spot_img
spot_img

ನಾವೇಕೆ ನೈಸರ್ಗಿಕ ಕೃಷಿ ಮಾಡಬೇಕು?

Must Read

- Advertisement -

ಒಬ್ಬರ ಅನ್ನವನ್ನು ಕಿತ್ತುಕೊಂಡು ಮತ್ತೊಬ್ಬರು ತಿನ್ನಲು ಬೋಧಿಸುವ ಆಧುನಿಕ ನಾಗರಿಕತೆಯ ಕರಾಳ ಛಾಯೆಯಿಂದ ರೈತ ಹೊರಬರಲು ನೈಸರ್ಗಿಕ ಕೃಷಿಯನ್ನು ಮಾಡಬೇಕಿದೆ. ಹಲವು ದಶಕಗಳಿಂದ ಆಧುನಿಕ ಕೃಷಿ ಹೆಸರಿನಲ್ಲಿ ಭೂಮಿಯನ್ನು ನಿರ್ಜೀವಮಾಡಿಬಿಟ್ಟಿದ್ದು, ಇಂತಹ ನಿರ್ಜೀವ ಮಣ್ಣಿಗೆ ಮರು ಜೀವ ತುಂಬುವ ಅಗತ್ಯವಿದೆ. ಬರಿ ಮನುಕುಲದ ಉಳಿವಿಗೆ ಮಾತ್ರವಲ್ಲ. ಇಡೀ ಜೀವ ಸಂಕುಲದ ಉಳಿವಿಗೆ ನೈಸರ್ಗಿಕ ಕೃಷಿಯ ಅಗತ್ಯವಿದೆ. ನಮ್ಮ ಮುಂದಿನ ಪೀಳಿಗೆಗಾಗಿ ನಾವು ತುರ್ತಾಗಿ ನೈಸರ್ಗಿಕ ಕೃಷಿಗೆ ಮರಳಬೇಕಿದೆ. ಇದುವರೆಗೂ ಭೂಮಿ ತಾಯಿಗೆ ಉಣಬಡಿಸಿರುವ ವಿಷದ ವಿಸರ್ಜನೆ ಮಾಡಿಸಿ ಪಾಪ ಕಳೆದುಕೊಳ್ಳಲು ನೈಸರ್ಗಿಕ ಕೃಷಿಗೆ ಮುಂದಾಗಬೇಕಿದೆ.

ರೈತ ಸಾಲದ ಬಾಧೆಯಿಂದ ಮುಕ್ತನಾಗಲು, ರೋಗಮುಕ್ತನಾಗಲು, ಅತ್ಯಧಿಕ ಇಳುವರಿಯನ್ನು ಪಡೆಯಲು ಮಣ್ಣಿನ ಸುಸ್ಥಿರತೆಗಾಗಿ, ಜಲದ ಉಳಿವಿಗಾಗಿ, ಸಸ್ಯವರ್ಗ ಹಾಗೂ ಪ್ರಾಣಿಗಳ ಸಂರಕ್ಷಣೆಗಾಗಿ ನೈಸರ್ಗಿಕ ಕೃಷಿಯನ್ನು ಕೂಡಲೇ ಅನುಸರಿಸಬೇಕಿದೆ.

ನಮ್ಮಂತೆ ನಿಸರ್ಗದೊಡನೆ ಸಹಜೀವನ ನಡೆಸುತ್ತಾ ಪರಿಸರ ಭಾಗವಾಗಿ ಸಮತೋಲನ ಕಾಪಾಡುತ್ತಿರುವ ಪಕ್ಷಿಗಳು, ಪ್ರಾಣಿಗಳು, ಎರೆಹುಳುಗಳು, ಗಿಡ-ಮರಗಳು, ಬಳ್ಳಿಗಳು, ಇತರೆ ಪರೋಪಕಾರಿ ಕೀಟಗಳು, ನೀರಿನಲ್ಲಿ ವಾಸಿಸುವ ಬಗೆ ಬಗೆಯ ಜಲಚರಗಳಿಗೂ ಅನುಕೂಲವಾಗಲಿ ಎಂದು ನಾವೆಂದಾದರೂ ಆ ದಿಶೆಯತ್ತ ಯೋಚಿಸಿದ್ದೇವಾ? ಪರಿಸ್ಥಿತಿ ಹೀಗಿರುವಾಗ ಎಲ್ಲರನ್ನೂ ಸಮಾನವಾಗಿ ಕಾಣುತ್ತಾ ಸಮತೋಲನವನ್ನು ಕಾಪಾಡಿಕೊಳ್ಳಬೇಕಾದ ನಿಸರ್ಗಕ್ಕೆ ಮನುಷ್ಯ ಕೇಂದ್ರಿತ ಕಾರ್ಯ ಚಟುವಟಿಕೆಗಳು ನಿಸರ್ಗಕ್ಕೆ ಮಾರಕವೇ ವಿನಃ ಅನುಕೂಲ ಎಂದೂ ಆಗದು. ನಿಸರ್ಗ ತನ್ನ ಒಡಲಲ್ಲಿರುವ ಸಕಲೆಂಟು ಜೀವಕೋಟಿಗಳನ್ನು ಕೊಟ್ಯಂತರ ವರ್ಷಗಳಿಂದ ಸಲಹುತ್ತಾ ಬಂದಿದೆ. ಜೀವ ಸಂಕುಲಗಳ ನಡುವೆ, ಸಸ್ಯವರ್ಗಗಳ ನಡುವೆ ಪರಸ್ಪರ ಸಾಮರಸ್ಯವನ್ನು ಕಾಪಾಡುತ್ತ ಬರುತ್ತಿದೆ. ಈಗ ಮನುಷ್ಯ ಚಟುವಟಿಕೆಗಳಿಂದಾಗುವ ಅನಾಹುತಗಳನ್ನು ಸರಿಪಡಿಸಲು ಭೂತಾಯಿ ಏದುಸಿರು ಬಿಡುತ್ತಿದ್ದಾಳೆ. ಇಂತಹ ಅನಾಹುತಗಳನ್ನು ಸದಾಕಾಲ ನಾವು ಸರಿಪಡಿಸುತ್ತಾ ಸಾಗಬೇಕಲ್ಲವೆ?

- Advertisement -

ನೆಲದ ಮೇಲಿನ ಐದಿಂಚು ಮಣ್ಣು ತುಂಬಾ ಫಲವತ್ತಾದದ್ದು. ಇಂತಹ ಮಣ್ಣು ತಯಾರಾಗಲು ಸುಮಾರು 500 ವರ್ಷಗಳೇ ತಗಲುತ್ತಿದೆ ಎಂದು ತಜ್ಞರು ಅಂದಾಜಿಸುತ್ತಾರೆ.ಇಂತಹ ಭೂಮಿಯ ಮೇಲ್ಭಾಗದ ಮಣ್ಣನ್ನು ಕಾಪಾಡಿಕೊಳ್ಳುವುದು ರೈತನ ಹೊಣೆಗಾರಿಕೆ.

ಭಾರತದಲ್ಲಿ ಈ ನೈಸರ್ಗಿಕ ಕೃಷಿಯನ್ನು ಸುಭಾಷ್ ಪಾಳೇಕರರು ಶೂನ್ಯಬಂಡವಾಳದ ನೈಸರ್ಗಿಕ ಕೃಷಿ ಎಂದೇ ಕರೆಯುತ್ತಾರೆ. ಇದನ್ನೂ ಪ್ರತಿಯೊಬ್ಬ ಕೃಷಿಕರು ತಿಳಿಯಬೇಕಿದೆ. ರೈತ ಹೊರಗಿನಿಂದ ಯಾವ ಪದಾರ್ಥವನ್ನು ತಂದು ತನ್ನ ಕೃಷಿ ಭೂಮಿಗೆ ಹಾಕಬೇಕಿಲ್ಲ. ತನ್ನಲ್ಲೇ ದೊರೆಯುವ ವಸ್ತುಗಳನ್ನು ಬಳಸಿಕೊಂಡು ಕನಿಷ್ಠ ವೆಚ್ಚದಲ್ಲಿ ಕೃಷಿಯನ್ನು ಯಶಸ್ವಿಯಾಗಿ ಮಾಡಿ ಸ್ವಾವಲಂಬಿಯಾಗಬಹುದು ಎನ್ನುವುದು ಅವರ ಪ್ರತಿಪಾದನೆ.  ಒಟ್ಟಾರೆ  ಕಲಿತಿರುವ ಜ್ಞಾನವನ್ನು ಉಪಯೋಗಿಸಿ, ನಾವು  ಸಹಜ ಕೃಷಿಯಿಂದ ಮುನ್ನಡೆಯಬೇಕಿದೆ.


ಅಮರೇಗೌಡ ಪಾಟೀಲ ಜಾಲಿಹಾಳ

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group