Times of ಕರ್ನಾಟಕ
ಸುದ್ದಿಗಳು
ಕವನ: ಜಗತ್ತಿನ ಗಾಂಧಿ
🌹ಜಗತ್ತಿನ ಗಾ0ಧಿ🌹
ಗಾ0ಧಿಯೆ0ಬ ಬ0ಡೆಗಲ್ಲಿನ
ಆದರ್ಶ ವಿಚಾರಗಳಿಗೆ
ಜಗತ್ತೆ ಮ0ಡಿಯೂರಿದೆ
ಜಾಗತೀಕರಣದ
ಬಿರುಗಾಳಿಯಲ್ಲಿ ನರಳುವ
ಇ0ದಿನ ಸ0ಧಿ ಸಮಯದಿ
ಸತ್ಯ ಶಾ0ತಿ ಅಹಿಂಸೆಯ ತ0ದೆ
ಮತ್ತೆ ಮತ್ತೆ ನೆನಪಾಗುವರು
ಹನ್ನೆರಡನೆಯ ಶತಮಾನದ
ಮಹಾತ್ಮಾ ಬಸವೇಶ್ವರರು
ಸಮಸಮಾಜ ಕಟ್ಟುವಲ್ಲಿ
ಕ್ರಾಂತಿ ಮಾಡಿದರು.
ಈ ಶತಮಾನದಿ
ಸತ್ಯದ ಸರದಾರರು
ಶಾ0ತಿಯ ದೂತರು
ಅಹಿಂಸೆಯ ಪರಿಪಾಲಕರು
ಮಹಾತ್ಮ ಗಾಂಧಿಜಿಯವರು.
ಮಹಾತ್ಮಾ ಗಾ0ಧೀಜಿಯವರ
ನೇತೃತ್ವದಲ್ಲಿ ಸ್ವಾತ0ತ್ರಕ್ಕಾಗಿ
ತಾಯಿ ಭಾರತಾ0ಬೆಯ
ಒಡಲ ಧ್ವನಿಗಳೆಲ್ಲ
ಒ0ದೇ ಎ0ಬ ಒಗ್ಗಟ್ಟಿನ
ಬಲಹುರಿಯಾಗಿ ಸಾಗಿದರು.
ಜಗತ್ತಿನಲ್ಲಿ ಶಾಂತಿ ನೆಲೆಸಲು
ಮಹಾತ್ಮ ಗಾ0ಧೀಜಿಯವರ
ಆದರ್ಶ ವಿಚಾರಗಳು
ಅ0ದು ಅವಶ್ಯವಾಗಿದ್ದವು
ಇ0ದೂ ಅವಶ್ಯವಾಗಿವೆ
ಮು0ದೂ ಬೇಕಾಗಿವೆ.ಸಂಜಯ.ಜಿ.ಕುರಣೆ
ಶಿಕ್ಷಕರು
ತಾಲೂಕು. ಕಾಗವಾಡ...
ಕವನ
ಕವನಗಳು
ಜೀವನದ ಪಯಣ
ಸಾಗುತ್ತಿದೆ ಜೀವನದ ಪಯಣ ಬಾಳ ದೋಣಿ ಪಥದಲ್ಲಿ ಹುಟ್ಟು ಹಾಕಿ ಸಾಗಿಸುವ ಪಯಣಿಗನು
ಆ ನಾವಿಕನು
ಈ ದಡದಿಂದ ಆ ದಡಕ್ಕೆ ಸಾಗುವುದರೊಳಗೆ ಯೌವನದಿಂದ ಮುಪ್ಪು ಆವರಿಸುತ್ತದೆ ಬಾಳ ದೋಣಿಯ ಪಥದಲ್ಲಿ
ಕಷ್ಟ ಕಾರ್ಪಣ್ಯಗಳು ಬಂದರೂ ಕೂಡ ಜೀವಿಗಳು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿವೆ ಮೈಮರೆತು ಈ ಬಾಳ ದೋಣಿಯ ಜೀವದ ಪಯಣದಲ್ಲಿ ನಾನು ಒಬ್ಬ ಪಯಣಿಗ
ಪಯಣ ಮುಗಿಯುವುದರೊಳಗೆ...
ಕವನ
ಕವನ
( ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಹತ್ಯಾಚಾರಕ್ಕೊಳಗಾದ ಮನಿಷಾ ಎಂಬ ಬಾಲಕಿಯ ಕುರಿತು ಶರಶ್ಚಂದ್ರ ತಳ್ಳಿ ಕವನ )
ಮನಿಷಾ! ಮುಂದಿನ ಜನುಮಗಳಲಿ...?
ನಿನ್ನ ದೇಹವು
ಕತ್ತಲೆಯ ಚಾಪೆಯಾಗುತ್ತದೆ
ಎಂದೆನಿಸಿದಾಗ-
ಅವರ ಕೊರಳ ಕೊಳವೆ ಕಡಿಬೇಕಿತ್ತು
ನಿನ್ನ ಚಿತೆಯ ಬೆಂಕಿ
ಕೆನ್ನಾಲಿಗೆ ಚಾಚುತಿದೆ
ಎಂದೆನಿಸಿದಾಗ-
ಕೈಗೆ ಸಿಕ್ಕ ಕಲ್ಲಿನಲಿ
ಹಲ್ಲಿಗೆ ಜಜ್ಜಬೇಕಿತ್ತು
ಮನಿಷಾ!ನಿನ್ನೆದೆಗೂಡನು
ಕುಲುಮೆಯಲಿ ಬೇಯಿಸುತ್ತಾರೆ
ಎಂದೆನಿಸಿದಾಗ-
ಪೆನ್ನನು ಆಯುಧ ಮಾಡಿ,
ಒಂದಿಬ್ಬರ ಕಣ್ಣಿಗಿರಿಯಬೇಕಿತ್ತು
ನಿನ್ನ ಜೀವದ ಕಥೆ
ಮುಗಿದೇ ಹೋಯಿತು
ಎಂದೆನಿಸಿದಾಗ-
ಅಬ್ಬಕ್ಕನಂತೆ ಅಬ್ಬರಿಸಿ
ಒಂದೆರಡು ಹೆಣವಾದರೂ ಉರುಳಿಸಬೇಕಿತ್ತು
ನಿನ್ನ ಬದುಕಿನ ವಿದಾಯ
ಹರಾಜಾಗುತಿದೆ
ಎಂದೆನಿಸಿದಾಗ-
ಹುರಿಗೊಂಡ ಅವರ
ಅಂಗಗಳನು...
ಕವನ
ಕವನ: ಅಕ್ಷರದಾಂಜಲಿ
ಅಕ್ಷರದಾಂಜಲಿ
ಆಗಸದಂಚಿನ ನೇಸರನೆಲ್ಲಿ ಮರೆಯಾದನು
ಮಗುವಿನಂತಹ ಮನಸಿನ ಗಾನ ಗಂಧರ್ವನು
ಮರೆಯಾದ ಸುಕೋಮಲ ಸುಮವೊಂದು
ದೇವನೊಲುಮೆಯ ಚರಣಕಮಲಗಳಿಗೆ ಮುಡಿಪಾಯಿತೇ
ಗಡಿಗಳಾಚಿನ ಸ್ನೇಹ ಪ್ರೇಮ ಕರೆಯು ಕೇಳಿತು
ಗಾನಲಹರಿಯ ಸ್ವರ ಮಾಧುರ್ಯವ ಮನ ಬಯಸಿತು
ಆಕಾಶದೀಪವು ಮರೆಯಾಗಿ ಕತ್ತಲಾವರಿಸಿತು
ಭಾರತ ಮಾತೆಯ ಮಡಿಲಲಿ ಚಿರನಿದ್ರೆಗೈದಿತು
ಸ್ವರ ಸಾಮ್ರಾಟನ ಅಪಧಮನಿಗಳಲಿ
ಸಂಗೀತದ ಸ್ವರ ಲಾಲಿತ್ಯವು ತುಂಬಿರಲು
ಏರಿದೆತ್ತರದಲೂ ನಮ್ರತೆಯ ಸಾಕಾರವು
ಎಷ್ಟು ಜನರ ಮನವ ಕದ್ದ ಗಾರುಡಿಗನು
ನಾದದ ತಪಸ್ವಿಯಾಗಿ ಅರಳಿದಂತೆ
ಸಾಗರವೇ ತಾನಾದರೂ ಬಿಂದುವಿನಂತೆ
ತುಂಬಿದ ಕೊಡ...
ಕವನ
ಕವನ: ಗಾಂಧಿ ಬೀಜ
ಗಾಂಧಿ ಬೀಜ
ಸರ್ಕಲ್ ಗಳಲಿ ನಿಲ್ಲಿಸಿದ ಪಂಚಲೋಹದ ಪುತ್ಥಳಿ ಕಂಡು ಧೂಳು ಮೆತ್ತಿದ ಕೋಲು ಕನ್ನಡಕ ಊದಲು ಉಸಿರಿಲ್ಲದೆ
ನಿತ್ರಾಣಗೊಂಡ ಮುದುಕ ಮಮ್ಮಲ ಮರುಗಿದ್ದಾನೆ
ಶತಮಾನದ ಹಿಂದೆ ಉಪವಾಸ ಸತ್ಯಾಗ್ರಹ ಕೈಗೊಂಡರೂ ದೇಶವಾಸಿಗಳ ನೆತ್ತಿಗೆ ನೆರಳು ಹೊಟ್ಟೆಗೆ ಕೂಳು ಸಿಗದಿದ್ದಕ್ಕಾಗಿ ಲೊಚಗುಡುತ್ತಿದ್ದಾನೆ
ಗಲ್ಲಿ ಗಲ್ಲಿಗಳಲ್ಲಿ ಮಚ್ಚು-ಲಾಂಗು
ಗಸ್ತು ತಿರುಗುವುದನ್ನು ಕಂಡು ಬೊಚ್ಚು ಬಾಯಿಯ ಮುದುಕ ಬೆಚ್ಚಿಬಿದ್ದಿದ್ದಾನೆ
ಅರಮನೆ ಗುರುಮನೆ ಸೆರೆಮನೆಗಳಲೂ
ಕಿಡಿನುಡಿ ಕೆನ್ನಾಲಿಗೆ ಚಾಚಿ...
ಕವನ
ಗಾಂಧಿ ತಾತನ ಕವನಗಳು: ಡಾ.ಭೇರ್ಯ ರಾಮಕುಮಾರ್, ರೇಷ್ಮಾ ಕಂದಕೂರ, ಪುಷ್ಪಾ ಮುರಗೋಡ,ಶರಶ್ಚಂದ್ರ,ರಾಧಾ ಶಾಮರಾವ, ಗಿರಜಾ ಮಾಲಿಪಾಟೀಲ, ಬಸಮ್ಮ ಹಿರೇಮಠ….ಕವನಗಳು
ಇವರೇ ಗಾಂಧಿ ಅಜ್ಜ
ಕೈಲಿ ಕೋಲು, ಬಿರುಸು ನಡಿಗೆ
ಬಾಯಲ್ಲಿ ಸತ್ಯ, ಶಾಂತಿ ಮಂತ್ರ
ರಾಷ್ಟ್ರದ ಒಳಿತಿಗಾಗಿ ಹೋರಾಡಿಯೂ,
ಅಧಿಕಾರ ಕೈಬೀಸಿ ಕರೆದಾಗ,
ನಿರ್ಲಿಪ್ತವಾಗಿ ಕುಳಿತವರು...
ಇವರೇ ನಮ್ಮ ಗಾಂಧಿ ಅಜ್ಜ.
ರಾಷ್ಟ್ರಮಾತೆಯ ಕಣ್ಣು,ಕಿವಿ,ಬಾಯಿ ಮುಚ್ಚಿ
ಠೇಂಕರಿಸುತ್ತಿದ್ದ ಕೆಂಪು ಜನರಿಗೆ
ಸತ್ಯಾಗ್ರಹದಿಂದ ಪಾಠ ಕಲಿಸಿದವರು ,
ಸರಳ ನಡೆ-ನುಡಿ- ಜೀವನದಿಂದ
ವಿಶ್ವಕ್ಕೇ ಮಾದರಿಯಾದವರು
ಇವರೇ ನಮ್ಮ ಗಾಂಧಿ ಅಜ್ಜ....
ಪತ್ನಿ,ಪುತ್ರರ ಮರೆತು, ಹೊಣೆಯರಿತು
ಸ್ವಾತಂತ್ರ್ಯ ಹೋರಾಟ ಸಂಘಟಿಸಿ,
ಕಾಯ್ದೆ ಮುರಿದು, ಚಳವಳಿ ತೆಗೆದು
ಲಕ್ಷಾಂತರ ಜನರಿಗೆ ಕೆಚ್ಚು...
ಲೇಖನ
ಅಕ್ಟೋಬರ್ 2, ಗಾಂಧಿ ಜಯಂತಿ ವಿಶೇಷ ಚಿಂತನ
ಸತ್ಯ ಪಥದ ನಿತ್ಯ ಸಂತ ಇಂಟ್ರೋ ಅನಂತ ತಾರಾಮಂಡಲದಲ್ಲಿ ಅದೆಷ್ಟೋ ಅಗಣಿತ ತಾರಾಪುಂಜಗಳಿದ್ದರೂ ಭುವಿಗೆ ಬೆಳಕನೀಯಲು ಸೂರ್ಯ-ಚಂದ್ರರೇ ಹೇಗೆ ಅತ್ಯಂತ ಸಮೀಪ ಸಂಪನ್ಮೂಲರೋ ಹಾಗೆಯೇ ಅದೆಷ್ಟೋ ಮತ-ಧರ್ಮಶಾಸ್ತ್ರ ತಜ್ಞರು ಗತಿಸಿಹೋಗಿದ್ದರೂ ಸತ್ಯ-ಅಹಿಂಸೆ ಎಂಬ ಮನುಷ್ಯ ಜೀವಿಯ ನಿಜಾಂತರಾಳದ ಅಂತಃಸತ್ತ್ವವನ್ನು ಸರ್ವರಲ್ಲಿಯೂ ವ್ಯಕ್ತಪಡಿಸಲು ಕಾರಣೀಭೂತರಾದ ಏಕೈಕ ನವ್ಯಜಗದ ಸಂತನೇ ಈ ಮಹಾತ್ಮಗಾಂಧೀಜಿ.ಭಾರತದ ಭಾಗ್ಯವಿಧಾತ ಮತ್ತು ರಾಷ್ಟ್ರಪಿತ...
ಸುದ್ದಿಗಳು
ಗಾಂಧಿ ದನಿ ದರ್ಪಣ –” ಅಮರ ಬಾಪು ಚಿಂತನ “- ಮಾಸಿಕ
ಮಹಾತ್ಮ ಗಾಂಧಿ ಒಂದು ವಿಸ್ಮಯ. ಅವರು ಅಪ್ರಸ್ತುತರು ಎಂದು ಹೇಳುತ್ತಿರುವಾಗಲೇ ಅವರು ಹೆಚ್ಚು ಪ್ರಸ್ತುತರಾಗಿ ಪ್ರಕಟವಾಗಿ ಬಿಡುತ್ತಾರೆ. ಗಾಂಧಿ ವಿಚಾರಧಾರೆ ಅರ್ಥಮಾಡಿಕೊಳ್ಳತ್ತಲೇ ನಾವು ಅವರ ಮಾತಿನ ಆಳ ಅರಿಯದೆ ಗೊಂದಲಕ್ಕೆ ನಿಲುಕುವುದು ಉಂಟು.ಜಗತ್ತು ಕಂಡ ಶ್ರೇಷ್ಟ ಚಿಂತಕ, ನುಡಿದಂತೆ ನಡೆದು ವಿಶ್ವಕ್ಕೇ ಆದರ್ಶಪ್ರಾಯರಾದ ಅಪರೂಪದ ವ್ಯಕ್ತಿ ಮೋಹನದಾಸ ಕರಮಚಂದ ಗಾಂಧಿ . ಈಗಿನ ತಾಂತ್ರಿಕ...
ಕವನ
ಕವನ: ಹೃನ್ಮನೆ
ಎಲ್ಲಾ ಹೃದಯವಂತರಿಗೆ ವಿಶ್ವ ಹೃದಯ ದಿನಾಚರಣೆಯ ಶುಭಾಶಯಗಳು.
ಹೃನ್ಮನೆ
ಎರಡು ಬಾಗಿಲು ಇರುವ
ಈ ಪುಟ್ಟ ಮನೆಗೆ
ನಾಲ್ಕು ಕೋಣೆಗಳಿಹವು
ಬಡಿತ ಗಳಿಗೆ-ಗಳಿಗೆ!!
ನಿಚ್ಚಳ ಪ್ರೀತಿಗೆ
ನೆಲೆ ಇಹುದು ಒಳಗೆ
ಕಶ್ಮಲ ಕಪಟತನವದು
ಬಾಗಿಲಿನ ಹೊರಗೆ
ಬಿಟ್ಟ ಲಜ್ಜೆಯ ಹಗೆಯು
ಚುಚ್ಚು ಮಾತಿನ ಬಗೆಯು
ಸುಟ್ಟ ಚುಟ್ಟದ ಹೊಗೆಗೆ
ಉಸಿರು ಕಟ್ಟುವುದಿದಕೆ!!
ಕೆಟ್ಟ ಕೊಬ್ಬಿನ ಸ್ನೇಹ
ದುಷ್ಟ ವ್ಯಸನದ ದಾಹ
ಕುಟ್ಟುವಂಥಾ ಚಿಂತೆ
ಧ್ವಂಸಗೊಳಿಸಲು ನಾಂದಿ!!
ಸ್ವಾಸ್ಥ್ಯಚಿತ್ತದ ಗಾಳಿ
ನೇಮ-ನಿಷ್ಠೆಯ ಬೇಲಿ
ಪ್ರಮುಖ ಶಾಂತಿಯ ರವಳಿ
ಈ ಮನೆಯು ಬೆಳಗಲು!!ಚುಟ್ಟ=ಬೀಡಿ
ರವಳಿ= ಶಕ್ತಿ✍️ ಕಮಲಾಕ್ಷಿ ಕೌಜಲಗಿ.
ಲೇಖನ
ಉತ್ತರ ಕರ್ನಾಟಕದ ಮೊದಲ ಮಹಿಳಾ ಶಾಲೆ
ಇದೊಂದು ಅಪರೂಪದ ಫೋಟೋ. ಉತ್ತರ ಕರ್ನಾಟಕದ ಮೊದಲ ಮಹಿಳಾ ಶಾಲೆಯದು. ಸನ್ 1912 ರಲ್ಲಿ ವಿದ್ಯಾರ್ಥಿನಿಯರಿಗಾಗಿ ವಿ ಜಿ ದೇಸಾಯಿಯವರು ಮೊದಲ ಮಹಿಳಾ ಶಾಲೆಯನ್ನು ಬೈಲಹೊಂಗಲ ತಾಲೂಕಿನ ಚಚಡಿ ಎಂಬಲ್ಲಿ ಸ್ಥಾಪಿಸಿದರು.ಅರಟಾಳ ರುದ್ರಗೌಡರ ಅಳಿಯ ವಿ ಜಿ ದೇಸಾಯಿಯವರು. ಇಪ್ಪತ್ತನೆಯ ಶತಮಾನದ ಕೊನೆಯ ದಶಕದ ವರೆಗೆ ಮಹಿಳೆಗೆ ಶಿಕ್ಷಣಕ್ಕೆ ಪ್ರಬಲ ಕಾನೂನು ಬೆಂಬಲ ಇರಲಿಲ್ಲ....
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



