Homeಸುದ್ದಿಗಳುಸಾಹಿತ್ಯ ಹಾಗೂ ಶಿಕ್ಷಣದ ಅವಲೋಕನ ಅಗತ್ಯವಿದೆ -  ಜಯಾನಂದ ಮುನವಳ್ಳಿ

ಸಾಹಿತ್ಯ ಹಾಗೂ ಶಿಕ್ಷಣದ ಅವಲೋಕನ ಅಗತ್ಯವಿದೆ –  ಜಯಾನಂದ ಮುನವಳ್ಳಿ

ಸಾಹಿತಿ ವಿದ್ಯಾ ರೆಡ್ಡಿ ಅವರ ಪುಸ್ತಕಗಳ ಜನಾರ್ಪಣೆ

ಗೋಕಾಕ: ಗೋಕಾವಿ ಗೆಳೆಯರ ಬಳಗ ಮತ್ತು ರೆಡ್ಡಿ ಪರಿವಾರ ಗೋಕಾಕ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕೆ.ಎಲ್.ಇ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆದ ಸಾಹಿತಿ ವಿದ್ಯಾ ರೆಡ್ಡಿ ಅವರ ಪುಸ್ತಕಗಳ ಜನಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ ಕೆ.ಎಲ್.ಇ.ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಸಾಹಿತ್ಯದ ಚಿಂತನ-ಮಂತನದ ಅವಶ್ಯಕತೆ ಇದೆ ಎಂದು ಹೇಳಿದರು.

ಸಾಹಿತಿ ಹಾಗೂ ಬಳಗದ ಸಂಚಾಲಕ ಜಯಾನಂದ ಮಾದರ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಬಳಗದ ಹೆಮ್ಮೆಯ ಕಾದಂಬರಿಕಾರ್ತಿ ವಿದ್ಯಾ ರೆಡ್ಡಿ ಅವರ ಪುಸ್ತಕಗಳ ಜನಾರ್ಪಣೆಯು ಮಾದರಿ ಕಾರ್ಯಕ್ರಮವಾಗಿದೆ ಎಂದರು.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರಾಂಕ್ ಪಡೆದ ಶ್ರೀಮತಿ ವಿದ್ಯಾ ಮಂಜುನಾಥ್ ರೆಡ್ಡಿ ಅವಳ ಮಗಳು ಕುಮಾರಿ ನಿರ್ಮಿತಾ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು.

ಮಯೂರ ಶಾಲೆಯ ಆಡಳಿತಾಧಿಕಾರಿ S D ಮುರಗೋಡ ಮುಖ್ಯ ಅತಿಥಿ ಸ್ಥಾನ ವಹಿಸಿಕೊಂಡಿದ್ದರು. ಶಂಕರ್ ಕ್ಯಾಸ್ತಿ, ಶ್ರೀಮತಿ ರಜನಿ ಜೀರಗ್ಯಾಳ, ಡಾ.ಸಾವಿತ್ರಿ ಕೆಮಲಾಪೂರ, ಡಾ. ಪ್ರಿಯಂವದಾ ಹುಲಗಬಾಳಿ, ರಮೇಶ್ ಮಿರ್ಜಿ, ಮಾರುತಿ ದೇಸಾಯಿ ಪುಸ್ತಕಗಳ ಕುರಿತು ಮಾತನಾಡಿದರು. ರಾಮಚಂದ್ರ ಕಾಕಡೆ ನಿರೂಪಿಸಿದರು. ಡಾ.ಅರುಣ ಸವತಿಕಾಯಿ ಸ್ವಾಗತಿಸಿದರು. ಈಶ್ವರ್ ಚಂದ್ರ ಬೇಟಗೇರಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group