ಬೀದರ – ಕೇಂದ್ರ ಸರಕಾರ ಸಿಐಡಿ, ಸಿಬಿಐ, ಇನ್ ಕಮ್ ಟ್ಯಾಕ್ಸ್ ಇಲಾಖೆಗಳನ್ನು ದುರುಪಯೋಗ ಮಾಡಿಕೊಂಡು ನಮ್ಮನ್ನು ಹೆದರಿಸುವ ಕೆಲಸ ಮಾಡುತ್ತಿದೆ ಆದರೆ ಇವರ ಧಮಕಿಗಳಿಗೆ ನಾವು ಹೆದರುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಬೀದರನಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಸಿಐಡಿ ನೋಟಿಸ್ ನೀಡಿದೆ. ಕೇಂದ್ರದ ಬಿಜೆಪಿ ಸರ್ಕಾರದವರು ಮಾನನಷ್ಟ ಮೊಕದ್ದಮೆ ಹಾಕುತ್ತಾರೆ, ನೋಟಿಸ್ ಕೊಡುತ್ತಾರೆ. ಎಲ್ಲವನ್ನೂ ಎದುರಿಸಲಿಕ್ಕೆ ನಾವು ತಯಾರಿದ್ದೆವೆ. ಇಂತಹ ಧಮ್ಕಿಯಿಂದ ನಾವು ಹೆದರಲ್ಲ ಎಂದರು
ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶ ಸಿಎಂ ಗಳು ಬಿಜೆಪಿ ಸೇರ್ಪಡೆಗೆ ಸಿದ್ದತೆ ವಿಚಾರ ಮಾತನಾಡಿದ ಅವರು, ಎಲ್ಲರಿಗೂ ಹೆದರಿಸಿ ಎಲ್ಲರಿಗೂ ಇಡಿ ಧಮ್ಕಿ ಕೊಟ್ಟು, ಐಟಿ, ಸಿಬಿಸಿ ಸೇರಿದಂತೆ ಎಲ್ಲ ಏಜೆನ್ಸಿಗಳಿಗೆ ದುರುಪಯೋಗ ಮಾಡಿಕೊಂಡು ಅನೇಕ ಮುಖಂಡರನ್ನು ಅವರು ಸೆಳೆದುಕೊಳ್ಳುತ್ತಿದ್ದಾರೆ. ಆದರೆ ಯಾರು ಇಲ್ಲಿ ಕರಪ್ಟ್ ಇದ್ರೊ ಅವರು ಅಲ್ಲಿ ಹೋದ ಬಳಿಕ ಒಳ್ಳೆಯರು ಆಗುತ್ತಾರಾ,..? ಎಂದು ಖರ್ಗೆ ಕೇಳಿದರು
ಅವರು ಕರಪ್ಟ್ ಇದಾರಂತ ನೀವು ಕೇಸ್ ಹಾಕ್ತಿರಾ,.. ನೀವು ಪಾರ್ಟಿ ಜಾಯನ್ ಮಾಡಿಸಿಕೊಳ್ಳುತ್ತೀರಿ. ನಿಮ್ಮಲ್ಲಿ ಬಂದ ಮೇಲೆ ಅವರು ಸ್ವಚ್ಛ ಆದ್ರಾ,..? ಎಂದು ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವರದಿ: ನಂದಕುಮಾರ ಕರಂಜೆ, ಬೀದರ