Times of ಕರ್ನಾಟಕ
ಕಥೆ
ವಾರದ ಕಥೆ
ರಾಂಗ್ ನಂಬರ್ ಕಥೆ
ಬೆಳಗಿನ ಸುಪ್ರಭಾತ ದಿಂದಲೇ ನನ್ನ ಅಡಿಗೆ ಮನೆ ಒಡ್ಡೋಲಗ ದಲ್ಲಿ ತಕಥೈ ದಿಗ್ ಥೈ ಭರತ ನಾಟ್ಯ ಶುರುವಾಗುತ್ತಿತ್ತು. ಅತ್ತೆಮಾವರಿಗೆ ಕಷಾಯ,ಇವರಿಗೆ, ಮಗನಿಗೆ ಚಹಾ ನಂತರ ಅತ್ತೆ ಮಾವ ತಿಂಡಿ ತಿಂತಿರಲಿಲ್ಲ. ಹನ್ನೊಂದು ಗಂಟೆ ಅಷ್ಟೊತ್ತಿಗೆ ಅವರಿಗೆ ಊಟಕ್ಕೆ ರೆಡಿ ಮಾಡಬೇಕು.ಇವರಿಗೆ, ಮಗನಿಗೆ ತಿಂಡಿಯಾಗಿ ಊಟದ ಡಬ್ಬಿ ತಯಾರಿ ಆಗಬೇಕು. ಅದರಲ್ಲೇ...
ಕವನ
ಭಾನುವಾರದ ಕವನಗಳು
ಛತ್ರಿಗಳು
ಛತ್ರಿಗಳು ಸಾರ್
ನಾವು ಛತ್ರಿಗಳು
ಕತ್ರಿಗಳಿಗೆ
ಛತ್ರಿ ಹಿಡಿಯುವ
ಛತ್ರಿಗಳು ಸಾರ್
ನಾವು ಛತ್ರಿಗಳು
ಬಡತನದ ಬಿಸಿಲಿನಲ್ಲಿ
ಸುಟ್ಟುಕೊಂಡರು
ದುಃಖದ ಮಳೆಯಲ್ಲಿ
ಒದ್ದೆಯಾದರು
ಕತ್ರಿಗಳಿಗೆ
ಛತ್ರಿ ಹಿಡಿಯುವ
ಛತ್ರಿಗಳು ಸಾರ್
ನಾವು ಛತ್ರಿಗಳು
ಕತ್ರಿಗಳನ್ನು
ಪಲ್ಲಕ್ಕಿಯಲ್ಲಿ ಹೊತ್ತು
ಛತ್ರಿ ಚಾಮರ ಹಿಡಿದು
ಬಹು ಪರಾಕ್ ಹೇಳುವ
ಛತ್ರಿಗಳು ಸಾರ್
ನಾವು ಛತ್ರಿಗಳು
ಛತ್ರಪತಿಗಳಿಗಾದರು
ಇದ್ದವು ಶ್ವೇತಛತ್ರಿಗಳು
ಈ ಕತ್ರಿಪತಿಗಳಿಗೆ
ನಾವೆ ಕಪ್ಪುಛತ್ರಿಗಳು
ಛತ್ರಿಗಳು ಸಾರ್
ನಾವು ಛತ್ರಿಗಳು
ಎಲ್ಲೆಂದರಲ್ಲಿ
ಕೊಳೆತು ನಾರುವ
ತಿಪ್ಪೆಯಲ್ಲಿ ಬೆಳೆಯುವ
ಶ್ವಾನಛತ್ರಿಗಳಂಥ
ಛತ್ರಿಗಳು ಸಾರ್
ನಾವು ಛತ್ರಿಗಳು
ನಮ್ಮೆಲ್ಲರ ಮೇಲೊಂದು
ನೀಲಿಛತ್ರಿ
ಇದೆಯೆಂಬುದು
ಮರೆತವರು
ಛತ್ರಿಗಳು ಸಾರ್
ನಾವು ಛತ್ರಿಗಳು
ಎನ್.ಶರಣಪ್ಪ ಮೆಟ್ರಿ ಗಂಗಾವತಿಹಲ್ಲಿಗಳು
ಹಲ್ಲಿಗಳಿಗೆ ಗೋಡೆಗಳೆ
ಆಶ್ರಯಸ್ಥಾನ
ಗೋಡೆಗಳ ಮೇಲೆ
ಅವುಗಳ ಜೀವನ
ಹುಳಹುಪ್ಪಟೆಗಳನ್ನು
ಕಳ್ಳಹೆಜ್ಜೆಹಾಕಿ
ಗುಳುಮ್ಮನೆ
ನುಂಗಿಬಿಡುವವು
ಯಾರಾದರು
ಹಿಡಿಯಲು ಹೋದರೆ
ಬಾಲಕಳಚಿಕೊಟ್ಟು
ತಪ್ಪಿಸಿಕೊಳ್ಳುವವು
ಅವುಗಳು ಮೈಮೇಲೆ
ಉಚ್ಚೆಹೊಯ್ದರೆ
ಆಮ್ಲೀಯ ಮೂತ್ರದಿಂದ
ಚರ್ಮದ ಮೇಲೆ
ಬೊಬ್ಬೆಗಳೇಳುವವುಅಡಿಗೆಯಲ್ಲಿ...
ಕಥೆ
ಪುಸ್ತಕ ಪರಿಚಯ
ಪುಸ್ತಕದ ಹೆಸರು : *ದಿಲ್ಲಿ ಕಸ ಮತ್ತು ಇತರ ಕಥೆಗಳು*ಲೇಖಕರು : ಆಗುಂಬೆ ಎಸ್. ನಟರಾಜ್ಮೊದಲ ಮುದ್ರಣ : 2020, ಪುಟ 2.8, ಬೆಲೆ ರೂ. 150=00ಪ್ರಕಾಶಕರು : ಎ.ಎಸ್.ಬಿ. ಮೆಮೋರಿಯಲ್ ಟ್ರಸ್ಟ್ (ರಿ) ಬೆಂಗಳೂರು.ಅನ್ವೇಷಕ ಪ್ರವಾಸಿ ಆಗುಂಬೆ ನಟರಾಜ್ ಅವರು 1939 ರಲ್ಲಿ ಜನಿಸಿದರು. ಕೆನರಾ ಬ್ಯಾಂಕಿನಿಂದ ನಿವೃತ್ತರು 82 ವಯಸ್ಸಿನಲ್ಲಿ ಕಥಾ...
ಕವನ
ಡಾ.ಭೇರ್ಯ ರಾಮಕುಮಾರ್ ಚುಟುಕ ಮತ್ತು ಕವನಗಳು
....ಇತಿಹಾಸ.....
ಸ್ಥಳ ಇತಿಹಾಸ ಬರೆಯಲು
ಆ ಹಳ್ಳಿಗೆ ಬಂದ ಯುವಕ
ಸುಂದರ ಯುವತಿಯೊಡನೆ ಪರಾರಿಯಾಗಿ,
ಜನರ ನಾಲಿಗೆ ಮೇಲೆ
ಇತಿಹಾಸ ಬರೆದೇ ಬಿಟ್ಟ !!!!....ವೈಚಿತ್ರ್ಯ.....
ಆಕೆ ಬೊಜ್ಜು ಕರಗಿಸಲು ಚಪಾತಿ ತಿಂದಳು ,
ಈತ ಹೊಟ್ಟೆ ಬೆಳೆಸಲು ಪಕ್ವಾನ್ನ ತಿಂದ
ಗಾಳಿ ತುಂಬಿದ ಬಲೂನಾಗಿ ಅವಳಿನ್ನೂ ಹಿಗ್ಗಿ ದಳು,
ಅಜೀರ್ಣವಾಗಿ ಇವನು ಸಿಳ್ಳೆಕ್ಯಾತನಾದ !!!!..........ಜ್ವರ..ಜ್ವರ......
ಯಾವ ಕ್ಯಾಪ್ಸೂಲ್ ಗೂ ವಾಸಿಯಾಗದ
ಅವಳ ಪ್ರೇಮಜ್ವರ
ಬಾಯ್ ಫ್ರೆಂಡ್ ನ ಕಣ್ಣೋಟಕ್ಕೆ ಬಿಟ್ಟು,
ಆತ ಕೈಕೊಟ್ಟಾಗ...
ಕವನ
ರಾಧಾ ಶಾಮರಾವ ಕವನ
ವೀರ ಮರಣ
ಕಾಗಿ೯ಲ್ ಯುದ್ಧ ಸನ್ನಧ್ಧ ಸೈನಿಕ
ಗಮನಿಸಲಿಲ್ಲ
ಹೊಸ ಸಂಸಾರ
ಪುಟ್ಟ ಹಸುಳೆ
ಎಲ್ಲಕ್ಕಿಂತ ಮಿಗಿಲು
ಭಾರತಾಂಬೆಯ ಸೇವೆ
ಸದೆಬಡಿದ ಶತ್ರುಗಳ
ಹಿಂದಿನಿಂದ
ಬಡಿಯಿತು ಗುಂಡು
ತಿರುಗಿದ ಗುಂಡಿನ
ಮಳೆಗರೆದ
ಜಯ ಭಾರತ ಮಾತೆಎನುತ
ವೀರಮರಣವನಪ್ಪಿದ
ನಮನ ಒಂದೇ ಸಾಕೇ?
ಪ್ರಾಥಿ೯ಸೋಣ ;
ಅವನ ಚಿತೆಯ
ಭಸ್ಮದ ಕಣಕಣದಿ
ಹುಟ್ಟಿ ಬರಬೇಕು
ತೋರಿ ವಿರಾಟ್ ರೂಪ
ಮತ್ತೆ ಓಟ ಕಾಗಿ೯ಲ್ ಕಡೆಗೆ
ಶತ್ರುಗಳ ಮಾರಣ ಹೋಮಕೆ.
ಜಯಹಿಂದ ಜೈಭಾರತಾಂಬೆ.
ರಾಧಾಶಾಮರಾವ
ಕವನ
ವಿಕ್ರಂ ಶ್ರೀನಿವಾಸ್ ರ ಕವನಗಳು
"ಅಂಜಿಕೆ ಏಕೆ"
ಮಲ್ಲಿಗೆ ಮುಡಿಯಲು ಅಂಜುವೆ ಏಕೆ
ಕೊರೋನ ನನಗಿಲ್ಲ ಬಿಡುನೀ ಶಂಕೆ
ಸರ್ವಸ್ವ ನೀನೆ ಎಂದೆ ಅಂದು
ಸನಿಹವೆ ಬೇಡ ಎನುತಿಹೆ ಇಂದು
ಬಿಟ್ಟಿರಲಾರೆ ಎನುತಿದ್ದೆ ಅಂದು
ಬಿಟ್ಟರೆ ಸಾಕು ಎನುತಿಹೆ ಇಂದು
ಕೇಳದೆ ಕೊಡುತ್ತಿದ್ದೆ ಎಲ್ಲವ ಅಂದು
ಕೇಳಲೆಬೇಡ ಎನುತಿಹೆ ಇಂದು
ಪಾಸಿಟೀವ್ ಬಂದಿಲ್ಲ ನನಗೆ
ಅಂತರವೇಕೆ ನಮಗೆ
ಪ್ರೀತಿಯ ಕೊಲ್ಲೊದು ಸರೀನಾ
ದಯವಿಟ್ಟು ತೊಲಗು ಕೊರೋನಾ.ಒಳ್ಳೆಯ ಕೊರೋನಾ!
ಕಣ್ಣಿಗೆ ಕಾಣದ ಕ್ರಿಮಿ ಕೊರೋನ
ವಿಶ್ವದೆಲ್ಲೆಡೆ ಮಾಡಿತು ಯಮನ ಮಿಮಿಕ್ರೀನ, ಮಾರಣಹೋಮವನ್ನ...
ಕವನ
ರವಿವಾರದ ಕವನಗಳು
ಅತಿಥಿಗಳು ನಾವು
ಜಗತ್ತಿಗೆ ಬಂದ ಅತಿಥಿಗಳು
ಮಾಲಿಕರೆಂಬ ಗತ್ತು
ಬಂದು ಹೋಗುವ ಮಧ್ಯ
ಭಿನ್ನತೆಯ ಠಾವು
ಆಮಿಷಗಳ ಬಲಿಯಾಗಿ
ಅಧಿಕಾರದ ಮದವೇರಿ
ಸಂಪತ್ತು ಗಳಿಕೆಯ ಹುನ್ನಾರದಿ
ಹೊಸಗಿ ಹಾಕುತಿರುವೆವು
ನನ್ನವರೆಂಬ ಹೂ ಬಳ್ಳಿ
ನಾನಷ್ಟೆ ಎಂಬ ಭ್ರಮೆ
ಕಳಚುವ ಪರಿ
ಬಂದೆ ಬರುವುದು
ನಶ್ವರದ ಬದುಕು
ಅರ್ಥ ಮಾಡಿಕೊಳ್ಳದ
ಮೂಢತೆ ಆವರಿಸಿ
ಕೃತಕಗಳ ಮರ್ಮ
ಸ್ವೇಚ್ಛಾಚಾರದ ನಡವಳಿಕೆ
ಕಡಿವಾಣ ವಿಲ್ಲದ ಬಂಡಿ
ಎತ್ತೆಂದರೆತ್ತ ಸಾಗಿ
ಮಧುರ ಮನಗಳಿಗೆ
ಹಾಕಿದೆ ಬೀಗ
ತಕ್ಕಡಿಯ ಹಾಗೆ ಹೋರಳುತ
ಸಕ್ಕರೆಯ ಬಯಸುತ
ಅಕ್ಕರೆಯ ಮಾತನಾಡುವ
ನಟನ ಬದುಕು
ಪರದೆ ಮುಗಿಯುವ
ಮುನ್ನ ಎಚ್ಚರಿಕೆ ಇರಲಿ
ಕ್ಷಣ ಹೊತ್ತು
ಅಣಿ ಮುತ್ತು
ಇರಲಿ...
ಕವನ
ಚುಟುಕಗಳು…
ಅಂದು-ಇಂದು
ಹಿಂದೆ ಗುರುವಿದ್ದ,ಮುಂದೆ ಗುರಿ ಇತ್ತು
,ಎಲ್ಲೆಲ್ಲೂ ಆದರ್ಶ ವ್ಯಕ್ತಿಗಳ ಜನನ,
ಇಂದು ಎಲ್ಲೆಲ್ಲೂ ಬಾರ್ ಗಳು,ಪಬ್ ಗಳ ಹಾವಳಿ,
ಎಲ್ಲೆಲ್ಲೂ ಕುಡುಕರದೇ ಜತನ..ಕರೋನಾ
ಐಶ್ವರ್ಯದ ಮದದಿ ಮೆರೆಯುತ್ತಿದ್ದ ಮನುಜನಿಗೆ,
ಕರೋನಾ ಹಾಕಿತು ಮಾಯಲಾರದ ಬರೆ,
ಬಡವರು,ಅಶಕ್ತರು,ವೃಧ್ಧರು,ಮಕ್ಕಳಿಗೆ
ದಯೆತೋರು, ಓ ಕರೋನಾ...
ರಾಷ್ಟ್ರದ ಇತಿಹಾಸ ನಿರ್ಮಿಸಿದವರ,
ರಾಷ್ಟ್ರದ ಭವಿಷ್ಯ ನಿರ್ಮಿಸುವವರ
ಉಳಿಸು ಕರೋನಾ...
ಯಾರದೋ ತಪ್ಪಿಗೆ ಯಾರಿಗೋ ಬರೆ ಯಾಕೆ ???ದೇವನಿಗೆ
ಲಕ್ಷಾಂತರ ಭಕ್ತರ
ಲಕ್ಷ-ಲಕ್ಷ ಕೋರಿಕೆಗಳ
ಈಡೇರಿಸಲು ನಿನಗೆಷ್ಟು ಶ್ರಮ ?
ಅದಕಾಗಿ ನಿನ್ನ ಕರ್ತವ್ಯಕೆ
ರಜಾ...
ಕವನ
ಗುರ್ಚಿ ಹಾಡು
ಇದೊಂದು ಜಾನಪದ ಹಾಡು.ಮಳೆ ಬಾರದೇ ಇದ್ದಾಗ ತಲೆ ಮೇಲೆ ಗುರ್ಚಿಯನ್ನಿಟ್ಟುಕೊಂಡು ಮನೆ ಮನೆ ಅಡ್ಡಾಡಿ ನೀರು ಹುಯ್ದುಕೊಂಡು ಮಳೆಗಾಗಿ ಬೇಡುವ ಹಾಡು. ಸಣ್ಷವರಿದ್ದಾಗ ಈ ಹಾಡು ಕೇಳಿ ಮಜಾ ಪಡೆಯದವರೇ ಇಲ್ಲ. ಈಗ ಅದನ್ನು ಭ್ರಷ್ಟಾಚಾರಿ ರಾಜಕಾರಣಿಗೆ ಹೋಲಿಸಿ ಬರೆಯಲಾಗಿದೆ.ಭ್ರಷ್ಟಾಚಾರಿ
ಬುಚಿ೯ ಬುಚಿ೯
ಎಲ್ಲಾಡಿ ಬಂದಿ
ಖುಚಿ೯ಗಾಗಿ
ಸುತ್ತಾಡಿ ಬಂದಿ
ಹಳ್ಳಾ ಕೊಳ್ಳಾ
ಮಾರಿ ತಿಂದಿ
ಮೆಂಬರ ಆಗಿ
ಮೆರದಾಡಿ ಬಂದಿ.
ಹುಯ್ಯೋ ಹುಯ್ಯೋ
ಮಳೆರಾಯ ಅಂದಿ.
ರೊಕ್ಕದ ಮಳೆಯು
ಬರಲಿ...
ಕವನ
ಕವನ: ನಾನು-ನಾನೆಂಬ ಅಹಮಿಕೆ ಬೇಕೇ?
ತಿನ್ನುವ ಹಿಡಿ ಅನ್ನಕೆ,
ಸೂರ್ಯ ನೀಡುವ ಬೆಳಕಿಗೆ,
ಹಸಿರು ವೃಕ್ಷಗಳು ಪಸರಿಸುವ ತಂಗಾಳಿಗೆ ,
ಪ್ರಕೃತಿ ನೀಡುವ ಹನಿ-ಹನಿ ಜಲಕೆ ,
ಜೀವಮಾನ ಸವೆಸುವ ಓ ಮಾನವ ,
'ನಾನು,ನಾನು! 'ಎಂಬ ಅಹಮಿಕೆ ಬೇಕೇ ???
ಇನಿದನಿಯಲಿ ಹಾಡುವ ಕೋಗಿಲೆಗೆ,
ಸುಂದರ ದನಿ ನೀಡಿದ್ದು ನೀನೇನಾ ?
ಮುಗಿಲೆತ್ತರಕೆ ಹಾರುವ ಹಕ್ಕಿಗೆ,
ಹಾರುವುದ ಕಲಿಸಿದ್ದು ನೀನೇನಾ ?
ನೀರಲಿ ಸ್ವಚ್ಛಂದವಾಗಿ ಈಜುವ ಮೀನಿಗೆ
ಈಜು ಕಲಿಸಿದ್ದು ನೀನೇನಾ ???
ನಾನು, ನಾನೆಂದು...
About Me
11616 POSTS
1 COMMENTS
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



