Homeಲೇಖನಪುಟ್ಟಬಾಲೆಯ ಚಿತ್ರಕಲಾ ಪ್ರದರ್ಶನ, ಅಜ್ಜನ ವ್ಯಾಖ್ಯಾನ.

ಪುಟ್ಟಬಾಲೆಯ ಚಿತ್ರಕಲಾ ಪ್ರದರ್ಶನ, ಅಜ್ಜನ ವ್ಯಾಖ್ಯಾನ.

ಹಾಸನದ ಚಿತ್ರ ಕಲಾವಿದರು ಬಿ.ಎಸ್. ದೇಸಾಯಿ ವೃತ್ತಿಯಲ್ಲಿ ಚಿತ್ರ ಕಲಾ ಶಿಕ್ಷಕರು. ಮಕ್ಕಳಿಗೆ ಚಿತ್ರಕಲೆ ಕಲಿಸುವಲ್ಲಿ ಪರಿಣಿತರು. ಸ್ವಂತ ಮನೆಯನ್ನು ಚಿತ್ರ ಕಲಾ ಗ್ಯಾಲರಿಯಾಗಿ ಮಾಡಿ ಸತತ ಚಿತ್ರಕಲೆಯನ್ನೇ ಧ್ಯಾನಿಸುತ್ತಾ ಈ ದಿಶೆಯಲ್ಲಿ ಸದಾ ಕಾರ್ಯ ನಿರತರು.

ಇವರ ಕಲಾ ಗ್ಯಾಲರಿಯಲ್ಲಿ ಆಗಿಂದಾಗ್ಗೆ ಚಿತ್ರಕಲಾ ಶಿಬಿರ, ಪ್ರದರ್ಶನಗಳು ಮತ್ತು ಪಾಠ ನಡೆಯುತ್ತಿರುತ್ತದೆ.

ಮೊನ್ನೆ ಓರ್ವ ಬಾಲೆಯ ಏಕ ವ್ಯಕ್ತಿ ಚಿತ್ರ ಕಲಾ ಪ್ರದರ್ಶನ ನೆಡೆಯಿತು. ಕಲಾವಿದೆ ಹೆಸರು ಡಿಂಪನಾ ಎಸ್. ದೇಸಾಯಿ. ಈಕೆಯ ವಯಸ್ಸು ಮೂರು ವರ್ಷ ನಾಲ್ಕು ತಿಂಗಳು. ಈ ಕಲಾವಿದೆ ಬಣ್ಣಗಳ ಜಗತ್ತಿನಲ್ಲಿ ತನ್ನ ಕಲ್ಪನೆಯ ಲೋಕವನ್ನು ಚಿತ್ರಿಸಿದ್ದಾಳೆ.

ದೇಸಾಯಿ ಒಂದೊಂದು ಚಿತ್ರದ ಕುರಿತಾಗಿಯೂ ತಮ್ಮದೇ ವ್ಯಾಖ್ಯಾನ ಮಂಡಿಸಿದರು. ಚಿತ್ರಗಳನ್ನು ತೋರಿಸುತ್ತಾ ನೋಡಿ ಈ ಚಿತ್ರದಲ್ಲಿ ಆಕೆಯ ನಿರೀಕ್ಷೆಗಳ ಉತ್ಸಾಹ ಕ್ರೀಡೆಗಿಂತಲೂ ಹೆಚ್ಚಿನ ಸ್ವಾತಂತ್ರ್ಯದ ಅನುಭವವಿದೆ. ನೀಲಿ ಹಿನ್ನೆಲೆಯಲ್ಲಿ ಹಕ್ಕಿಗಳು, ಮರಗಳು, ನದಿಯಂತೆ ಹರಡುವ ಹಾದಿಗಳು, ನೃತ್ಯವಾಡುವ ಚುಟುಕು ಆಕಾರಗಳು ಮತ್ತು ಬಣ್ಣದ ಮಿಶ್ರಣಗಳು ಆಕೆಯ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಬಣ್ಣಗಳ ಸಹಜ ಬಳಕೆ ಮತ್ತು ವಿಶಿಷ್ಟ ಆಕಾರಗಳು ಈಕೆಯ ಕಲಾತ್ಮಕ ಪ್ರತಿಭೆ ತೋರಿಸುತ್ತವೆ.

ಬಣ್ಣಗಳಲ್ಲಿ ಚಿತ್ರಿಸಿರುವ ಪಶು ಅಥವಾ ಕಾಲ್ಪನಿಕ ಜೀವಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಅದಕ್ಕಿರುವ ಹಾಸ್ಯಮಯ ಮುಖ, ಕಿವಿಗಳು ಮತ್ತು ಭಂಗಿಗಳು ಆಕೆಯ ಕಲ್ಪನೆಯೊಳಗಿನ ಸಂತೋಷದ ಪ್ರತೀಕ. ಕಪ್ಪು ಛಾಪುಗಳು, ಹಸಿರು-ಕೆಂಪು ಮಿಶ್ರಿತ ಬಣ್ಣಗಳ ಬಳಕೆ ಅನಿಯಮಿತ ರೇಖಾಚಿತ್ರಗಳು ಆಕೆಯ ಉಲ್ಲಾಸ, ನಿರ್ಬಂಧರಹಿತ ಚಿಂತನೆಗೆ ಸಾಕ್ಷಿ ಎಂದರು.

ಈ ಚಿತ್ರವನ್ನು ನೋಡಿ ಬಾಲಮನೆಯ ಕಲಾತ್ಮಕ ಶಕ್ತಿ ಎಷ್ಟು ವಿಶಾಲವಾಗಿದೆ. ನೀಲಿ ಹಿನ್ನೆಲೆಯಲ್ಲಿ ಹಕ್ಕಿಗಳು, ಮರಗಳು, ನದಿಯಂತೆ ಹರಡುವ ಹಾದಿಗಳು, ನೃತ್ಯವಾಡುವ ಚುಟುಕು ಆಕಾರಗಳು ಮತ್ತು ಬಣ್ಣದ ಮಿಶ್ರಣಗಳು ಆಕೆಯ ಭಾವನೆಗಳನ್ನು ವ್ಯಕ್ತಪಡಿಸುತ್ತವೆ ಅಲ್ಲವೇ ಎಂದರು. ನನ್ನದು ಮೌನ ವೀಕ್ಷಣೆ. ಹಸಿರು, ಕಪ್ಪು, ಕಿರು.ನೀಲಿ, ಗುಲಾಬಿ ಮತ್ತು ಕಿತ್ತಳೆ ಬಣ್ಣಗಳು ಇಲ್ಲಿ ಪರಸ್ಪರ ಬೆರೆತು ವಿಭಿನ್ನ ಭಾವನೆಗಳನ್ನು ಮೂಡಿಸುತ್ತವೆ. ಬಣ್ಣಗಳ ಸ್ಫೋಟವು ಮಕ್ಕಳ ಮನಸ್ಸಿನ ಉತ್ಸಾಹ, ಸ್ವಾತಂತ್ರ್ಯ ಮತ್ತು ಅನಿಸಿಕೆಗಳನ್ನು ಪ್ರತಿಬಿಂಬಿಸುತ್ತಿದೆ ಹೌದಷ್ಟೇ ಎಂದರು.

ಸ್ವತಃ ಕಲಾ ಜಗತ್ತಿನಲ್ಲಿ ವಿಹರಿಸುವ ಕಲಾವಿದರ ಮಾತಿಗೆ ಹೌದೆಂದು ಗೋಣಾಡಿಸಿದೆ. ನೋಡಿ ಈ ಕಲಾಕೃತಿಯಲ್ಲಿ ವಿಶೇಷವಾಗಿ ಯಾವುದೇ ನಿರ್ದಿಷ್ಟ ಆಕಾರಗಳಿಲ್ಲದಿದ್ದರೂ, ಅದರಲ್ಲಿರುವ ಚಲನೆಯ ಲಯ, ಬಣ್ಣಗಳ ಆಯ್ಕೆ ಮತ್ತು ವ್ಯತ್ಯಾಸಗಳು ಚಿತ್ರಕ್ಕೆ ಹೇಗೆ ಜೀವ ನೀಡುತ್ತವೆ. ಗಾಢ ಬೊಳೆ ಬಣ್ಣದ ಹಿನ್ನೆಲೆಯು ಮಧ್ಯಭಾಗದ ಜೀವಂತ ಬಣ್ಣಗಳಿಗೆ ಸಾಕಷ್ಟು ತೀವ್ರತೆಯನ್ನು ಕೊಡುತ್ತದೆ. ಇದು ತಾಂತ್ರಿಕ ಕಲೆಯ ಪ್ರಾಯೋಗಿಕ ನೋಟ. ಮಕ್ಕಳ ಅತೃಪ್ತ ಕಲ್ಪನೆಗೆ ದಾರಿ ತೋರಿಸುವ ಹಾದಿ.

ನೀಲಿ ಹಸಿರು ಬಣ್ಣಗಳ ಮಿಶ್ರಣದಿಂದ ಪ್ರಕೃತಿಯ ಗಾಢ ಪರಿಸರವನ್ನು ಕಲ್ಪಿಸಲಾಗಿದೆ. ಮಧ್ಯಭಾಗದಲ್ಲಿ ಕಾಣುವ ಮುಖಾಕೃತಿಯು ಪುಟಾಣಿ ಕಲಾವಿದೆಯ ಕಲ್ಪನೆಯ ಪಾತ್ರ. ಇದರ ಸೂತ್ರದಾರಿ ನೀವು ಎಂದು ಆತ್ಮೀಯರ ಮುಖ ನೋಡಿದೆ. ಅವರ ಮುಖದಲ್ಲಿ ಉತ್ಸಾಹ ಉಲ್ಲಾಸ ಎದ್ದು ಕಾಣುತ್ತಿತ್ತು. ಅವರ ಪಾಠ ಮುಂದುವರಿದಿತ್ತು. ನಾನೀಗ ವಿದ್ಯಾರ್ಥಿ. ಕೇಳಿಸಿಕೊಳ್ಳುವುದಷ್ಟೇ ಸಧ್ಯದ ಚಿಂತನೆ. ಬಲಭಾಗದಲ್ಲಿ ಧೂಪದಂತೆ ಹರಡಿದ ಕಪ್ಪು ಮತ್ತು ಬೂದು ಬಣ್ಣಗಳು ಮರ ಅಥವಾ ಪ್ರಾಣಿಗಳ ಶಿಲ್ಪದಂತೆ ತೋರುತ್ತವೆ. ಇಡೀ ಚಿತ್ರವು ಮರುಭೂಮಿಯ ನಡುವಿನ ಒಂದು ಹಸಿರು ತೋಟದ ರೀತಿಯಲ್ಲಿ ಕಂಡುಬರುತ್ತದೆ. ಕಾಫಿ ಎಸ್ಟೇಟ್ ತಲೆಯಲ್ಲಿ ಮಾಡಿ ಟೀ ಕುಡಿಯಬೇಕೆನಿಸಿತು. ಟೀ ಬ್ರೇಕ್ ನಂತರ ಚಿತ್ರ ವೀಕ್ಷಣೆ ವ್ಯಾಖ್ಯಾನ ಮುಂದುವರೆಯಿತು. ಹಸಿವಿನಿಂದ ತುಂಬಿದ ಕಲ್ಪನೆ, ವೈಭವ ಹಾಗೂ ಲಯಪೂರ್ಣ ಸ್ವಾತಂತ್ರ್ಯದೊಂದಿಗೆ ಮಕ್ಕಳ ನೈಸರ್ಗಿಕ ದೃಷ್ಟಿಕೋನ ಈ ಕಲಾಕೃತಿಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ ಅನಂತರಾಜು ಎಂದರು. ಹೌದು ಸಾರ್ ಎಂದೆ. ಮಂದುವರಿದು ಮತ್ತೊಂದು ಚಿತ್ರ ತೋರಿಸಿ ಈ ಚಿತ್ರಕಲೆಯಲ್ಲಿ ಹಸಿರು ಮತ್ತು ನೀಲಿ ಬಣ್ಣಗಳ ಪ್ರಸಾರದಿಂದ ಪ್ರಕೃತಿಯ ಒಂದು ಆನಂದಕರ ದೃಶ್ಯ ಚಿತ್ರಿತವಾಗಿದೆ. ಚಿತ್ರದಲ್ಲಿ ಕುದುರೆ ಅಥವಾ ಮುಂಗೋಸೆಯ ರೀತಿಯ ಎರಡು ಪ್ರಾಣಿಗಳು ಕಾಣಿಸುತ್ತವೆ, ಇಬ್ಬರಿಗೂ ಕಿವಿ ಉದ್ದವಾಗಿದ್ದು, ಮುಖದಲ್ಲಿ ಸಂತೋಷದ ಅಭಿವ್ಯಕ್ತಿ. ಹಿಂಭಾಗದಲ್ಲಿ ಒಂದು ಚಿಕ್ಕ ಹಕ್ಕಿ ಉಕ್ಕುವ ರೇಖೆಯೊಂದಿಗೆ ಚಿತ್ರಿತವಾಗಿದೆ. ಬಲಭಾಗದಲ್ಲಿ ಮರದಾಕೃತಿಯೊಂದು ಇದ್ದು, ಪ್ರಪಂಚದ ನೈಸರ್ಗಿಕತೆಯನ್ನು ಪ್ರತಿಬಿಂಬಿಸುತ್ತದೆ ಎಂದರು. ನನ್ನ ಲೇಖನಕ್ಕೆ ಇಷ್ಟು ಸಾಕೆನಿಸಿತು. ಆದರೂ ದೇಸಾಯಿ ಉತ್ಸಾಹಕ್ಕೆ ಭಂಗ ತರಲು ಮನಸ್ಸಾಗಲಿಲ್ಲ.

ಈ ಚಿತ್ರದಲ್ಲಿ ಮಕ್ಕಳ ದೃಷ್ಟಿಕೋನ, ಉತ್ಸಾಹ ಕಲ್ಪನೆ ಸ್ಪಷ್ಟವಾಗಿ ವ್ಯಕ್ತವಾಗಿದೆ. ಮುಕ್ತ ಶೈಲಿಯ ಈ ಕಲಾಕೃತಿಯು ಅವರ ನೈಜ ಭಾವನೆಗಳನ್ನು ವೈವಿಧ್ಯಮಯ ಬಣ್ಣಗಳಲ್ಲಿ ಅನಾವರಣ ಮಾಡುತ್ತದೆ.
ಹಳದಿ ಮತ್ತು ಕಂದು ಹಿನ್ನೆಲೆಯಲ್ಲಿ ಎರಡು ಮಾನವ ಆಕೃತಿಗಳು ಮತ್ತು ಮಧ್ಯದಲ್ಲಿ ಪ್ರಾಣಿ ಹೋಲುವ ಆಕೃತಿ ದೃಷ್ಟಿಗೆ ಬೀಳುತ್ತವೆ. ಎಡಭಾಗದಲ್ಲಿ ಒಂದು ಶ್ವೇತಾಕಾರದ ರಚನೆ ನೀರಿನ ಊತ ಅಥವಾ ಗೋಪುರದಂತೆ ಕಾಣುತ್ತದೆ. ಬಲಭಾಗದ ಆಕೃತಿಗೆ ಉಚ್ಚ ಉಡುಪು, ಮೇಲೆ ರೇಖೆಗಳು ಮುಂತಾದವು ಆಕರ್ಷಕವಾಗಿ ಮೂಡಿವೆ. ಮಧ್ಯದಲ್ಲಿ ಹಸಿರು ಬಣ್ಣದ ಆಕೃತಿ ಹುಳ ಅಥವಾ ಪಕ್ಷಿಯ ಭಾವನೆ ತೋರುತ್ತದೆ. ಈ ಪೇಂಟಿಂಗ್ ಮಕ್ಕಳ ನಿರೀಕ್ಷೆಗಳಿಂದ ಮುಕ್ತವಾದ ಕಲ್ಪನೆ ಮತ್ತು ಸಂವೇದನಾಶೀಲತೆಗೂ ಸಾಕ್ಷಿಯಾಗಿದೆ ಎಂದರು.

ಹೀಗೆ ಅವರು ಒಂದೊಂದು ಚಿತ್ರದ ಬಗ್ಗೆಯೂ ವಿವರಣೆ ನೀಡುತ್ತಾ ಹೋದರೆ ಯಾವುದನ್ನು ಎಡಿಟ್ ಮಾಡುವುದು ಎನಿಸಿತು. ಇರಲಿ ಇದನ್ನು ಎಡಿಟರ್ ಗೆ ಬಿಟ್ಟುಬಿಡುವುದು ಎಂದುಕೊಂಡೆ ಮುಂದುವರಿದು ಈ ಚಿತ್ರದಲ್ಲಿ ಬೇರೆ ಬೇರೆ ಬಣ್ಣಗಳ ಸಮನ್ವಯವು ಮಕ್ಕಳ ನೈಜ ಭಾವನೆ ಉತ್ಸಾಹ ಪ್ರತಿಬಿಂಬಿಸುತ್ತದೆ. ಎಡಬದಿಯಲ್ಲಿ ಕಾಣುವ ದೊಡ್ಡ ಪ್ರಾಣಿ ಮುಖ ಹಾಗೂ ಬಲಭಾಗದ ಎರಡು ಸಣ್ಣ ಆಕೃತಿಗಳು ಪರಸ್ಪರ ಸಂವಹನದಲ್ಲಿರುವಂತೆ ತೋರುತ್ತವೆ. ಹಸಿರು, ನೀಲಿ ಮತ್ತು ಗುಲಾಬಿ ಬಣ್ಣಗಳ ಬಳಕೆ ಚಿತ್ರಕ್ಕೆ ನಿಜವಾದ ಜೀವಂತತೆಯನ್ನು ನೀಡುತ್ತದೆ. ಮಧ್ಯಭಾಗದಲ್ಲಿ ಕಾಣುವ ಬಿಳಿ ರೇಖೆಗಳಿಂದ ಕೂಡಿದ ಗೋಳಗಳು, ತಾರೆಗಳು ಅಥವಾ ಹಕ್ಕಿಗಳ ಕಲ್ಪನೆ ತರಬಹುದು. ಕೆಳಭಾಗದ ಹಳದಿ ವೃತ್ತಾಕಾರ ಆಕೃತಿ ಕಿರಣ ಹೊರಹಾಕುವ ಸೂರ್ಯನಂತೆ ಕಾಣುತ್ತದೆ. ಇದು ಮಕ್ಕಳ ಕಲ್ಪನೆಯ ಶಕ್ತಿಗೆ ಜೀವಂತ ಸಾಕ್ಷಿಯಾಗಿದೆ. ಈ ಚಿತ್ರದಲ್ಲಿ ಕಾಣುವ ಹಸಿರು ಮೈಬಣ್ಣದ ಪ್ರಾಣಿ ಆಕೃತಿಯು ಕಾಲ್ಪನಿಕ ಜಗತ್ತಿನ ಪಾತ್ರವಂತೆ ತೋರುತ್ತದೆ. ಗುಲಾಬಿ, ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳ ಸಮನ್ವಯ ಚಿತ್ರವು ಬಾಳಿನಲ್ಲಿ ಬಣ್ಣಗಳ ಮಹತ್ವವನ್ನೂ ಪ್ರತಿಬಿಂಬಿಸುತ್ತದೆ. ಹಿಂಬದಿಯಲ್ಲಿ ಹರಡಿರುವ ಬಿಳಿ ಪುಟ್ಟಬುಟ್ಟೆಗಳು ಮಳೆ ಹನಿ ನಕ್ಷತ್ರಗಳಂತೆ ಕಂಡು ಬರುತ್ತವೆ. ಚಿತ್ರವು ಮಕ್ಕಳ ಕಲ್ಪನೆ, ಸಂತೋಷ ಮತ್ತು ಮುಕ್ತ ಅಭಿವ್ಯಕ್ತಿಯ ದರ್ಪಣ.. ದೇಸಾಯಿ ಮಾತು ಮುಂದುವರೆದಂತೆ ಬೇಲೂರು ದೇವಸ್ಥಾನದ ದರ್ಪಣ ಸುಂದರಿ ನೆನಪಾದಳು. ಬಾಲೆಯ ಮುಖ ನೋಡಿದೆ. ಮುಗ್ಧತೆ ಮನೆ ಮಾಡಿತ್ತು. ನೋಡಿ ಅನಂತರಾಜು ಎಂದ ಕೂಡಲೇ ಮತ್ತೆ ನನ್ನ ಚಿತ್ರ ಇನ್ನೊಂದು ಚಿತ್ರದತ್ತ ಹರಿದಿತ್ತು. ಆ ಚಿತ್ರದಲ್ಲಿ ಮನುಷ್ಯಾಕಾರದ ಆಕೃತಿಗಳು ಮಕ್ಕಳ ದೃಷ್ಟಿಕೋನದಿಂದ ಸರಳವಾಗಿ ಹಾಗೂ ನೇರವಾಗಿ ರೂಪುಗೊಂಡಿವೆ. ವಿವಿಧ ಬಣ್ಣಗಳ ಸ್ಪಷ್ಟ ಬಳಕೆ—ಹಳದಿ, ಕೆಂಪು, ಬಿಳುಪು ಮತ್ತು ಕಪ್ಪು—ಚಿತ್ರದಲ್ಲಿ ಪ್ರಬಲ ಭಾವನೆಗಳನ್ನು ಹುಟ್ಟಿಸುತ್ತದೆ. ಎಡಭಾಗದಲ್ಲಿರುವ ಅಕ್ಷರಶಃ ತಲೆಕಟ್ಟಿದ ಪಾತ್ರ ಮತ್ತು ಮಧ್ಯಭಾಗದಲ್ಲಿರುವ ಕುರುಚಲು ರೇಖೆಗಳು ಮೌಲಿಕತೆ ಮತ್ತು ತಲ್ಲೀನತೆಯ ಸಂಕೇತಗಳಂತೆ ಕಾಣಿಸುತ್ತವೆ. ಬಲಭಾಗದಲ್ಲಿ ಹರಿದು ಹಾದುಹೋಗುವ ಕಪ್ಪು ಶಾಯಿಯಂತೆ ಇರುವ ಭಾಗವು ಚಿತ್ರಕ್ಕೆ ಆಳವನ್ನೂ, ಕುತೂಹಲವನ್ನೂ ಹೆಚ್ಚಿಸುತ್ತದೆ. ಈ ಚಿತ್ರವು ಮಕ್ಕಳ ಅಕ್ಷರರಹಿತ ಕಥನ ಶೈಲಿಯ ವಿಶಿಷ್ಟ ಉದಾಹರಣೆ ಆಗಿದ್ದು, ಅದರಲ್ಲಿ ನಿರ್ಣಯಾತ್ಮಕ ಚಲನೆಯ ಚಿಹ್ನೆಗಳು ಕಾಣಿಸುತ್ತವೆ.

ಈ ಚಿತ್ರದ ಹಿನ್ನಲೆಯಲ್ಲಿ ಹಳದಿ, ಗುಲಾಬಿ ಹಾಗೂ ನೀಲಿ ಬಣ್ಣಗಳ ಮೃದುವಾದ ಹಿನ್ನೋಟವು ಸಂತೃಪ್ತ ಭಾವನೆ ಮೂಡಿಸುತ್ತದೆ. ಎಡಭಾಗದಲ್ಲಿ ಕಣ್ಣಿಗೆ ಬೀಳುವಂತೆ ಮೂಡಿಸಿರುವ ಜ್ವಲಂತ ಬಣ್ಣಗಳ ಅಕ್ಷರಶಃ ಸ್ಫೋಟಕ ವಿನ್ಯಾಸವು ಆಕೆಯ ಉತ್ಸಾಹ ಮತ್ತು ವಿಶಿಷ್ಟ ಕಲ್ಪನೆಗೆ ಸಾಕ್ಷಿಯಾಗಿದೆ. ಕೆಂಪು, ನೇರಳೆ ಹಾಗೂ ಕಪ್ಪು ಬಣ್ಣಗಳ ಜಾಡುಗಳು ಬಲವಾದ ಭಾವನೆಗಳನ್ನು ಉಂಟುಮಾಡುತ್ತವೆ. ಬಲಭಾಗದಲ್ಲಿ ಚದುರಿದ ಶಾಯಿಯಂತೆ ಹರಡಿರುವ ಬಣ್ಣಗಳು ಮಂಕಾದ ಕನಸಿನ ಅನುಭವವನ್ನು ನೀಡುತ್ತವೆ. ಚಿತ್ರದಲ್ಲಿ ಅಭಿವ್ಯಕ್ತಿಯ ಸ್ವಾತಂತ್ರ್ಯ, ಮೌಲಿಕತೆ ಮತ್ತು ಮಕ್ಕಳ ಕಲಾತ್ಮಕ ಸಾಹಸ ಸ್ಪಷ್ಟವಾಗಿ ತೋರಿಸಿಕೊಳ್ಳುತ್ತದೆ. ಈ ಚಿತ್ರದಲ್ಲಿ ಹಸಿರು, ಕೆಂಪು, ಬಿಳಿ ಹಾಗೂ ಕಪ್ಪು ಬಣ್ಣಗಳ ಸಮನ್ವಯದಿಂದ ವಿಭಿನ್ನ ಆಕಾರಗಳು ಮೂಡಿವೆ. ಎಡಭಾಗದಲ್ಲಿ ಮೃಗದಂತಿರುವ ಬಿಳಿ ಆಕೃತಿಯು ಕೃತಕತೆಯಲ್ಲದ ಶುದ್ಧ ಮಕ್ಕಳ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಮಧ್ಯಭಾಗದಲ್ಲಿ ಕೆಂಪು ಹಾಗೂ ಬಿಳಿ ಬಣ್ಣಗಳಿಂದ ರೂಪುಗೊಂಡ ಲಲಿತ ಚಲನವು ಚಿತ್ತಾರಕ್ಕೆ ಜೀವ ತುಂಬುತ್ತದೆ. ಬಲಭಾಗದಲ್ಲಿ ಇರುವ ಕಲಾತ್ಮಕ ರೇಖೆಗಳು ಆಕೆಯ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಈ ಚಿತ್ರದಲ್ಲಿ ಬಣ್ಣದ ನಿರಂತರ ಅನ್ವೇಷಣೆ ಮತ್ತು ನಿರ್ಭೀತಿಯಿಂದ ಮಾಡಿದ ಆವಿಷ್ಕಾರ ಸ್ಪಷ್ಟವಾಗುತ್ತವೆ. ಮಕ್ಕಳ ಕಲಾ ಅಭಿವ್ಯಕ್ತಿ ಹೇಗೆ ಅಗಾಧವಾದಿರಬಹುದು ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ.
ಹೀಗೆ ದೇಸಾಯಿ ಪ್ರದರ್ಶನಕ್ಕಿರಿಸಿದ ಒಂದೊಂದು ಚಿತ್ರಕ್ಕೂ ತಮ್ಮದೇ ವ್ಯಾಖ್ಯಾನ ನೀಡಿದರು. ಅಂದ್ದಾಗೆ ಈ ಡಿಂಪನಾ ಈ ಬಿ.ಎಸ್.ದೇಸಾಯಿ ಅವರ ಮೊಮ್ಮಗಳು. ಈಕೆಯ ತಂದೆ ಶಶಿಕಿರಣ ದೇಸಾಯಿ ಕೂಡ ಉತ್ತಮ ಚಿತ್ರ ಕಲಾವಿದರು. ಇವರ ಕಲೆಗಾರಿಕೆಯ ಬಗ್ಗೆಯೂ ಈ ಹಿಂದೆ ಬರೆದಿರುವೆ. ತಂದೆ ಅಜ್ಪನ ಹಾದಿಯಲ್ಲೆ ಅತಿ ಚಿಕ್ಕ ವಯಸ್ಸಿಗೆ ಕುಂಚ ಹಿಡಿದು ಚಿತ್ರಿಸ ಹೊರಟ ಬಾಲೆ ಈ ಕಲೆಯಲ್ಲಿ ಸಾಧನೆ ಮಾಡಲಿ ಎಂದು ವಿಶ್ ಮಾಡಿದೆ.
—-
ಗೊರೂರು ಅನಂತರಾಜು,
ಹಾಸನ,
9449462879

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group