- Advertisement -
ಮಳವಳ್ಳಿ,- ಮಳವಳ್ಳಿ ಪಟ್ಟಣದ ಮಾರೇಹಳ್ಳಿ ಆದರ್ಶ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿನಿ ಕು.ಅನನ್ಯ ಆರ್. ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625ಕ್ಕೆ 571 ಅಂಕಗಳನ್ನು ಗಳಿಸಿ ಶೇ.92ರಷ್ಟು ಫಲಿತಾಂಶ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಇಂಗ್ಲೀಷ್ 114, ಕನ್ನಡ 99, ಹಿಂದಿ 89, ಗಣಿತ 83, ವಿಜ್ಞಾನ 96, ಸಮಾಜ ವಿಜ್ಞಾನ 90 ಅಂಕ ಗಳಿಸಿರುತ್ತಾರೆ. ಕು.ಅನನ್ಯ ತಂದೆ ಉಪನ್ಯಾಸಕ ರವಿಕುಮಾರ್‍ಅಗಸನಪುರ ಹಾಗೂ ತಾಯಿ ಶಿಕ್ಷಕಿ ಅನ್ನಪೂರ್ಣರವರ ಪುತ್ರಿ. ಸತತ ಪರಿಶ್ರಮ, ಶಿಕ್ಷಕರ ಬೋಧನೆ, ಪೋಷಕರ ಸಹಕಾರ, ಪ್ರೋತ್ಸಾಹ, ದಿನದ ಪಠ್ಯಗಳನ್ನು ಆ ದಿನವೇ ಓದಿ ಅರ್ಥ ಮಾಡಿಕೊಂಡಿದ್ದು ಈ ಯಶಸ್ಸಿಗೆ ಕಾರಣ ಎಂದು ಅನನ್ಯ ಆರ್. ತಿಳಿಸಿದ್ದಾರೆ.