ಹಿರೇಮಳಗಾವಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುಗೆ ಸಮಾರಂಭ

Must Read

ಹುನಗುಂದ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಸಂಭ್ರಮದಿಂದ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಬಿ ಬಿ ದೇವದುರ್ಗ ಮುಖ್ಯ ಗುರುಮಾತೆಯರು ಮಾತನಾಡಿ,  ಇಂದಿನ ಮಕ್ಕಳು ನಾಳಿನ ಭವಿಷ್ಯದ ಉಜ್ವಲ ನಕ್ಷತ್ರಗಳಾಗಬೇಕು. ಕಲಿತ ಶಾಲೆಗೆ ಹೆತ್ತವರಿಗೆ ಹೆಸರು ತರುವ ವಿದ್ಯಾರ್ಥಿಗಳು ನಿವಾಗಬೇಕೆಂದು. ಹಾಗೂ ನೀವು ಕಲಿತಿರುವ ಶಾಲೆಗೆ ಮುಂದೊಂದು ದಿನ ವಿಶೇಷ ಅತಿಥಿಯಾಗಿ ಆಗಮಿಸಬೇಕು ಈ ನಾಡು ದೇಶವೇ ಮೆಚ್ಚುವ ವಿದ್ಯಾರ್ಥಿಗಳು ನೀವಾಗಬೇಕೆಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಸಂಗಮೇಶ ಪಾಟೀಲ ರವರು,  ಪ್ರತಿ ವಿದ್ಯಾರ್ಥಿಯ ಪಾಲಕರು ಮಕ್ಕಳನ್ನು ಬಹಳ ಜಾಗೃತೆಯಿಂದ, ಮೊಬೈಲ್ ನಿಂದ ದೂರ ಇಟ್ಟು ಓದಿಸಬೇಕು ನಿಮ್ಮ ನಿಮ್ಮ ಮಕ್ಕಳ ಜವಾಬ್ದಾರಿ ಶಿಕ್ಷಕರ ಜೊತೆಗೆ ಹೆಚ್ಚಿಗೆ ನಿಮಗೆ ಇರುತ್ತದೆ ಎಂದು ಪಾಲಕರನ್ನು ಉದ್ದೇಶಿಸಿ ಮಾತನಾಡಿದರು.

ಇನ್ನೊರ್ವ ಮುಖ್ಯ ಅತಿಥಿಗಳು, ಸಿದ್ದು ಶೀಲವಂತರ ರವರು ಬೀಳ್ಕೊಡುಗೆ ಕ್ಷಣ ನಿಮಗೆ ಸ್ವಲ್ಪ ದುಃಖ ತಂದರೂ ಕೂಡ ಮುಂದಿನ ಭವಿಷ್ಯಕ್ಕಾಗಿ ನೀವು ಎಂಟನೇ ತರಗತಿಗೆ ಹೋಗಲೇಬೇಕು, ಏಳು ವರ್ಷದ ಅಮೂಲ್ಯವಾದ ಜ್ಞಾನವನ್ನು ಮುಂದಿನ ಪ್ರೌಢ ಹಂತದಲ್ಲಿ ಬಳಸಿಕೊಂಡು ನಿಮ್ಮ ಬದುಕನ್ನ ಉಜ್ವಲಗೊಳಿಸಿ ಎಂದರು.

2024 – 25ನೇ ಸಾಲಿನಲ್ಲಿ ನಮ್ಮ ಶಾಲೆ ನಮ್ಮ ಹೆಮ್ಮೆಯ ಅಡಿಯಲ್ಲಿ ಶಾಲೆಗಾಗಿ ತನುಮನಧನದಿಂದ ದೇಣಿಗೆ ನೀಡಿದ ಶಿಕ್ಷಣ ಪ್ರೇಮಿಗಳಾದ ಗೋದಲೆಪ್ಪ ಅತ್ತಾಲಟ್ಟಿ, ವಿ ಎನ್ ಪಾಟೀಲ್ ದೈಹಿಕ ಶಿಕ್ಷಕರು, ಎಮ್ ಟಿ ಗಚ್ಚಪ್ಪನವರ ಶಿಕ್ಷಕರು, ರಮೇಶ್ ದೇಗಿನಾಳ ಶಿಕ್ಷಕರು, ರಮೇಶ ಭದ್ರಶೆಟ್ಟಿ ಶಿಕ್ಷಣ ಪ್ರೇಮಿಗಳು, ಯಲ್ಲಪ್ಪ ನೀ ಡೋಣಿ ಹವಾಲ್ದಾರ ಹುನಗುಂದ, ಶ್ರೀಮತಿ ರತ್ನಕ್ಕ ಸುಬ್ಬನಗೌಡ ಪಾಟೀಲ, ನಿಂಗಪ್ಪ ಸಂಗಪ್ಪ ಹಡಪದ , ಪಾಪಣ್ಣ ನಾಗಪ್ಪ ಭದ್ರಶೆಟ್ಟಿ, ಡಿ ಬಿ ಹರದೊಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಸಂತೋಷ ಮಾದರ ಇವರೆಲ್ಲರಿಗೂ ಸನ್ಮಾನ ಕಾರ್ಯಕ್ರಮ ನೆರವೇರಿತು.

ಶಾಲೆಯ ಎಲ್ಲ ಶಿಕ್ಷಕ ಬಳಗದವರಿಗೆ ಹಿರೇಮಳಗಾವಿ ಗ್ರಾಮದ ಶಿಕ್ಷಣ ಪ್ರೇಮಿಗಳು ಆಗಿರುವ ನಿಂಗಪ್ಪ ಸಂಗಪ್ಪ ಹಡಪದ ಇವರು ಎಲ್ಲಾ ಶಿಕ್ಷಕರ ಕಾರ್ಯ ಮೆಚ್ಚುಗೆ ವ್ಯಕ್ತಪಡಿಸಿ ಪ್ರೀತಿ ಗೌರವದಿಂದ ಸನ್ಮಾನ ಮಾಡಿದರು.

ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ  ಎಸ್ ಬಿ ಕನಕನ್ನವರ, ಸಂಗನಬಸಪ್ಪ ಭದ್ರಶೆಟ್ಟಿ, ಮಹಾಂತೇಶ ಭಾವಿಕಟ್ಟಿ, ಅಶೋಕಗೌಡ ಪಾಟೀಲ, ಮಾನಿಂಗಪ್ಪ ಡೋಣಿ, ಕೆ ವಿ ಮಡಿವಾಳರ ಶಿಕ್ಷಕರು, ಪರಸು ಮೇಟಿ, ಬಸು ಮಾದರ್, ಗ್ಯಾನಪ್ಪ ಮೇಟಿ, ಸಂಗಮೇಶ ಹೊಲ್ದೂರು ಬಿ ಆರ್ ಪಿ, ಅಂದಾನಯ್ಯ ವಸ್ತ್ರದ ಶಿಕ್ಷಕರು ಹಾಗೂ ಊರಿನ ಗಣ್ಯಮಾನ್ಯರು ಶಿಕ್ಷಣ ಪ್ರೇಮಿಗಳು ಹಳೆಯ ವಿದ್ಯಾರ್ಥಿಗಳು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಶಾಲೆಯ ಮುದ್ದು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಶಿಕ್ಷಕರಾದ ಮುತ್ತು ವಡ್ಡರ ಇವರು ಕಾರ್ಯಕ್ರಮ ನಿರೂಪಿಸಿದರು. ಎಮ್ ಎಚ್ ಪೂಜಾರ್ ಗುರುಗಳು 2024-25 ನೇ ಸಾಲಿನ ಒಂದು ವರ್ಷದ ಸಂಪೂರ್ಣ ಶಾಲಾ ಚಟುವಟಿಕೆಗಳ ಕುರಿತು ಸವಿವರವಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ ಎಂ ಅಂಗಡಿ ಗುರುಗಳು ಸ್ವಾಗತಿಸಿದರು. ಹೆಚ್ ಬಿ ಮಾದರ ಶಿಕ್ಷಕರು ಹಾಗೂ ಶ್ರೀಮತಿ ವಿದ್ಯಾ ಕನಕನ್ನವರ ವಂದಿಸಿದರು.

Latest News

ಕವನ : ದೀಪಾವಳಿ

ದೀಪಾವಳಿ ಸಾಲು ಸಾಲು ದೀಪಗಳು ಕಣ್ಣುಗಳು ಕೋರೈಸಲು ಒಳಗಣ್ಣು ತೆರೆದು ನೋಡಲು ಜೀವನದ ಮರ್ಮ ಕರ್ಮ ಧರ್ಮಗಳನು ಅರಿಯಲು ಸಾಲು ಸಾಲು ದೀಪಗಳು ಮೌಢ್ಯವ ಅಳಿಸಲು ಜ್ಞಾನವ ಉಳಿಸಿ ಬೆಳೆಸಲು ಸಾಲು ಸಾಲು ದೀಪಗಳು ಮನೆಯನು ಬೆಳಗಲು ಮನವನು ತೊಳೆಯಲು ಸಾಲು ಸಾಲು ದೀಪಗಳು ನಮ್ಮ ನಿಮ್ಮ ಎಲ್ಲರ ಮನೆ ಹಾಗೂ ಮನವನು ಬೆಳಗಲಿ ಮಾನವೀಯತೆಯ ಜ್ಯೋತಿ ಎಲ್ಲೆಡೆ ಪಸರಿಸಲಿ ಶುಭ ದೀಪಾವಳಿ 🌹ಡಾ....

More Articles Like This

error: Content is protected !!
Join WhatsApp Group