spot_img
spot_img

ಸಾಧನೆಗೆ ಸಂತಸಪಡುವ ಎರಡು ಜೀವಗಳೆಂದರೆ ಗುರು ಮತ್ತು ತಾಯಿ – ಮುಕ್ತಾನಂದ ಮಹಾಸ್ವಾಮಿಗಳು

Must Read

- Advertisement -

ಮುನವಳ್ಳಿಃ “ಜೀವನದಲ್ಲಿ ನೀವು ಏನೇ ಸಾಧನೆ ಮಾಡಿ,ಆ ಸಾಧನೆಯನ್ನು ಕಂಡು ಸಂತಸಪಡುವ ಎರಡು ಜೀವಗಳೆಂದರೆ ಗುರು ಮತ್ತು ತಾಯಿ. ಜೇವೂರ ಗುರುಗಳು ಸಂಬಂಧಕ್ಕೆ ಬೆಲೆ ಕೊಟ್ಟರು. ಸಮಾಜಕ್ಕೆ ಗೌರವ ಕೊಟ್ಟರು.ಆದರ್ಶವೇ ದೇವರೆಂದು ಬಾಳಿದರು.ಅವರು ಕಟ್ಟಿದ ಶಿಕ್ಷಣ ಸಂಸ್ಥೆ ಹೆಮ್ಮರವಾಗಿದೆ. ಜಂಬಗಿಯವರು ತಮ್ಮ ಗುರುವಿನ ಸ್ಮರಣೆ ಮಾಡುವ ಮೂಲಕ ಜೇವೂರ ಗುರುಗಳ ಹೆಸರನ್ನು ಉಳಿಸಿದ್ದಾರೆ.ಇಂತಹ ಗುರುಶಿಷ್ಯ ಸಂಬಂಧಗಳು ಬದುಕಿನ ನಿಜವಾದ ಮೌಲ್ಯಗಳಾಗಿವೆ. ಆಧುನಿಕ ತಂತ್ರಜ್ಞಾನ ನಮ್ಮ ಜ್ಞಾನಕ್ಕಾಗಿ ಇರಲಿ. ಆದರೆ ಕೌಟುಂಬಿಕ ಜೀವನದಲ್ಲಿ ಭಾವನಾತ್ಮಕ ಸಂಬಂಧ ಉಳಿದಾಗ ಮಾತ್ರ ಜೀವನ ಸಾರ್ಥಕ. ಸಮಾಜದ ಜೊತೆಗೆ ಸಿದ್ದಾಂತಗಳನ್ನು ಅಳವಡಿಸಿಕೊಂಡು ಅದರಂತೆ ಬದುಕಿದಾಗ ಮಾತ್ರ ಜೀವನ ಸಾರ್ಥಕ.ಅದರಂತೆ ಬದುಕಿದವರು ಜೇವೂರ ಗುರುಗಳು”ಎಂದು ನಿತ್ಯಾನಂದ ಸತ್ಸಂಗ ಆಶ್ರಮದ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಮುಕ್ತಾನಂದ ಮಹಾಸ್ವಾಮಿಗಳು ತಿಳಿಸಿದರು.

ಅವರು ಪಟ್ಟಣದ ಶ್ರೀಮತಿ ರೇಣಮ್ಮತಾಯಿ ಯಲಿಗಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ವ್ಹಿ.ಪಿ.ಜೇವೂರ ಸ್ಮಾರಕ ಪ್ರತಿಷ್ಠಾನ ಮುನವಳ್ಳಿಯ ವತಿಯಿಂದ ಜರುಗಿದ ದಿವಂಗತ ವ್ಹಿ.ಪಿ.ಜೇವೂರ ಗುರುಗಳ ೧೦೩ ನೇ ಜಯಂತಿ ಉತ್ಸವದ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. 

ಈ ಕಾರ್ಯಕ್ರಮದಲ್ಲಿ ಮುನವಳ್ಳಿಯ ಹಿರಿಯರಾದ ಅಂಬರೀಷ್ ಯಲಿಗಾರ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ, ಹಿರಿಯ ಗಣ್ಯರಾದ ಮೃತ್ಯುಂಜಯ ಹಂಪಣ್ಣವರ, ಪಂಚಪ್ಪ ಜಂಬಗಿ, ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ, ಕಾಮನ್ನವರ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷರಾದ ಚಂದ್ರಶೇಖರ ಜಂಬ್ರಿ, ವಿಶ್ರಾಂತ ಶಿಕ್ಷಕ ವ್ಹಿ.ಎಫ್.ಚಿಕ್ಕಮಠ, ಪ್ರಗತಿಪರ ರೈತರಾದ ದಿಲಾವರಸಾಬ ವಟ್ನಾಳ, ತಾಲೂಕ ಆದರ್ಶ ಶಿಕ್ಷಕ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಗುರುಮಾತೆ ಎಂ.ಎಸ್.ಕಲಾದಗಿ, ಸುಮಾ ಗೋಪಶೆಟ್ಟಿ, ಭಾರತಿ ಹೋಟಿ,  ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಮೀನಾಕ್ಷಿ ಮುರನಾಳ, ಜೇವೂರ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೋಮಾಡಿ ದಿವ್ಯ ಕಲಾಶಕ್ತಿ ವಿಕಲಚೇತನರ ರಾಷ್ಟ್ರೀಯ ಮಟ್ಟದ ಸಮೂಹ ನೃತ್ಯ ಸಂಯೋಜಕ ಗೌರವಕ್ಕೆ ಪಾತ್ರರಾದ ವೀರೂ ಕಳಸನ್ನವರ ಮೊದಲಾದವರು ಉಪಸ್ಥಿತರಿದ್ದರು.

- Advertisement -

ಸನ್ಮಾನ ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಬ್ಯಾಳಿ “ಜಗತ್ತಿಗೆ ಜ್ಞಾನದ ಕಂಪನ್ನು ಪಸರಿಸುವವನೇ ಗುರು. ನಾವು ಬದುಕಿನಲ್ಲಿ ನಮ್ಮ ಗುರುವಿನ ಋಣವನ್ನು ತೀರಿಸುವುದೇ ನಾವು ನೀಡುವ ಗುರು ನಮನ ಆ ಕಾರ್ಯವನ್ನು ಜಂಬಗಿಯವರು ಜೇವೂರ ಗುರುಗಳ ಸ್ಮರಣೋತ್ಸವ ಮಾಡುವ ಮೂಲಕ ಇಂದಿಗೂ ಅವರ ಸ್ಮರಣೆ ಜರುಗಿದೆ. ಜಂಬಗಿಯವರ ಮಗ ನನ್ನ ಶಿಷ್ಯ. ಈ ದಿಸೆಯಲ್ಲಿ ಜಂಬಗಿಯವರ ನನ್ನ ಮಧ್ಯೆ ನಿಕಟ ಪರಿಚಯ ಏರ್ಪಟ್ಟಿತ್ತು.ಜಂಬಗಿಯವರ ಮಗ ಇಂದು ಉನ್ನತ ಹುದ್ದೆಯಲ್ಲಿ ಇರುವರು. ಜೇವೂರ ಗುರುಗಳು ವಿದ್ಯಾರ್ಥಿಗಳಿಗೆ ಬರೀ ಶಿಕ್ಷಣ ನೀಡದೇ ಅವರಿಗೆ ಬದುಕುವ ಕಲೆಯನ್ನು ನೀಡಿದರು.”ಎಂದು ಜೇವೂರ ಮತ್ತು ಜಂಬಗಿಯವರ ಸ್ಮರಣೆ ಮಾಡಿದರು.

ಅತಿಥಿ ಉಪನ್ಯಾಸ ನೀಡಿದ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ, “ಜೇವೂರ ಗುರುಗಳ ನಿಸ್ವಾರ್ಥ ಬದುಕು. ಉಚಿತವಾಗಿ ಇಂಗ್ಲೀಷ್ ಭಾಷೆಯ ಕಲಿಸುವ ರೀತಿ.ಅವರ ಶಿಷ್ಯ ಜಂಬಗಿಯವರು ಗುರುಗಳ ಬಗ್ಗೆ ಹೊಂದಿದ್ದ ಪೂಜ್ಯ ಭಾವನೆ.ಗುರುಶಿಷ್ಯ ಸಂಬಂಧದ ಮೂಲಕ ಮೂಡಿಬಂದ ತಮ್ಮ ಸಂಪಾದನೆಯ ಕೃತಿ.ಜೀವನದಲ್ಲಿ ನಾವು ಜೇವೂರ ಗುರುಗಳ ಸ್ಮರಣೆ ಮಾಡುತ್ತಿರುವುದಕ್ಕೆ ಸಾಕ್ಷಿ ಎಂಬುದನ್ನು ಅವರ ಬದುಕಿನ ಘಟನೆಗಳನ್ನು ಸ್ಮರಿಸುವ ಮೂಲಕ ಗುರುವಿನ ಮಹತ್ವ “ ಕುರಿತು ತಿಳಿಸಿದರು.

ಕಾರ್ಯಕ್ರಮದಲ್ಲಿ  ಶ್ರೀಮತಿ ಎಂ.ಜಿ.ಹೊಸಮಠ, ದೈಹಿಕ ಶಿಕ್ಷಕ ಕಮತಗಿ, ಅನ್ನಪೂರ್ಣ ಲಂಬೂನವರ, ಮುಕ್ತಾ ಪಶುಪತಿಮಠ, ಗಣಪತಿ ಭಟ್, ಬಾಳು ಹೊಸಮನಿ, ವೀರಣ್ಣ ಕೊಳಕಿ, ವೈ.ಎಫ್.ಶಾನುಭೋಗ, ಹ.ಬ.ಅಸೂಟಿ, ಕಲ್ಲಪ್ಪ ಕಿತ್ತೂರ, ಬಿ.ಬಿ.ಹುಲಿಗೊಪ್ಪ, ವಾಯ್.ಪಿ.ಮಾದರ, ವೀರೂ ಕಳಸನ್ನವರ, ಶಿವಪುತ್ರಪ್ಪ ಕೆಳಗಡೆ, ಮಂಜುನಾಥ ಮಾವಿನಕಟ್ಟಿ, ಸುರೇಖಾ ಗೋಪಶೆಟ್ಟಿ, ಸುಜಾತಾ ಜಂಬಗಿ, ರಾಜೇಶ್ವರಿ ಬಾಳಿ, ಅನಿತಾ ಯಲಿಗಾರ, ರಾಧಾ ಕುಲಕರ್ಣಿ, ಚಂದ್ರಶೇಖರ ತುಳಜನ್ನವರ, ಶಿವು ಕಾಟಿ, ಪ್ರಶಾಂತ ತುಳಜನ್ನವರ, ಡಾ.ಮಲ್ಲಿಕಾರ್ಜುನ ಅಷ್ಠಗಿಮಠ, ಶಶಾಂಕ ಪೂಜೇರ,ಚರಮೇಶ ಮುರಂಕರ, ಸುಧೀರ ವಾಘೇರಿ, ತಾಜಾಜಿರಾವ್ ಮುರಂಕರ, ಲಾಲ್ ಸಾಬ್ ವಟ್ನಾಳ, ಅನುರಾಧ ಬೆಟಗೇರಿ, ಸುಜಾತಾ ಕಾಟಿ ಸೇರಿದಂತೆ ಜೇವೂರ ಗುರುಗಳ ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು.

- Advertisement -

ಇದೇ ಸಂದರ್ಭದಲ್ಲಿ ಆದರ್ಶ ಶಿಕ್ಷಕರು, ವಿವಿಧ ರಂಗಗಳ ಸಾಧಕರು, ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿಭಾಗದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವ್ಹಿ.ಪಿ.ಜೇವೂರ ಗುರುಗಳ ಜಯಂತಿ ನಿಮಿತ್ತ ಪ್ರೌಢಶಾಲೆ ಹಾಗೂ ಪದವಿಪೂರ್ವ ಮಹಾವಿದ್ಯಾಲಯಗಳಿಗೆ ಹಮ್ಮಿಕೊಂಡ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಜರುಗಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಮುಕ್ತಾ ಪಶುಪತಿಮಠ ಪ್ರಾರ್ಥನಾ ಗೀತೆ ಹಾಡಿದರು. ಅನಿತಾ ಯಲಿಗಾರ ನಿರೂಪಿಸಿದರು.ಚಂದ್ರು ತುಳಜನ್ನವರ ಹಾಗೂ ವೈ.ಎಫ್.ಶಾನುಭೋಗ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು. ವೀರಣ್ಣ ಕೊಳಕಿ ವಂದಿಸಿದರು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group