ಹೀಗೆಂದು ಎಷ್ಟು ಸಲ ಅಂದುಕೊಂಡಿರುತ್ತಾರೆ ಕುಡಿಯುವವರು. ಎಷ್ಟು ಸಲ ಏನು ಪ್ರತಿ ದಿನವೂ ಅಂದುಕೊಂಡೇ ಇರುತ್ತಾರೆ. ಬೆಳಗಿನಿಂದ ಸಂಜೆಯವರೆಗೂ ಅವರ ತಲೆಯಲ್ಲಿ ಇವತ್ತಿನಿಂದ ಕುಡಿಯಬಾರದು ಎಂಬ ಯೋಚನೆಯೇ ಇರುತ್ತದೆ. ಸಂಜೆಯ ಹೊತ್ತಿಗೆ ಸ್ವಲ್ಪ ಎಡ ಮಿದುಳು ಒಂದು ಕ್ಷಣ ಕೆಲಸ ನಿಲ್ಲಿಸಿ ಮತ್ತೆ ಮುಂದುವರೆಸುತ್ತದೆ. ಮತ್ತದೇ ಲೋಕ ; ಬಾಟ್ಲು, ಗ್ಲಾಸು, ಸಾರಾಯಿ ಘಾಟು.....
ಇದು...
*ಕಯ್ಯಾರ ಕಿಞ್ಞಣ್ಣ ರೈ,ಕನ್ನಡ ಹೋರಾಟಗಾರರು ಮತ್ತು ಹಿರಿಯ ಸಾಹಿತಿಗಳು ಇವರಿಗೆ ಹುಟ್ಟು ಹಬ್ಬದ ಶುಭಾಶಯಗಳು.*
ಗಡಿನಾಡಿನ ಕವಿ ಕಯ್ಯಾರ ಕಿಞ್ಞಣ್ಣ ರೈ
(ಜೂನ್ ೮, ೧೯೧೫ - ಆಗಸ್ಟ್ ೯, ೨೦೧೫)
ಅಖಿಲ ಕರ್ನಾಟಕದ ಮಹಾಕವಿಯಾಗಿ, ಹಿರಿಯ ಸಾಹಿತಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿ, ಕಾಸರಗೋಡು ವಿಲೀನೀಕರಣದ ರೂವಾರಿಯಾಗಿದ್ದ ಕಯ್ಯಾರ ಕಿಞ್ಞಣ್ಣ...
ಹರಿಸಿದರು ಬೇಂದ್ರೆ
ಹರಿಸಿದರು ಬೇಂದ್ರೆ
ಲೇಸನುಂಡು ಲೇಸುಸರಿ
ಲೇಸೇ ಮೈಯ ಪಡೆದು
ಚಿಮ್ಮಲಿ ಈ ಸುಖವೆಂದು
ಚೆನ್ನಸರಸತಿಯ
ನಿತ್ಯ ಸೇವೆ ಇರಲಿ ಒಲವಿರಲಿ
ಪ್ರಾಣಿ ಪಕ್ಷಿಗಳಲಿ
ನಮಿಸು ಗುರುಹಿರಿಯರ
ಪರಿಸರವ ಪ್ರೀತಿಸೆಂದು
ನಡೆನುಡಿಯಲ್ಲಿ ಚೆನ್ನುಡಿಯಲಿ
ಚಿಮ್ಮಿಸುತ ಮೃದುಭಾವ
ಅರಳಿಸುತೆಲ್ಲರ ಮನ
ದಿವ್ಯವಿರಲಿ ಜೀವನಾ
ಎಂದು ಹರಿಸಿದರು ಬೇಂದ್ರೆ
ವಿಶ್ವದ ಕುಲಕೋಟಿಯನು
ಹರಿಸಿದರು ಬೇಂದ್ರೆ
ವಿಶ್ವದ ಚೇತನರನು.
ರಾಧಾ ಶಾಮರಾವ
ಧಾರವಾಡ
ನಾನು ನಾನಲ್ಲ
ಗುರು ಇರದೇ ಗುರಿ ತಲುಪುವ
ಗುರೂರು ಎನಗಿಲ್ಲ
ಗುರುತಿರದ ದಾರಿಯಲಿ
ಗುರಿತಪ್ಪುವ ಆಸೆ ನನಗಿಲ್ಲ
ಸತ್ಯವೇ ಹೇಳುವೆನು
ನಾನು ನಾನಲ್ಲ...
ಹೊತ್ತು ಹೆತ್ತಳೆನಗೆ
ನನ್ನ ಪ್ರೀತಿಯ ಅಮ್ಮ
ಗುರುತಿಗೊಂದ್ ಹೆಸರು
ಉಸುರಿದರು ಕಿವಿಯೊಳಗೆ
ನನಗೆ ನನ್ನ ಅತ್ತೆಮ್ಮಾ
ಹಸಿದಾಗ ತುತ್ತಿಟ್ಟು
ಅಕ್ಕರೆಯ ಮುತ್ತಿಟ್ಟು
ನನಗಾಗಿ ತಮ್ಮೆಲ್ಲ
ಕನಸುಗಳ ಹೂತಿಟ್ಟು
ದುಷ್ಟರ ಕೈಯಿಂದ
ಪಾರಾಗುವ ಮತಿ ಕೊಟ್ಟು
ಏನೂ ಅರಿಯದ ನನಗೆ
ಅರಿವಿನ ಅರಿವೆಯನು
ತೊಡಿಸಿದವರು ಬೇರೆ
ಗುರಿ ಮುಟ್ಟಲು ನನ್ನೊಳಗೆ
ಅಕ್ಷರದ ಗರಿಯಿಟ್ಟವರು ಬೇರೆ
ಪ್ರತಿ ಹೆಜ್ಜೆಗೂ, ಪ್ರತಿದಿನವೂ
ತರತರಹದ ಪಾಠ
ಕಲಿಸಿದವರೆಲ್ಲರೂ ಗುರು ಎನಗೆ
ಗುರು ಇರದೇ...
ನಾವು ಸೇವಿಸುವ ಆಹಾರ ಕೇವಲ ಜೀವರಕ್ಷಕವಾಗಿರದೇ ಆರೋಗ್ಯ, ಆಯುಷ್ಯವನ್ನೂ ನೀಡುವುದಾಗಿರಬೇಕು ಎಂಬ ಉದ್ದೇಶದಿಂದ ಎಲ್ಲರಲ್ಲಿ ಅರಿವು ಮೂಡಿಸಲು ಇಂದು " ವಿಶ್ವ ಆಹಾರ ಸುರಕ್ಷತಾ ದಿನ " ಆಚರಿಸಲಾಗುತ್ತಿದೆ.
ಹಿಂದಿನ ವರ್ಷವೇ ಅಂದರೆ ಜೂನ್ 7, 2019 ರಂದು ಆರಂಭಿಸಲ್ಪಟ್ಟ ಈ ದಿನವನ್ನು ನಾಗರಿಕರ ಆರೋಗ್ಯ ರಕ್ಷಣೆ ಆಹಾರದಲ್ಲಿದೆ ಎಂಬುದನ್ನು ತಿಳಿಸಲೋಸುಗ ಆಚರಿಸಲಾಗುತ್ತದೆ. ಡಾ.ಹರ್ಷವರ್ಧನ್ ಎಂಬುವವರು...
ಭಾರತ ದೇಶಕ್ಕೆ ಸ್ವಾಭಿಮಾನದ ಗಣಿಯಾಗಿ ಗೋಚರಿಸಿದ ಹಿಂದೂ ಹೃದಯ ಸಾಮ್ರಾಟನೆನಿಸಿಕೊಂಡ ಮಹಾರಾಜ ಛತ್ರಪತಿ ಶಿವಾಜಿಯವರ ಪಟ್ಟಾಭಿಷೇಕದ ದಿನ ಇಂದು. ಶಿವಾಜಿರಾಜೆ ಶಹಾಜಿರಾಜೆ ಭೋಂಸ್ಲೆ (ಫೆಬ್ರುವರಿ ೧೯, ೧೬೩೦/ಫೆಬ್ರುವರಿ ೧೯, ೧೬೨೭ - ಏಪ್ರಿಲ್ ೩, ೧೬೮೦) ಮರಾಠಾ ರಾಜ್ಯದ ಸ್ಥಾಪಕರು.
ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು. ಕೊಂಕಣ...
ಹೌದು, ಈ ಪ್ರಶ್ನೆಗೆ ಈಗ ಮತ್ತಷ್ಟು ಬಲ ಬಂದಂತಾಗಿದೆ. ಯಾಕೆಂದರೆ ಮೂಡಲಗಿ ತಾಲೂಕೆಂದು ಘೋಷಣೆಯಾಗಿದ್ದನ್ನು ರದ್ದು ಮಾಡಿದವರು ಇದೇ ರಮೇಶ ಜಾರಕಿಹೊಳಿಯವರು. ಹಾಗೆಂದು ಅವರೇ ಆಗ ಒಪ್ಪಿಕೊಂಡರು ಅಮೇಲೆ ಅದಕ್ಕಾಗಿ ಮೂಡಲಗಿಯಲ್ಲಿ ದೊಡ್ಡ ಹೋರಾಟವೇ ಆಯಿತು. ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಬೃಹತ್ ಪ್ರಮಾಣದ ವಿರೋಧವನ್ನೇ ಎದುರಿಸಬೇಕಾಯಿತು. ಆದರೂ ಶಾಸಕರು ಮುತುವರ್ಜಿ ವಹಿಸಿ ತಿಂಗಳುಗಟ್ಟಲೆ ಬೆಂಗಳೂರಿನಲ್ಲೇ...
ಮಾನ್ಯ ಮುಖ್ಯಮಂತ್ರಿಗಳೇ,
ನೇಕಾರಿಕೆ ಉದ್ಯೋಗದಲ್ಲಿ ತೊಡಗಿರುವ ರಾಜ್ಯದ ಲಕ್ಷಾಂತರ ಸ್ಥಿತಿ ಗಂಭೀರವಾಗತೊಡಗಿದೆ. ಕೊರೋನಾ ಲಾಕ್ ಔಟ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳುಗಳಿಂದ ವಿದ್ಯುತ್ ಮಗ್ಗಗಳನ್ನು ಅವಲಂಬಿಸಿರುವ ಲಕ್ಷಾಂತರ ಜನರು ಅಕ್ಷರಶಃ ಉಪವಾಸದ ದಿನಗಳನ್ನು ಕಳೆಯುತ್ತಿದ್ದಾರೆ. ಇದಕ್ಕೆ ಬೆಳಗಾವಿಯಲ್ಲಿ ಕಳೆದ ಒಂದು ವಾರದಿಂದ ನಡೆದಿರುವ ಕೆಲವು ಘಟನೆಗಳೇ ಸಾಕ್ಷಿಯಾಗಿವೆ.ಇದಕ್ಕಿಂತ ಬೇರೆಯ ಪುರಾವೆಗಳೇ ಬೇಕಾಗಿಲ್ಲ! ವಿದ್ಯುತ್ ಮಗ್ಗಗಳಲ್ಲಿ ತಯಾರಾಗಿ...
World environment day
United Nation Environment Programme ಸಂಸ್ಥೆ 1973
ಜೂನ್ 5 ರಂದು ವಿಶ್ವ ಪರಿಸರ ದಿನ ಆಚರಿಸಲು ಕರೆ ನೀಡಿತು. ಸಾಮಾನ್ಯವಾಗಿ ನಾವೆಲ್ಲರು ಅಭಿವೃದ್ದಿ ನೆಪದಲ್ಲಿ ,ಅತಿಯಾದ ಜನಸಂಖ್ಯೆ ಹೆಚ್ಚಳ,ಕೈಗಾರಿಕೆಗಳ ಹೆಚ್ಚಳ, ಜಲ ಮಾಲಿನ್ಯ, ವಾಯು, ಧ್ವನಿ ಮಾಲಿನ್ಯ, ಕಾಡು ನಾಶ...ಹೀಗೆ ಹತ್ತು ಹಲವಾರು ಕಾರಣಗಳಿಂದ ಪರಿಸರ ಮಾಲಿನ್ಯ ಮುಂದುವರೆದಿದೆ
ಜಲಮಾಲಿನ್ಯ,ಭೂ ಮಾಲಿನ್ಯ ,ವಾಯುಮಾಲಿನ್ಯ,...
*ಮಾತೇ ಜ್ಯೋತಿರ್ಲಿಂಗ*
ಮಾತು ಎನ್ನುವುದು ಮನುಜನಿಗೆ ದೇವನಿತ್ತ ಅಮೂಲ್ಯವಾದ ವರ. ಎಲ್ಲ ಜೀವಿಗಳಿಗಿಂತ ಭಿನ್ನ ಎನಿಸಿಕೊಂಡಿದ್ದು ಈ ಕಾರಣಕ್ಕೆ. ಮನುಜಕುಲದ ಹುಟ್ಟಿನೊಂದಿಗೆ ಮಾತು ಹುಟ್ಟಲಿಲ್ಲ, ಪ್ರಕೃತಿಯ ಮಡಿಲಲ್ಲಿ ಮನುಜಕುಲದ ಬೆಳವಣಿಗೆಯೊಂದಿಗೆ ಮಾನವನ ಬುದ್ಧಿಮಟ್ಟ ವೃದ್ಧಿಸಿದಂತೆ, ಮನುಷ್ಯ ಹಲವು ರೀತಿಯಲ್ಲಿ ಬೆಳೆಯತೊಡಗಿದ. ಹಕ್ಕಿಗಳ ಕೂಗು, ನದಿ ತೊರೆಗಳ ಶಬ್ದ, ಗಾಳಿಯ ಝೇಂಕಾರ ಮುಂತಾದ ಧ್ವನಿಗಳನ್ನು ಕೇಳುತ್ತಾ ಅವುಗಳಿಗೆ...