಿ ಸತ್ತವರು ಯಾರೋ ಕಾಣೆ ಎಂದಿದ್ದಾರೆ ಅಲ್ಲಮಪ್ರಭು ಪ್ರಭುದೇವರು. ಜೀವಂತ ಇದ್ದಾಗ ಎಲ್ಲರನ್ನ ಸಮಾನವಾಗಿ ಕಾಣಿರಿ ಕೊಡುವ ಕೈ ಮೇಲೆ ಇರಲಿ, ದೇವರು ಗಾಳಿಯಂತೆ ಎಲ್ಲ ಕಡೆ ಇದ್ದಾನೆ ಎಂದು ಶರಣ ಮಹಾಂತೇಶ ಇಂಚಲ ಮಾತನಾಡಿದರು.

ನೇತ್ರಾವತಿ ಕೆಂಪಣ್ಣ ರಾಮಾಪುರೆ,ದಾಸೋಹ ಸೇವೆಗೈದರು. ಮಹಾಂತೇಶ ಮೆಣಸಿನಕಾಯಿ, ಸಂಗಮೇಶ ಅರಳಿ ನಿರೂಪಿಸಿದರು. ಬಸವರಾಜ ಮತ್ತಿಕಟ್ಟಿ,ಶೇಖರ ವಾಲಿ ಇಟಿಗಿ, ಶಿವಾನಂದ ನಾಯಕ, ಬಾಬಣ್ಣ ತಿಗಡಿ, ಲಕ್ಷ್ಮಣ ಕು೦ಬಾರ, ಗಂಗಪ್ಪ ಉಣಕಲ್, ಕೆಂಪಣ್ಣ ರಾಮಪೊರೆ ಇತರ ಶರಣ ಶರಣೆಯರು ಉಪಸ್ಥಿತರಿದ್ದರು. ಸುರೇಶ ನರಗುಂದ ವಂದಿಸಿದರು

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group