ರೈತ
ಮಳೆ ಗಾಳಿ ಬಿಸಿಲನು ನೋಡದ
ಬಂಡೆಗಲ್ಲು ನನ್ನ ರೈತ
ಅವನೇ ನಮಗೆ ಅನ್ನದಾತ.
ಬೆವರು ಸುರಿಸಿ ದುಡಿದು ತಾನು
ಜಗಕೆ ಅನ್ನ ನೀಡುತಿರುವ ಅನ್ನದಾತನು
ಕೋಟಿ ವಿದ್ಯೆಯಲ್ಲಿ ಮೇಟಿವಿದ್ಯೆ ಮೇಲು ಎಂದು
ತೋರಿಸಿದಾತನು.
ಭೂಮಿತಾಯಿ ಒಡಲು ತುಂಬಿ
ಭೂಮಿತಾಯಿ ಮಗನು ಆಗಿ
ಮಣ್ಣಿನಲ್ಲಿ ಮಾಣಿಕ್ಯ ತೆಗೆದು
ರತ್ನಕಂಬಳಿಯಲ್ಲಿ ಮೆರೆಯುತಿರುವನು.
ಬಸವ ಸೇವೆ ಮಾಡುತ ನೀನು
ಜಗಮೆಚ್ಚಿದ ಮಗನು ನೀನು
ನಿನ್ನ ಋಣವ ತೀರಿಸಲು ನಾವು
ಏಳು ಜನ್ಮ ಬೇಕು ನಮಗೆ.
ರೈತ ನಿನ್ನ ದುಡಿಮೆಗೆ
ಭೂಮಿತಾಯಿ ಒಲಿದು...
ವಿಶ್ವ ಹಾಲು ದಿನವನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ೨೦೦೧ರಿಂದ ಪ್ರತಿವರ್ಷ ಒಂದರಂದು ಆಚರಿಸುತ್ತಿದೆ. ಇದರ ಉದ್ದೇಶ ಹಾಲು ಮತ್ತು ಹೈನುಗಾರಿಕೆಯನ್ನು, ಆದರ ಮಹತ್ವವನ್ನು ವಿಶ್ವದಲ್ಲೆಡೆ ಪಸರಿಸುವುದೇ ಆಗಿದೆ.
♦️ಇತಿಹಾಸ
ವಿಶ್ವ ಆಹಾರ ದಿನವನ್ನು ಮೊದಲ ಬಾರಿಗೆ ೨೦೦೧ರಲ್ಲಿ ಆಚರಿಸಲಾಯಿತು. ಹೈನುಗಾರಿಕೆಯಿಂದ ವಿಶ್ವದಲ್ಲೆಡೆ ನೂರು ಕೋಟಿ ಮಂದಿ ಬದುಕು ಸಾಗಿಸುತ್ತಿದ್ದಾರೆ ಎಂದೂ ಮತ್ತು ಹಾಲನ್ನು ದಿನವಹಿ...
ಭಾರತದ ಸ್ವಾತಂತ್ರ್ಯ ಹೋರಾಟದ ಸಾವಿರಾರು ಕೆಚ್ಚಿನ ಕಲಿಗಳಲ್ಲಿ ' ವೀರ ' ಸಾವರ್ಕರ್ ಒಬ್ಬರು. ವಿನಾಯಕ ದಾಮೋದರ ಸಾವರ್ಕರ್ ಎಂಬುದು ಅವರ ನಿಜ ನಾಮಧೇಯ. ಮೊದಲಿಗೆ ಸಾವರ್ಕರ್ ಹೆಸರಿನ ಹಿಂದೆ ' ವೀರ ' ಇರಲಿಲ್ಲ. ಅದು ಆಮೇಲೆ ಬಂದಿದ್ದು.
ವಿನಾಯಕ ಸಾವರ್ಕರ್, ವೀರ ಸಾವರ್ಕರ್ ಆಗಿರುವುದರ ಹಿಂದೆ ಒಂದು ರೋಚಕ ಕಥೆಯಿದೆ.
ವೀರ ಎಂಬ ಉಪಾಧಿಯನ್ನು...
ನಂಬಿಕೆ
'ನಂಬಿ ಕೆಟ್ಟವರಿಲ್ಲವೋ ರಂಗಯ್ಯನ'ದಾಸವಾಣಿಯಂತೆ
ನಂಬಿಕೆ ಬಲು ನಾಜೂಕಾಗಿದೆ ನಾಶವಾಗದಿರಲಿ
ನಂಬಿಕೆ ನಂಬುವಂತಿರಲಿ ನಾಟುವಂತಿರಲಿ
ನಂಬಿದವರು ನೂರುಕಾಲ ನೆಲೆಗೊಳ್ಳುವಂತಿರಲಿ
ನಂಬಿಕೆ ನಡೆ-ನುಡಿಯಿಂದ ಕೂಡಿರಲಿ
ನಂಬಿಕೆ ನಯ-ವಿನಯದಿಂದ ಕೂಡಿರಲಿ
ನಂಬಿಕೆ ನಂಬಿಕೆದ್ರೋಹವಾಗದಿರಲಿ
ನಂಬಿಕೆ ನಾರದಂತಿರಲಿ
ನಂಬಿಕೆ ನೀರುಪಾಲಾಗದೆ
ಆಗಸದ ನಕ್ಷತ್ರದಂತಿರಲಿ
ನಂಬಿಕೆ ನನಗಾಗಿ ಅಲ್ಲ,ನಮ್ಮವರಿಗಾಗಿರಲಿ
ನಂಬಿಕೆ ಜಿಪುಣನಾಗದೆ ಜೇನುಗೂಡಿನಂತಿರಲಿ
ನಂಬಿಕೆ ನಗ-ನಾಣ್ಯದಿಂದ ಬರುವಂತದಲ್ಲ
ನಂಬಿಕೆಯ ನಟ್ಟು ಹರಿಯದಂತಿರಲಿ
ನಂಬಿಕೆಯೇ ಸುಖಜೀವನದ ಸೂತ್ರವಾಗಿಹುದು
ನಂಬಿಕೆಯ ಕಂಬಗಳು ಅಲುಗಾಡದಿರಲಿ
ನಂಬಿಕೆಯಲಿ ನಾನು ಎಂಬುದು ನಶ್ವರವಾಗಿ
ನಂಬಿಕೆ ಸದಾ ನಂದಾದೀಪವಾಗಿರಲಿ
🖋ಬಿ ಡಿ ರಾಜಗೋಳಿ
ಚಿಕ್ಕೋಡಿ
-----------------------------------------------------------------
*ಕೊರೋನಾ ಪಾಠ*
(ಹವ್ಯಕ ಭಾಷೆಯ...
ಇದು ಪರ್ಷಿಯನ್ ಸಾಹಿತ್ಯ ಪ್ರಕಾರ. ಇದನ್ನು ಕನ್ನಡಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ತಂದು ಹಲವಾರು ಕವಿಗಳು ಇದರಲ್ಲಿ ಕೃಷಿ ಕೈಗೊಂಡ ಈ ಪ್ರಕಾರಕ್ಕೆ ಮಾನ್ಯತೆ ಕೊಟ್ಟು ಬರೆಯುತ್ತಿದ್ದಾರೆ. ಇದು ಹೈದರಾಬಾದ್ ಕರ್ನಾಟಕದಲ್ಲೂ ಈ ಪ್ರಕಾರ ಚಾಲ್ತಿಯಲ್ಲಿದೆ.
ನಿಯಮಗಳು:-
ಇದು ಐದು ಸಾಲುಗಳ ಒಂದು ಸಾಹಿತ್ಯದ ಪ್ರಕಾರ.
1 ಮತ್ತು 3 ನೇ ಸಾಲುಗಳು ಐದೈದು ಅಕ್ಷರಗಳನ್ನು...
ಅಪ್ಪ, ಅಮ್ಮಂದಿರಿಗಾಗಿ ಒಂದು ವಿಶೇಷ ದಿನವಿರುವಂತೆ ಸಹೋದರರಿಗಾಗಿಯೂ ಇರುವುದೇ ಇಂದಿನ ದಿನ ಮೇ 24. ಅಣ್ಣ ತಮ್ಮ ಪರಸ್ಪರ ಸಹಬಾಳ್ವೆಯಿಂದ, ಪ್ರೀತಿಯನ್ನು ಹಂಚಿಕೊಂಡು ಬದುಕಬೇಕೆನ್ನುವುದು ಇಂದಿನ ದಿನದ ಸಂದೇಶ.
ಅಲಾಬಾಮಾದ ಸಿ. ಡೇನಿಯಲ್ಲ ರೋಡ್ಸ್ ಎಂಬಾತ ಈ ' ಬ್ರದರ್ಸ್ ಡೇ ' ಕಂಡುಹಿಡಿದಿದ್ದು ನಮಗೆ ಒಬ್ಬರಿರಲಿ ಇಬ್ಬರಿರಲಿ ಅಥವಾ ಸಹೋದರರು ಇಲ್ಲದೇ ಇರಲಿ ಎಲ್ಲರಲ್ಲಿ...
ಬೇಸಿಗೆ ಬಂತೆಂದರೆ ಸಾಕು ಮಾವಿನ ಹಣ್ಣಿನ ಜೊತೆ ಪೈನಾಪಲ್ ಹಣ್ಣಿನ ಸುಗ್ಗಿ !
ಹೊರಮೈಯಲ್ಲಿ ಮುಳ್ಳುಗಳಂತೆ ದಪ್ಪ ಕವಚ ಹೊಂದಿರುವ ಅನಾನಸು ಸಿಪ್ಪೆ ಸುಲಿದು ತಿಂದರೆ ರುಚಿ ಸ್ವರ್ಗ ತೋರಿಸುತ್ತದೆ. ಹುಳಿ, ಸಿಹಿ,ವಗರು ಮಿಶ್ರ ರುಚಿಗಳನ್ನು ಹೊಂದಿರುವ ಪೈನಾಪಲ್ ಚಿಕ್ಕ ಮಕ್ಕಳಾದಿಯಾಗಿ ಎಲ್ಲ ವಯಸಿನವರಿಗೂ ಅಚ್ಚುಮೆಚ್ಚಿನ ತಿನಿಸು.
ವಿಟಮಿನ್ ಸಿ ಇಂದ ತುಂಬಿಕೊಂಡಿರುವ ಈ ಹಣ್ಣು ನೋಡಲು...