spot_img
spot_img

ಶ್ರೀಮತಿ ಎಚ್ ಬಿ ಗಿರಿಜಾ ನಿರ್ವಾಣಿ ಇವರಿಗೆ ಒಲಿದ ಅಮೃತ ದೇಸಾಯಿ ರಾಜ್ಯ ಪ್ರಶಸ್ತಿ

Must Read

- Advertisement -

ಬೆಂಗಳೂರು –  ಅಮೃತ ದೇಸಾಯಿ ರಾಜ್ಯ ಪ್ರಶಸ್ತಿಯು ಸಾಹಿತಿ, ಶಿಕ್ಷಕಿ ಶ್ರೀಮತಿ ಎಚ್ ಬಿ ಗಿರಿಜಾ ಅವರಿಗೆ ದೊರೆತಿದೆ

7 ಜುಲೈ 2024 ರಂದು ನಡೆಯಲಿರುವ ಡಾ. ಗೊರೂರರ  120ನೇ ಜನ್ಮ ಜಯಂತ್ಯುತ್ಸವ ಕಾರ್ಯಕ್ರಮದ  ಪ್ರಯುಕ್ತ, ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ಭವನ ಬೆಂಗಳೂರು ಇವರ    ಸಹಕಾರದೊಂದಿಗೆ ಗೊರೂರಿನಲ್ಲಿ ಏರ್ಪಡಿಸಿರುವ  ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸುಂದರೇಶ್  ಡಿ ಉಡುವಾರೆ ತಿಳಿಸಿದ್ದಾರೆ

ಶ್ರೀಮತಿ ಎಚ್ ಬಿ ಗಿರಿಜಾ ನಿರ್ವಾಣಿ ಇವರು 1977 ಫೆಬ್ರವರಿ 01 ರಂದು ಹಾಸನ ಜಿಲ್ಲೆಯ ಇತಿಹಾಸ ಪ್ರಸಿದ್ಧವಾದ ಬಾಣಾವರದಲ್ಲಿ ಜನಿಸಿದರು. ತಂದೆ  ಹೆಚ್. ಎಂ.ಬಸಪ್ಪ ಅವರು ತಾಯಿ ಶ್ರೀಮತಿ ಕಾಳಮ್ಮ ಇವರುಗಳ ಏಳು ಜನ ಮಕ್ಕಳಲ್ಲಿ ಐದನೆಯವರು, ಇವರು ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ತಮ್ಮ ಹುಟ್ಟೂರಲ್ಲಿ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಅರಸೀಕೆರೆಯಲ್ಲಿ ಪಿ.ಯು.ವಿದ್ಯಾಭ್ಯಾಸ ಮುಗಿಸಿ ಸಿ.ಪಿ.ಇಡಿ. ತರಬೇತಿಯನ್ನು ಶ್ರೀ ವಿದ್ಯಾರಣ್ಯ ವಿದ್ಯಾಸಂಸ್ಥೆ ಅರಸೀಕೆರೆ ತಾಲೂಕಿನ ಕಣಕಟ್ಟೆ ಗ್ರಾಮದಲ್ಲಿ ಮುಗಿಸಿ ಬಿ.ಎ ಹಾಗೂ ಎಂ.ಎ ಪದವಿಯನ್ನು ಕುವೆಂಪು ವಿಶ್ವವಿದ್ಯಾನಿಲಯ ಶಿವಮೊಗ್ಗ ಇಲ್ಲಿ ಪಡೆದಿರುತ್ತಾರೆ.

- Advertisement -

ಈಗ ಕೆ.ಪಿ.ಎಸ್. ಶಾಂತಿಗ್ರಾಮ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಐದು ವರ್ಷಗಳಿಂದ ಸಾಹಿತ್ಯ ಕೃಷಿಯಲ್ಲಿ ಸೇವೆಯನ್ನು ಪ್ರಾರಂಭಿಸಿ 200 ಕ್ಕೂ ಹೆಚ್ಚು ಕವನಗಳನ್ನು 5 ಸಣ್ಣ ಕಥೆಗಳನ್ನು ಹಾಗೂ 150ಕ್ಕೂ ಹೆಚ್ಚು ಚುಟುಕಗಳನ್ನು ರಚಿಸಿದ್ದಾರೆ.

ರಾಜ್ಯಮಟ್ಟದಲ್ಲಿ ಉತ್ತಮ ಯೋಗಾಸನ ಶಿಕ್ಷಕಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಶಾಲಾ ಮಕ್ಕಳಿಗೆ ಜಿಲ್ಲಾಮಟ್ಟ, ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದವರೆಗೂ ಕ್ರೀಡೆಯಲ್ಲಿ ಭಾಗವಹಿಸುವಂತೆ ತರಬೇತಿ ನೀಡಿರುತ್ತಾರೆ.

ನೂರಾರು  ಯೋಗಾಸನ ಕಾರ್ಯಕ್ರಮಗಳನ್ನು ಹಾಗೂ ಸಾಹಿತ್ಯ ಗೋಷ್ಠಿಗಳನ್ನು ನಿರಂತರವಾಗಿ ನಡೆಸುತ್ತಿದ್ದು ವಿವಿಧ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದು , ಇವರ ನಿಸ್ವಾರ್ಥ ಯೋಗ ಉಪನ್ಯಾಸಗಳು ,ಕನ್ನಡ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಇವರಿಗೆ ಪ್ರಶಸ್ತಿ ಲಭಿಸಿದೆ ಎಂದು ಸುಂದರೇಶ್  ಡಿ ಉಡುವಾರೆ ಸಾಹಿತಿಗಳು ಹಾಗೂ ಅಧ್ಯಕ್ಷರು ಚುಟುಕು ಸಾಹಿತ್ಯ ಪರಿಷತ್ತು ಅರಕಲಗೂಡು ತಾಲ್ಲೂಕು ಘಟಕ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group