spot_img
spot_img

ಅರಭಾವಿ ಕಾಂಗ್ರೆಸ್; ಮನೆಯೊಂದು ಮೂರು ಬಾಗಿಲು !

Must Read

- Advertisement -

ಮೂಡಲಗಿ: ಅರಭಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲಾದಂತಾಗಿದೆ ಎಂಬಂಥ ಮಾತುಗಳು ಕ್ಷೇತ್ರದಾದ್ಯಂತ ಕೇಳಿಬರುತ್ತಿದೆ.

ಇದಕ್ಕೆ ಪುಷ್ಠಿ ಕೊಡುವಂತೆ ದಿ.೧೮ ರಂದು ಮೂಡಲಗಿಯ ಮಡ್ಡಿ ಈರಣ್ಣ ದೇವಸ್ಥಾನದಲ್ಲಿ ಕಾಂಗ್ರೆಸ್ ನಾಯಕ ಅರವಿಂದ ದಳವಾಯಿಯವರ ನೇತೃತ್ವದಲ್ಲಿ ಅರಭಾವಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವಕ್ತಾರ ಹಾಗೂ ಕಾರ್ಯದರ್ಶಿಗಳ ನೇಮಕ ಸಭೆ ನಡೆದಿದ್ದು ಇದರಲ್ಲಿ ಪ್ರಮುಖರಾದ ಲಕ್ಕಣ್ಣ ಸವಸುದ್ದಿ, ಭೀಮಪ್ಪ ಗಡಾದ ಹಾಗೂ ಬಿ ಬಿ ಹಂದಿಗುಂದ ಅವರು ಭಾಗವಹಿಸದೇ ಇರುವುದು ಅನೇಕ ಊಹಾಪೋಹಗಳಿಗೆ ಎಡೆಮಾಡಿದೆ.

ಒಂದು ಮೂಲದ ಪ್ರಕಾರ ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಗಳಾಗಲು ಕಾಂಗ್ರೆಸ್ ಪಕ್ಷದಿಂದ ಏಳು ಜನ ಆಕಾಂಕ್ಷಿಗಳು ತಯಾರಾಗಿದ್ದು ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ ಎನ್ನಲಾಗಿದೆ.

- Advertisement -

ಈ ಮುಂಚೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ತಮ್ಮ ಮೊದಲಿನ ಪಕ್ಷ ಜೆಡಿಎಸ್ ಗೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರಲ್ಲದೆ ಬೆಂಗಳೂರಿಗೆ ಹೋಗಿ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಅರಭಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧಿಸಲು ತಮ್ಮ ಮನವಿ ಸಲ್ಲಿಸಿ ಬಂದಿರುವುದಾಗಿ ಸಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು.

ಅದಾದ ನಂತರ ರಾಮದುರ್ಗದ ಮಾಜಿ ಶಾಸಕ ಅಶೋಕ ಪಟ್ಟಣ ಅವರ ಗಡಾದ ಅವರಿಗೆ ಬೆಂಬಲ ಸೂಚಿಸಿದ್ದು ಇನ್ನೊಬ್ಬ ಟಿಕೆಟ್ ಆಕಾಂಕ್ಷಿ ಅರವಿಂದ ದಳವಾಯಿಯವರಿಗೆ ಅಸಹನೀಯವಾಗಿ ಅವರು ಪಟ್ಟಣ ಅವರಿಗೆ ಕರೆಮಾಡಿ ಛಾಲೆಂಜ್ ಮಾಡಿದ್ದು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೆಲ್ಲದರ ನಡುವೆ ಭೀಮಪ್ಪ ಹಂದಿಗುಂದ ಅವರು ಮೌನವಹಿಸಿದ್ದು ಅವರ ನಡೆ ನಿಗೂಢವಾಗಿದೆ ಎಂದು ವಿಶ್ಲೇಶಿಸಲಾಗುತ್ತಿದೆ. ಇನ್ನು ಲಕ್ಕಣ್ಣ ಸವಸುದ್ದಿಯವರೂ, ಮಲ್ಲಿಕಾರ್ಜುನ ಕಬ್ಬೂರರೂ, ರಮೇಶ ಉಟಗಿಯವರೂ  ಕೂಡ ಅರಭಾವಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದು ಇದು ಪಕ್ಷದ ಹೈಕಮಾಂಡ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಬಹುದಾಗಿದೆ.

- Advertisement -

ಇಂಥದರಲ್ಲಿ ಅರವಿಂದ ದಳವಾಯಿಯವರು ಹಠ ತೊಟ್ಟು ಈ ಯಾವ ನಾಯಕರನ್ನೂ ಗಣನೆಗೆ ತೆಗೆದುಕೊಳ್ಳದೆ ಬುಧವಾರದ ಸಭೆ ಮಾಡಿದ್ದಾರೆ. ಸಭೆಯಲ್ಲಿ ಮೂಡಲಗಿಯ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಿರಲಿಲ್ಲ ಕೇವಲ ಕೌಜಲಗಿಯ ಕೆಲವರು ಇದ್ದರು ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿದ್ದು ಕಾಂಗ್ರೆಸ್ ಪಕ್ಷ ಕವಲುದಾರಿಯಲ್ಲಿ ನಡೆದಿದೆ ಎಂದೂ ಹೇಳಲಾಗುತ್ತಿದೆ.

ಗುರು ಗಂಗಣ್ಣವರ:

ಅರಭಾವಿ ಕಾಂಗ್ರೆಸ್ ನಲ್ಲಿನ ಈ ಬೆಳವಣಿಗೆಗಳು ನಿಜವಾಗಲೂ ಸರಿಯಲ್ಲ ಎಂಬ ಭಾವನೆಯನ್ನು ಕಾರ್ಯಕರ್ತ ಗುರು ಗಂಗಣ್ಣವರ ವ್ಯಕ್ತಪಡಿಸಿದ್ದು, ಇಂದಿನ ಸಭೆಗೆ ಅವರೂ ಅಸಮಾಧಾನ ಹೊರಹಾಕಿದ್ದಾರೆ.

ಇಂಥ ಬೆಳವಣಿಗೆಗಳಿಂದ ಕಾಂಗ್ರೆಸ್ ಪಕ್ಷವು ಮನೆಯೊಂದು ಮೂರು ಬಾಗಿಲು ಎಂಬಂತಾಗಿದ್ದು, ವಿರೋಧಿಗಳಿಗೆ ಮತ್ತಷ್ಟು ಸಹಾಯಕವಾಗುತ್ತದೆ. ಸಭೆಗೆ ದಳವಾಯಿ ಯವರು ಎಲ್ಲ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಬೇಕಿತ್ತು.

ಟಿಕೆಟ್ ಯಾರಿಗೇ ಸಿಗಲಿ ಎಲ್ಲರೂ ಒಂದಾಗಿ ದುಡಿಯುವ ಇಚ್ಛೆ ವ್ಯಕ್ತ ಮಾಡಬೇಕಿತ್ತು ಆದರೆ ಹಾಗೆ ಆಗಲಿಲ್ಲ. ಪಕ್ಷವು ವರ್ಚಸ್ಸು ಹೊಂದಿರುವ ಹಾಗೂ ಯಾವುದೇ ಹಗರಣದಲ್ಲಿ ಸಿಲುಕದೆ ಇರುವ ನಾಯಕರಿಗೆ ಟಿಕೆಟ್ ಕೊಡುತ್ತದೆ. ಅದರಂತೆ ಇವರು ನಡೆದುಕೊಳ್ಳಬೇಕು.

ಎಲ್ಲ ನಾಯಕರು ಒಂದಾಗಿ, ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಗೆ ಬಂದರೆ ಕಾಂಗ್ರೆಸ್ ಪಕ್ಷ ಆರಿಸಿ ಬರುತ್ತದೆ ಇಲ್ಲದಿದ್ದರೆ ಮತ್ತೆ ಪಕ್ಷ ಸೋಲುವುದು ಖಚಿತ ಎಂಬುದನ್ನು ನಾಯಕರು ಅರಿತುಕೊಳ್ಳಬೇಕು ಎಂದು ಗುರು ಗಂಗಣ್ಣವರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ವರದಿ: ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ತಾಲೂಕಿನ ಫುಲಗಡ್ಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group