Times of ಕರ್ನಾಟಕ
ಸುದ್ದಿಗಳು
ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸೋಣ – ಈರಣ್ಣ ಕಡಾಡಿ
ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಠ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ ಹಾಗೂ ಅನನ್ಯತೆಗಳನ್ನು ಎತ್ತಿಹಿಡಿಯೋಣ. ಈ ಮೂಲಕ ರಾಷ್ಟ್ರದ ಅಭ್ಯುದಯಕ್ಕೆ ಶ್ರಮಿಸೋಣ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕರೆ ನೀಡಿದರು.ಕಲ್ಲೋಳಿ ಪಟ್ಟಣದಲ್ಲಿ ಶುಕ್ರವಾರ ಜ.೨೬ ರಂದು ಶ್ರೀ...
ಸುದ್ದಿಗಳು
ಸಾಧನೆಗೆ ಸಂತಸಪಡುವ ಎರಡು ಜೀವಗಳೆಂದರೆ ಗುರು ಮತ್ತು ತಾಯಿ – ಮುಕ್ತಾನಂದ ಮಹಾಸ್ವಾಮಿಗಳು
ಮುನವಳ್ಳಿಃ “ಜೀವನದಲ್ಲಿ ನೀವು ಏನೇ ಸಾಧನೆ ಮಾಡಿ,ಆ ಸಾಧನೆಯನ್ನು ಕಂಡು ಸಂತಸಪಡುವ ಎರಡು ಜೀವಗಳೆಂದರೆ ಗುರು ಮತ್ತು ತಾಯಿ. ಜೇವೂರ ಗುರುಗಳು ಸಂಬಂಧಕ್ಕೆ ಬೆಲೆ ಕೊಟ್ಟರು. ಸಮಾಜಕ್ಕೆ ಗೌರವ ಕೊಟ್ಟರು.ಆದರ್ಶವೇ ದೇವರೆಂದು ಬಾಳಿದರು.ಅವರು ಕಟ್ಟಿದ ಶಿಕ್ಷಣ ಸಂಸ್ಥೆ ಹೆಮ್ಮರವಾಗಿದೆ. ಜಂಬಗಿಯವರು ತಮ್ಮ ಗುರುವಿನ ಸ್ಮರಣೆ ಮಾಡುವ ಮೂಲಕ ಜೇವೂರ ಗುರುಗಳ ಹೆಸರನ್ನು ಉಳಿಸಿದ್ದಾರೆ.ಇಂತಹ ಗುರುಶಿಷ್ಯ...
ಸುದ್ದಿಗಳು
ಗಣರಾಜ್ಯೋತ್ಸವ ಆಚರಣೆ
ಸವದತ್ತಿಃ ಪಟ್ಟಣದ ಗುರ್ಲಹೊಸೂರಿನಲ್ಲಿರುವ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ ಶಾಸಕರಾದ ವಿಶ್ವಾಸ ವೈದ್ಯ ಧ್ವಜಾರೋಹಣ ನೆರವೇರಿಸಿದರು.ಗೃಹ ರಕ್ಷಕ ದಳದ ಕಮಾಂಡರ್ ಕಂಕಣವಾಡಿ ಇವರಿಂದ ಪ್ರಾರಂಭದಲ್ಲಿ ಶಾಸಕರಿಗೆ ಧ್ವಜಾರೋಹಣ ನೆರವೇರಿಸಲು ಪಥ ಸಂಚಲನ ಮೂಲಕ ಕೋರಿಕೆ ಸಲ್ಲಿಸಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ ಡಾ.ಬಿ.ಆರ್.ಅಂಬೇಡ್ಕರ ಹಾಗೂ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ...
ಸುದ್ದಿಗಳು
ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಗಣ ರಾಜ್ಯೋತ್ಸವದ ಶುಭಾಶಯ
ಗೋಕಾಕ: ನಾಡಿನ ಜನತೆಗೆ ಅರಭಾವಿ ಶಾಸಕ, ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿಯವರು ೭೫ ನೇ ಗಣರಾಜ್ಯೋತ್ಸವದ ಶುಭ ಕೋರಿದ್ದಾರೆ.ನಮ್ಮ ದೇಶದ ಸಾರ್ವಭೌಮತ್ವಕ್ಕಾಗಿ ಜಗತ್ತಿನ ಅತಿ ದೊಡ್ಡದಾದ ಸಂವಿಧಾನವನ್ನು ರಚಿಸಿ ಪ್ರಜಾಪ್ರಭುತ್ವ ದೇಶವನ್ನಾಗಿಸಲು ಹಗಲಿರುಳು ಹೋರಾಟ ನಡೆಸಿರುವ ಎಲ್ಲ ಮಹನೀಯರನ್ನು ಸ್ಮರಿಸುವ ಅವಕಾಶವು ಒದಗಿ ಬಂದಿದೆ. ಇವರು ಹಾಕಿಕೊಟ್ಟ ದೇಶ ಪ್ರೇಮದ ದಾರಿಯಲ್ಲಿ ನಾವೆಲ್ಲರೂ ಒಂದಾಗಿ...
ಸುದ್ದಿಗಳು
ಮತದಾನ ನಮ್ಮೆಲ್ಲರ ಹಕ್ಕು: ಪ್ರೊ. ಶಂಕರ ನಿಂಗನೂರ
ಮೂಡಲಗಿ: ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮತದಾನ ಜನರ ಪ್ರಮುಖ ಹಕ್ಕುಗಳಲ್ಲಿ ಒಂದು. ಪ್ರಜೆಗಳಿಂದ ಆಯ್ಕೆಯಾದ ಸರ್ಕಾರ ಜನರ ಆಶೋತ್ತರಗಳಂತೆಯೇ ನಡೆಯಬೇಕೆಂಬುದು ಸಂವಿಧಾನದ ನಿಯಮವಾಗಿದೆ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರಭಾರಿ ಸಂಯೋಜನಾಧಿಕಾರಿ ಪ್ರೊ. ಶಂಕರ...
ಸುದ್ದಿಗಳು
ಕು. ಸುಪ್ರಿಯಾ ಮಠಪತಿಗೆ ಜನಪದ ಹಾಗೂ ಚಲನಚಿತ್ರ ಗೀತಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ಮೂಡಲಗಿ: ಇತ್ತೀಚೆಗೆ ಗೋಕಾಕದಲ್ಲಿ ಜರುಗಿದ ೨೦ನೇ ಸತೀಶ ಶುಗರ್ ಅವಾರ್ಡ ಕಾರ್ಯಕ್ರಮದಲ್ಲಿ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಕು. ಸುಪ್ರಿಯಾ ಮಲ್ಲಿಕಾರ್ಜುನ ಮಠಪತಿ ಹೈಸ್ಕೂಲ್ ವಿಭಾಗದ ಜನಪದ ಮತ್ತು ಚಲನಚಿತ್ರ ಗೀತಗಾಯನದ ಎರಡು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.ಇವಳನ್ನು ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ...
ಸುದ್ದಿಗಳು
ಏನಾದರೂ ಆಗುವ ಮೊದಲು ಮಾನವರಾಗಿ – ಜಿ.ಪಿ. ಹರ್ಷ ಬಾನು
ಮೂಡಲಗಿ: ಪ್ರತಿಯೊಬ್ಬರೂ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿ ಶಿಕ್ಷಣದವರೆಗೆ ಗಳಿಸಿದ ಜ್ಞಾನದಿಂದ ತಮಗೆ ಇಷ್ಟವಾದ ಖಾಸಗಿ ಅಥವಾ ಸರಕಾರಿ ಹುದ್ದೆಯ ಕಾರ್ಯದ ಜೊತೆಗೆ ದಯೆ, ಅನುಕಂಪ , ಮಾನವೀಯತೆಯನ್ನು ಮೈಗೂಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ದರ್ಪ, ಅಹಂಕಾರ ತೊರೆದು ಎಲ್ಲರೊಡನೆ ಬೆರೆತು ಏನಾದರೂ ಆಗುವುದಕ್ಕೆ ಮೊದಲು ಮಾನವರಾಗಿ ಎಂದು ಹರ್ಷ ಬಾನು ಉಪಅರಣ್ಯ ಸಂರಕ್ಷಣಾಧಿಕಾರಿಗಳು (ಕಾರ್ಯ...
ಸುದ್ದಿಗಳು
ಪುಟ್ಟರಾಜ ಸೇವಾ ಸಮಿತಿ ರಾಜ್ಯಾಧ್ಯಕ್ಷರಾಗಿ, ಪ್ರದೀಪ ನಂದಿಕೇಶ್ವರಮಠ ನೇಮಕ
ಪೂಜ್ಯ ಗುರು ಪುಟ್ಟರಾಜರ ಅಭಿಮಾನಿ ಭಕ್ತರ ಮಹಾ ಬಳಗವಾದ, ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾಗಿ, ಹಾವೇರಿ ಜಿಲ್ಲೆಯ ಕದರ ಮಂಡಲಗಿಯ ಯುವ ಸಂಘಟಕ, ಪ್ರದೀಪ ನಂದಿಕೇಶ್ವರಮಠ ಇವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಮಂಜುಶ್ರೀ ಹಾವಣ್ಣವರ ಬೆಳಗಾವಿ ಇವರು ತಿಳಿಸಿದ್ದಾರೆ. ನಂದಿಕೇಶ್ವರಮಠ ಪೂಜ್ಯರ ಮೇಲಿನ ಭಕ್ತಿ,...
ಸುದ್ದಿಗಳು
ಬಬಲಾದಿ ಮಠಕ್ಕೆ ಭೇಟಿ ನೀಡಿ ಶ್ರೀ ಗಳ ಆಶೀರ್ವಾದ ಪಡೆದ ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ- ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಅರಭಾವಿ ಬಬಲಾದಿ ಮಠಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗುರುವಾರ ಸಂಜೆ ಭೇಟಿ ನೀಡಿ ಶ್ರೀ ಗಳ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬಬಲಾದಿ ಮಠದ ಜಾತ್ರೆಯು ನಾಳೆಯಿಂದ ಅದ್ದೂರಿಯಿಂದ ಜರುಗಲಿದೆ. ನಮ್ಮ ರಾಜ್ಯವಲ್ಲದೇ ನೆರೆಯ ರಾಜ್ಯಗಳ ಅಪಾರ ಭಕ್ತರು ಈ...
ಸುದ್ದಿಗಳು
ಭೀಕರ ರಸ್ತೆ ಅಪಘಾತ ; ಇಬ್ಬರು ಜೆಸ್ಕಾಂ ಸಿಬ್ಬಂದಿಗಳು ಸ್ಥಳದಲ್ಲೇ ಸಾವು
ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಜೆಸ್ಕಾಂ ಸಿಬ್ಬಂದಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಂಭವಿಸಿದೆಸ್ಕಾರ್ಪಿಯೋ ಕಾರು ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ ಸವಾರರಾದ ಸಿದ್ದು ( 42) ಹಾಗೂ ಸುಕದೇವ್ (45) ಸಾವನ್ನಪ್ಪಿದ ದುರ್ದೈವಿಗಳು. ಇವರಿಬ್ಬರೂ ಜೆಸ್ಕಾಂ ಇಲಾಖೆಯಲ್ಲಿ ಬಿಲ್ ಕಲೆಕ್ಟರ್...
About Me
11388 POSTS
1 COMMENTS
Latest News
ಕವನ : ಬೆಳಕಿನ ಹಬ್ಬ ದೀಪಾವಳಿ
ಬೆಳಕಿನ ಹಬ್ಬ ದೀಪಾವಳಿ
ಅಂಧಕಾರದಲಿ ದಿವ್ಯ ಚೇತನದ ಬೆಳಕು ಬೆಳಗಿಸಿ
ಮೂಢನಂಬಿಕೆಯಲಿ ಜ್ಞಾನದ ಜ್ಯೋತಿಯ ಹೊತ್ತಿಸಿ
ಸುಳ್ಳಿನ ಲೋಕದಲಿ ಸತ್ಯದ ನುಡಿದೀಪ ಹತ್ತಿಸಿ
ಬೆಳಕಿನ ಹಬ್ಬ ದೀಪಾವಳಿಯ ಆಚರಿಸಿಸ್ವಾರ್ಥ ಹೃದಯದಿ ನಿಸ್ವಾರ್ಥದ...