ಸಿಂದಗಿ: ದಿನಗೂಲಿ ನೌಕರರು, ನೀರು ಸರಬರಾಜು ನೌಕರರು,ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರು, ನೇರ ಪಾವತಿ ನೌಕರರು, ಟೈಮ್ ಸ್ಕೇಲ್ ಕನಿಷ್ಠ ವೇತನ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಹಾಗೂ ವಿವಿಧ ವೃಂದಗಳಲ್ಲಿ ಕೆಲಸ ಮಾಡುವ ನಮ್ಮ ಪೌರ ಸೇವಾ ನೌಕರರನ್ನು ವಿಲೀನ ಗೊಳಿಸಿ ಖಾಯಂ ಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ರವರಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘದ ಬಿಜಾಪುರ ಜಿಲ್ಲೆಯ ಜಿಲ್ಲಾಧ್ಯಕ್ಷ ಅಬ್ಬಾಸಲಿ ಕಾಖಂಡಕಿ ಹಾಗೂ ಪುರಸಭೆಯ ಶಾಖಾ ಅಧ್ಯಕ್ಷ ಕಲ್ಲಪ್ಪ ಚೌರ ವಿನಂತಿಸಿದ್ದಾರೆ
ಈ ಕುರಿತು ಜಂಟಿಯಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು 25-30 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತ ಬಂದಿರುವ ಹಿನ್ನೆಲೆಯಲ್ಲಿ ದಿನಗೂಲಿ ನೌಕರರು, ನೀರು ಸರಬರಾಜು ನೌಕರರು, ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರು, ನೇರ ಪಾವತಿ ನೌಕರರು, ಟೈಮ್ ಸ್ಕೇಲ್ ಕನಿಷ್ಠ ವೇತನ ಗುತ್ತಿಗೆ ನೌಕರರು, ಹಾಗೂ ಹೊರ ಗುತ್ತಿಗೆ ನೌಕರರು, ಕಂಪ್ಯೂಟರ್ ಆಪರೇಟರ್ ಗಳು,ನೋಡಲ್ ಇಂಜಿನೀಯರ್, ಅಕೌಂಟೆಂಟ್ ನೌಕರರು, ವಾಹನ ಚಾಲಕರು, ಸ್ಯಾನಿಟರಿ ಸೂಪರ್ ವೈಸರ್, ಕ್ಷೇಮಾಭಿವೃದ್ಧಿ ನೌಕರರು ಸೇರಿದಂತೆ ವಿವಿಧ ವೃಂದಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ಖಾಯಂ ಗೊಳಿಸಲು ಈ ಮೊದಲು ಜಿಲ್ಲಾಧಿಕಾರಿಗಳಿಗೆ ಅಧಿಕಾರವಿತ್ತು ಅದನ್ನು ರಾಜ್ಯ ಸರ್ಕಾರ ವಾಪಸ್ ಪಡೆದು ಕೊಂಡಿದ್ದು ಸದರಿ ಆದೇಶವನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗೆ ಮರು ನೇಮಕಾತಿ ಆದೇಶವನ್ನು ನೀಡಬೇಕು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಗುರುತಿಸಿ ಖಾಯಂ ಗೊಳಿಸುವ ಸಂಬಂಧ ಅನುಕೂಲ ಕಲ್ಪಿಸಿಕೊಟ್ಟಂತಾಗುತ್ತದೆ ಅಲ್ಲದೆ ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ವೃಂದಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ವಿಲೀನಗೊಳಿಸಲು ಈ ಹಿಂದೆ ಸುಮಾರು ಬಾರಿ ರಾಜ್ಯ ಸಂಘದಿಂದ ಮನವಿ ಸಲ್ಲಿಸಿದರೂ ಕ್ರಮ ವಹಿಸದೇ ಇರುವುದು ತುಂಬಾ ನೋವಿನ ಸಂಗತಿಯಾಗಿದೆ.ಬೆಂಗಳೂರಿನಲ್ಲಿ 2013 ರಿಂದ ಸೇವೆ ಸಲ್ಲಿಸಿದಂತವರಿಗೆ ಮತ್ತು 10 ವರ್ಷಗಳ ಸೇವೆಯನ್ನು ಪರಿಗಣಿಸಿ ಖಾಯಂ ಮಾಡಿದ್ದು ಅದರಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಸುತ್ತಿರುವ ನೌಕರರಿಗೂ ಅನ್ವಯಿಸುವಂತೆ ಆದೇಶವನ್ನು ಹೊರಡಿಸಿ ಸುಮಾರು20- 30 ವರ್ಷಗಳಿಂದ ಸೇವೆ ಸಲ್ಲಿಸಿದಂತವರಿಗೆ ಅನುವು ಮಾಡಿಕೊಡಲು ಕೂಡಲೇ ಕ್ರಮ ವಹಿಸಬೇಕು ಇಲದ್ದಿದಲ್ಲಿ ಸಚಿವರ ಮುಂದೆ ಉಪವಾಸ ಸತ್ಯಾಗ್ರಹ ಕೂಡ ಬೇಕಾಗುತ್ತದೆ ಆದ ಕಾರಣ ತಾವುಗಳು ಸಚಿವರ ಅಧ್ಯಕ್ಷತೆಯಲ್ಲಿ ಸರ್ಕಾರದ ಕಾರ್ಯದರ್ಶಿಗಳು.ಪೌರಾಡಳಿತ ನಿರ್ದೇಶಕರು ಮತ್ತು ಸಂಘದ ಪದಾಧಿಕಾರಿಗಳನ್ನು ಒಳಗೊಂಡಂತೆ ಸಭೆಯನ್ನು ಕರೆದು ನೌಕರರನ್ನು ವಿಲೀನ ಗೊಳಿಸುವ ಪ್ರಕ್ರಿಯೆಯನ್ನು ಹಾಗೂ ವಿವಿಧ ಬೇಡಿಕೆಗಳ ಬಗ್ಗೆ ತಕ್ಷಣ ಕ್ರಮವಹಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.