ತಂದೆಯ ಜವಾಬ್ದಾರಿ, ಮಹತ್ವವನ್ನು ಎತ್ತಿ ಹಿಡಿಯುವ “ಅಪ್ಪಾ ಐ ಲವ್ ಯೂ” ಕಿರುಚಿತ್ರ

Must Read

ಮಾತೃದೇವೋಭವ, ಪಿತೃದೇವೋಭವ ಎಂಬ ವೇದಗಳ ಘೋಷವಾಕ್ಯಗಳನ್ನು ನಾವೀಗಾಗಲೇ ಕೇಳಿರುತ್ತೇವೆ. ತಂದೆತಾಯಿಯರನ್ನು ದೇವರಿಗೆ ಹೋಲಿಸುವ ಈ ವಾಕ್ಯಗಳ ಮೌಲ್ಯವನ್ನು ಅರಿತರೆ, ಅವರ ಬೆಲೆ ಏನೆಂದು ಅರಿವಾಗುತ್ತದೆ. ತಾಯಿ ಮಗುವಿನ ಆರೈಕೆಯೊಂದಿಗೆ, ಕುಟುಂಬದ ಕಾಯಕಗಳನ್ನು ನಿರ್ವಹಿಸುತ್ತಿದ್ದರೆ. ತಂದೆ ಇಡೀ ಕುಟುಂಬದ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತಿರುತ್ತಾನೆ. ಇದನ್ನೇ ಮೂಲವಾಗಿಟ್ಟುಕೊಂಡು ನಿಂಗರಾಜ ಸಿಂಗಾಡಿಯವರು ಕತೆ-ಚಿತ್ರಕಥೆ-ಸಂಭಾಷಣೆ ಬರೆದು “ಅಪ್ಪಾ ಐ ಲವ್ ಯೂ ” ಎಂಬ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಈ ಕಿರುಚಿತ್ರದ ಸಾರಾಂಶವನ್ನು ನೋಡಿದಾಗ ಒಬ್ಬ ತಂದೆ ಜವಾಬ್ದಾರಿಯುತವಾಗಿ ತನ್ನ ಮಗನ ಬಗ್ಗೆ ಕಾಳಜಿವಹಿಸುವ ಮೂಲಕ ಸುಪುತ್ರನು ಭವಿಷ್ಯದ ಜೀವನದಲ್ಲಿ ಗೌರವ-ಘನತೆಯಿಂದ ಬದುಕಲು ತನ್ನ ಜೀವನವನ್ನೇ ಸವೆಸಿರುತ್ತಾನೆ. ನೋವು-ಅವಮಾನ-ಕಷ್ಟಗಳ ಸರಮಾಲೆಯಲ್ಲಿ ನೊಂದು ಬೆಂದು, ತನ್ನ ಮಗನ ಭವಿಷ್ಯಕ್ಕಾಗಿ ದುಡಿದಿರುತ್ತಾನೆ. ಆದರೆ ಹರೆಯ ಪ್ರಾಯಕ್ಕೆ ಬಂದ ನಂತರ ಮಗನು ತಂದೆಯ ತ್ಯಾಗಗಳನ್ನು ಮರೆತು, ಚಿಕ್ಕಂದಿನಲ್ಲಿ ತಂದೆ ತನ್ನ ಶೌಚವನ್ನು ತೊಳೆದು ಬಳಿದಿದ್ದು ಮರೆಮಾಚಿ ಸಮಾಜದಲ್ಲಿ ತನ್ನ ಅಸ್ಮಿತೆಯನ್ನು ಎತ್ತಿ ಹಿಡಿಯಲು ಅವನನ್ನೇ ಕಡೆಗಣಿಸುತ್ತಾನೆ. ಆಗ ತಂದೆಯ ಮನಸ್ಸಿಗೆ ಬೆಟ್ಟದಷ್ಟು ನೋವಾದರೂ ಮಗನ ಸೌಖ್ಯಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡಿರುತ್ತಾನೆ.

ಪಿತೃದೇವನ ಮಹತ್ವವನ್ನು ತಿಳಿಯದೇ ಅವನಿಗೆ ಬಾಯಿಗೆ ಬಂದಂತೆ ಬಯ್ದು, ಅಸಹ್ಯಕರವಾಗಿ ವರ್ತಿಸುತ್ತಾನೆ ಮತ್ತು ಇಳಿವಯಸ್ಸಿನ ತಂದೆಯ ಸೇವೆ ಮಾಡಲು ಹೇಸಿಗೆ ಪಟ್ಟು ಹಿಂಜರಿಯುತ್ತಾನೆ. ಮನಸ್ಸೋ ಇಚ್ಛೆ ನಡೆದು ತಂದೆಯ ಅಭಿಲಾಷೆಗಳನ್ನೆಲ್ಲಾ ಬಲಿ ಕೊಟ್ಟ ಮಗನಿಗೆ, ತಾನು ತಂದೆಯಾದ ನಂತರ ಆ ಜವಾಬ್ದಾರಿ ನಿರ್ವಹಣೆಯ ಅರಿವಾಗಿ ನೊಂದುಕೊಳ್ಳುತ್ತಾನೆ. ಇದ್ದಾಗಲೇ ತನ್ನ ತಂದೆಗೆ ತಗ್ಗಿಬಗ್ಗಿ ನಡೆದು ಗೌರವ ಸಲ್ಲಿಸಿ ಅವರೆಂದೂ ನೊಂದುಕೊಳ್ಳದಂತೆ ನೋಡಿಕೊಳ್ಳುವ ಮಗನು ಸಂಸ್ಕಾರಯುತನಾಗಿ ಸಮಾಜದಲ್ಲಿ ಬದುಕುತ್ತಾನೆಂದು ತೋರಿಸಲು ಈ ಚಿತ್ರತಂಡ ಹೊರಟಿದೆ.

ನಿಂಗರಾಜ ಸಿಂಗಾಡಿ ಪಿಕ್ಚರ್ಸ್ ಎಂಬ ಯುಟ್ಯೂಬ್ ವಾಹಿನಿಯಲ್ಲಿ ಈ ಚಲನಚಿತ್ರ ಬಿಡುಗಡೆಯಾಗುತ್ತಿದ್ದು. ಚಿತ್ರತಂಡದ ತಾರಾಬಳಗದಲ್ಲಿ ಮಗನಾಗಿ ಗುರುರಾಜ್ ಕುಂಬಾರ,ತಂದೆಯಾಗಿ ರಾಮಪ್ಪ ಪೂಜಾರಿ, ಮಾಸ್ಟರ್ ಸಂಕೇತ್, ಗುರಲಾಪುರ, ಉಮೇಶ್ ಜಾಧವ ಕಾಣಿಸಿಕೊಂಡಿದ್ದಾರೆ.ಕಥೆ ಚಿತ್ರಕಥೆ ಸಂಭಾಷಣೆ ನಿರ್ಮಾಣ ನಿರ್ದೇಶನದ ಹೊಣೆ ನಿಂಗರಾಜ್ ಸಿಂಗಾಡಿಯವರು ಹೊತ್ತಿದ್ದು, ಪ್ರೊಡಕ್ಷನ್ ಹೆಡ್ ಸಹನಿರ್ದೇಶಕರಾಗಿ ಅಮೀತ್ ಶೂರಪಾಲಿಯವರು ಕಾರ್ಯನಿರ್ವಹಿಸಿದ್ದಾರೆ. ಚಿತ್ರಕ್ಕೆ ಸಂಗೀತವನ್ನು ರವಿತೇಜ (R T Studio ) ಬಾಗಲಕೋಟ ನೀಡಿದ್ದು, ಇನ್ನುಳಿದಂತೆ ತಂಡದಲ್ಲಿ ರಾಘು ಕಡಕೋಳ, ಅಜೀತ್ ಸಿಂಗಾಡಿ, ಉಮೇಶ್ ಜಾಧವ, ಸುಬ್ಬು ಮಾಳಿಯವರು ಕಾಣಿಸಿಕೊಂಡಿದ್ದಾರೆ.


ಕು.ಹನಮಂತ.ಬ.ಐಹೊಳೆ
ಸಿನಿಮಾ ವಿಮರ್ಶಕರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group