ಸವದತ್ತಿಃ ಪಟ್ಟಣದ ಗುರ್ಲಹೊಸೂರಿನಲ್ಲಿರುವ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ ಶಾಸಕರಾದ ವಿಶ್ವಾಸ ವೈದ್ಯ ಧ್ವಜಾರೋಹಣ ನೆರವೇರಿಸಿದರು.
ಗೃಹ ರಕ್ಷಕ ದಳದ ಕಮಾಂಡರ್ ಕಂಕಣವಾಡಿ ಇವರಿಂದ ಪ್ರಾರಂಭದಲ್ಲಿ ಶಾಸಕರಿಗೆ ಧ್ವಜಾರೋಹಣ ನೆರವೇರಿಸಲು ಪಥ ಸಂಚಲನ ಮೂಲಕ ಕೋರಿಕೆ ಸಲ್ಲಿಸಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ ಡಾ.ಬಿ.ಆರ್.ಅಂಬೇಡ್ಕರ ಹಾಗೂ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರಾಜು ಭಜಂತ್ರಿ, ರತ್ನಾ ಸೇತಸನದಿ, ವೀರಯ್ಯ ಹಿರೇಮಠ, ಬಿ.ಐ.ಚಿನಗುಡಿ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಎಸ್.ಬಿ.ಬೆಟ್ಟದ, ಸಿ.ವ್ಹಿ.ಬಾರ್ಕಿ, ವೈ.ಬಿ.ಕಡಕೋಳ, ಡಿ.ಎಲ್.ಭಜಂತ್ರಿ, ಲೆಕ್ಕ ಸಹಾಯಕರಾದ ಜೆ.ಎಸ್.ಸಿದ್ಲಿಂಗನವರ, ಜವಾನ ಈರಪ್ಪ ಅವರಾದಿ, ಚಾಲಕ ಮಲ್ಲೇಶ ಗೊರಗುದ್ದಿ ವಿವಿಧ ಸಿ.ಆರ್.ಸಿಗಳ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಕೆ.ಎಚ್.ಮುದ್ದಾಪುರ.ರವಿ ನಲವಡೆ.ಪ್ರಕಾಶ ಫರೀಟ.ರಾಮಚಂದ್ರಪ್ಪ, ಡಿ.ಟಿ.ಮರಕುಂಬಿ, ಎಂ.ಎಸ್.ಗಡೇಕಾರ, ತಿಮ್ಮಯ್ಯ, ಸಿದ್ದಪ್ಪ ಕುಂಬಾರ, ಶಾಸಕರ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಬಿ.ಕಮ್ಮಾರ, ವಿಶೇಷ ಚೇತನ ಮಕ್ಕಳ ಶಾಲಾ ಸಿದ್ಧತಾ ಕೇಂದ್ರದ ಮಾಶಾಭಿ ಯಡೊಳ್ಳಿ, ಶಬ್ಬೀರ್ ಮುನವಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ನಂತರ ಪಥ ಸಂಚಲನ ಜರುಗಿತು. ಸಿ.ವ್ಹಿ.ಬಾರ್ಕಿ ನಿರೂಪಿಸಿದರು. ರತ್ನ ಸೇತಸನದಿ ವಂದಿಸಿದರು.