ಸ್ವರಗಳಲ್ಲಿ ಅಮ್ಮ

Must Read

. ಅಮ್ಮ ನಿನ್ನ ಒಡಲಿನ

          ಈ ಕರುಳ ಬಳ್ಳಿ ಕುಡಿಗೆ

. ಆನಂದ ನೀಡಿಹುದು

          ನಿನ್ನ ಗರ್ಭವೆಂಬ ಸ್ವರ್ಗ.

. ಇಳೆಯ ಗುಣ ಹೊತ್ತು

           ಸಲುಹಿದೆ ಜಗದಲ್ಲಿ ನನ್ನ.

. ಈಜಿ ಜಯಿಸಿ ಕಷ್ಟದಿ

          ನೀ ಹೊಸ ಜೀವ ನೀಡಿದೆ.

. ಉಣಿಸಿದೆ ಎದೆಹಾಲಲಿ

           ಅಮೃತವ ತುಂಬಿಕೊಂಡು.

. ಊರ ಜನ ಮೆಚ್ಚುವಂತೆ

              ನೀ ನೀತಿ ಪಾಠ ಹೇಳಿದೆ.

. ಋಣ ತೀರಿಸಲು ನಿನ್ನದು

           ಸಾಧ್ಯವಾಗದಮ್ಮ ನನ್ನಿಂದ.

. ಎಷ್ಟೇ ಜನ್ಮ ತಾಳಿದರು 

          ನೀನಾಗಬೇಕು ನನ್ನ ಅಮ್ಮ.

. ಏಳು ಬೀಳು ಬದುಕಿನಲ್ಲಿ

          ಚೇತನ ಕೊಟ್ಟಂತ ದೇವರು.

. ಐಸಿರಿಯು ಕಾಣದೆ

          ಚಿಂದಿ ಬಟ್ಟೆ ನೀ ಉಟ್ಟೆ

. ಒಬ್ಬಟ್ಟಿನ ಸಿಹಿಯಂತೆ

          ವಾತ್ಸಲ್ಯವ ಧಾರೆಯರೆದೆ.

. ಓದದೆ ನೀನಿದ್ದರು ಬಾಳಲಿ

           ನನಗೆ ಮೊದಲ ಗುರುವಾದೆ.

.  ಔದಾರ್ಯದಿ ಬೆನ್ನ ಹಿಂದೆ

           ನನಗೆ ನೆರಳಾಗಿ ನೀ ನಿಂತೆ.

ಅಂ. ಅಂಬರದ ತಾರೆಯಲಿ

            ನನ್ನಿಂದ ಮರೆಯಾಗಿ ಹೋದೆ.!


 ಎಚ್.ಡಿ.ಬಸವರಾಜ್.ಗಂಗಾವತಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group