Times of ಕರ್ನಾಟಕ

ಭಾರತದ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ – ಅಶೋಕ ಮನಗೂಳಿ

ಸಿಂದಗಿ- ಭಾರತದ ಸಂವಿಧಾನ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆ ಒದಗಿಸಿದೆ. ಭಾರತದ ಸಂವಿಧಾನ ಜಗತ್ತಿಗೆ ಮಾದರಿಯಾದ ಸಂವಿಧಾನವಾಗಿದೆ ಎಂದು ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಅಧ್ಯಕ್ಷ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಎಚ್.ಜಿ.ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ವಿವಿಧ ಅಂಗ ಸಂಸ್ಥೆಗಳು ಗುರುವಾರ ಹಮ್ಮಿಕೊಂಡಿರುವ 74 ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ...

ಭೀಮಾ ಯುನಿರ್ವಸಲ್ ಸೆಂಟ್ರಲ್ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವ

ಸಿಂದಗಿ: ಭಾರತ ದೇಶವು ಜಗತ್ತಿನಲ್ಲಿ ಬಲಾಢ್ಯ ದೇಶವಾಗಿ ಹೊರಹೊಮ್ಮಲು ನಮ್ಮ ಸಂವಿಧಾನದ ಮೂಲಭೂತ ಹಕ್ಕು ಹಾಗೂ ಮೂಲಭೂತ ಕರ್ತವ್ಯ ಅಡಿಯಲ್ಲಿ ಆಡಳಿತವು ಮುಖ್ಯ ಕಾರಣವಾಗಿದೆ, ಅದೇ ರೀತಿ ಜಾತಿ, ಮತ, ಧರ್ಮ ಪಂಗಡವಿಲ್ಲದೆ ಸಮಾನತೆ ಹಾಗೂ ಸೌಹಾರ್ದದಿಂದ ನಾವು ಬದುಕು ಕಂಡುಕೊಳ್ಳುತ್ತಿದ್ದೇವೆ ಎಂದು ಸಂಸ್ಥೆಯ ಅಧ್ಯಕ್ಷ ವಿಠ್ಠಲ ಕೊಳೂರು ಹೇಳಿದರು.ಪಟ್ಟಣದ ಹೊರವಲಯದ ಭೀಮಾ ಯುನಿರ್ವಸಲ್...

ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಗೋಮಾತೆಗೆ ಒಣ ಹುಲ್ಲು ಸಮರ್ಪಣೆ

ಜನವರಿ: ಹೊಸಗುಂದದ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿರುವ ಶ್ರೀ ಭಾರತೀತೀರ್ಥ ಗೋಶಾಲೆಗೆ ಬೇಕಾಗಿರುವ ಒಣ ಹುಲ್ಲನ್ನು ಸೇವೆಯಾಗಿ ಸಾಗರ ತಾಲೂಕು ಹೊಸಗುಂದ ಗ್ರಾಮದ ಸುತ್ತ ಮುತ್ತಲಿನ ಭಕ್ತರು ನೀಡಿದ್ದ ಒಣ ಹುಲ್ಲನ್ನು ಮಧ್ಯಾಹ್ನ 12 -00 ಗಂಟೆಗೆ ಸರಿಯಾಗಿ ಗೋಪೂಜೆ ಹಾಗು ಗೋಮಾತೆಗೆ ಸಮರ್ಪಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .ರಾಜ್ಯದ ಬೆಂಗಳೂರು , ಹಾಸನ , ಮೈಸೂರು...

30 ಗ್ರಾ.ಪಂ. ಗಳಿಗೆ ಸ್ವಚ್ಛವಾಹಿನಿ ವಾಹನ ಹಸ್ತಾಂತರ

ಗೋಕಾಕ: ಮೂಡಲಗಿ ಮತ್ತು ಗೋಕಾಕ ತಾಲೂಕುಗಳ 30 ಗ್ರಾಪಂಗಳಿಗೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕ ನಗರದ ತಮ್ಮ ಕಚೇರಿಯಲ್ಲಿ ಗುರುವಾರ ಸ್ವಚ್ಛ ವಾಹಿನಿ ವಾಹನಗಳನ್ನು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಘಟಕಗಳ ಸ್ವಚ್ಛತೆ ಸೇರಿದಂತೆ ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈಗಾಗಲೇ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ...

ಸಂವಿಧಾನ ಪಾಲಿಸುವುದೇ ರಚನಾಕಾರರಿಗೆ ನೀಡುವ ಗೌರವ- ಈರಣ್ಣ ಕಡಾಡಿ

ಮೂಡಲಗಿ: ನಮ್ಮ ದೇಶದ ಕಾನೂನು ಮತ್ತು ಸಂವಿಧಾನವನ್ನು ಗೌರವಿಸಿ ಕಟಿಬದ್ಧವಾಗಿ ಪಾಲಿಸುವುದೇ ದೇಶಕ್ಕೆ ಮತ್ತು ಸಂವಿಧಾನ ರಚನಾಕಾರರಿಗೆ ಸಲ್ಲಿಸುವ ಶ್ರೇಷ್ಠ ಗೌರವ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.ಕಲ್ಲೋಳಿ ಪಟ್ಟಣದಲ್ಲಿ ಗುರುವಾರ ಜ.26 ರಂದು ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ. ಇದರ ಆಡಳಿತ ಕಛೇರಿಯಲ್ಲಿ ಭಾರತ ಮಾತೆ, ಮಹಾತ್ಮ ಗಾಂಧೀಜಿ...

ಕಾರ್ಮಿಕ ವರ್ಗದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ-ಶಾಸಕ ಬಾಲಚಂದ್ರ ಜಾರಕಿಹೊಳಿ

ಯಾದವಾಡ(ಗಿರಿಸಾಗರ) ಗ್ರಾಮದಲ್ಲಿ ಜೈ ಭವಾನಿ ಕಟ್ಟಡ ಕಾರ್ಮಿಕರ ಸಂಘವನ್ನು ಉದ್ಘಾಟಿಸಿದ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ. ಮೂಡಲಗಿ: ಕಾರ್ಮಿಕರ ವರ್ಗದಿಂದ ಮಾತ್ರ ಈ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ದೈಹಿಕ ಇಲ್ಲವೇ ಬೌದ್ಧಿಕ ಶ್ರಮವನ್ನು ಮಾಡುತ್ತಿರುವ ವ್ಯಕ್ತಿಯು ಕಾರ್ಮಿಕನಾಗಿದ್ದು, ಅಂತಹ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿರುವುದಾಗಿ ಶಾಸಕ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ತಾಲೂಕಿನ...

ಬಿದರಿ ಕಲೆಯ ಷಾ ರಶೀದ್ ಅಹ್ಮದ್ ಖಾದ್ರಿಗೆ ಒಲಿಯಿತು ಪದ್ಮಶ್ರೀ

ಬೀದರ: ಬಿದರಿ ಕಲೆಯಲ್ಲಿ ವಿಶೇಷ ಸಾಧನೆ ಮಾಡಿರುವ ಬೀದರನ ಷಾ ಅಹ್ಮದ ಖಾದ್ರಿಯವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ.1955 ರ ಜೂನ್‌ ನಲ್ಲಿ ಪ್ರತಿಷ್ಠಿತ ಬಿದ್ರಿ ಕಲೆಗಾರರ ಕುಟುಂಬದಲ್ಲಿ ಜನಿಸಿರುವ ಇವರು ತಮ್ಮ ತಂದೆಯಿಂದಲೇ ಬಿದ್ರಿ ಕರಕುಶಲವನ್ನು ಕಲಿತಿದ್ದಾರೆ.ತಮ್ಮ ಪೂರ್ವಜರ ಕಾಲದಿಂದಲೂ ಬಿದ್ರಿ ಕರಕುಶಲದಲ್ಲಿ ತೊಡಗಿಸಿಕೊಂಡಿರುವ ಕುಟುಂಬದಿಂದ ಬಂದಿದ್ದರೂ, ಕಲೆಯಲ್ಲಿ ಅಲ್ಪ ಪ್ರಮಾಣದ...

ಗಾನಯೋಗಿ ಪಂಚಾಕ್ಷರಿ ಅನುಗ್ರಹ ಪ್ರಶಸ್ತಿಗೆ ಆಯ್ಕೆ

ಉತ್ತರದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ದಕ್ಷಿಣಕ್ಕೆ ತಂದವರು, ಅರಮನೆಯ ಸಂಗೀತಕ್ಕೆ ಗುರು ಮನೆಯ ಗೌರವವನ್ನು ದೊರಕಿಸಿಕೊಟ್ಟವರು, ವಚನ ಸಾಹಿತ್ಯವನ್ನು ಸಂಗೀತಕ್ಕೆ ಅಳವಡಿಸಿ ಹಾಡಿದ ಮೊದಲಿಗರು, ಸಂತ ಶಿಶುನಾಳ ಶರೀಫ ಗೀತೆಗಳು ಗ್ರಾಮ ಫೋನುಗಳಿಗೆ ಧ್ವನಿಮುದ್ರಿಸಿದವರು ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳವರು.ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಂದ ಗದಗು ಸಂಗೀತದ ಗದ್ದಿಗೆಯಾಗಿದೆ. ಪೂಜ್ಯರ ಅಂಧ-ಅನಾಥರ ಸೇವೆ ಶಬ್ದಕ್ಕೆ ನಿಲುಕದು....

ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

ಬೈಲಹೊಂಗಲ: ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ 74 ನೆಯ ಗಣರಾಜ್ಯೋತ್ಸವ ಆಚರಿಸಲಾಯಿತು.ಮುಖ್ಯ ಶಿಕ್ಷಕರಾದ ಎನ್.ಆರ್.ಠಕ್ಕಾಯಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ,  ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಅರಿತು ಉತ್ತಮ ನಾಗರಿಕರಾಗಬೇಕು ಎಂದರು.ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ ಗುರುನಗೌಡರ ಇವರ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪಥಸಂಚಲನ ಎಲ್ಲ ಗಮನ ಸೆಳೆಯಿತು. ಸಂವಿಧಾನ, ಯೋಧರ ತ್ಯಾಗ,  ದೇಶಪ್ರೇಮದ...

ತಾಲೂಕಾಡಳಿತದ ನಿರ್ಲಕ್ಷ್ಯ ; ಕೆಳಕ್ಕೆ ಜಾರಿದ ರಾಷ್ಟ್ರಧ್ವಜ

ಮೂಡಲಗಿ - ಗಣರಾಜ್ಯೋತ್ಸವದ ನಿಮಿತ್ತ ನಗರದ ಗಾಂಧಿ ಚೌಕದಲ್ಲಿ ತಾಲೂಕಾಡಳಿತದಿಂದ ರಾಷ್ಟ್ರಧ್ವಜಾರೋಹಣ ನೆರವೇರಿದ್ದು ರಾಷ್ಟ್ರಧ್ವಜವು ಸ್ವಲ್ಪ ಕೆಳಕ್ಕೆ ಜರಿದು ಮುದ್ದೆಯಾಗಿರುವ ಆಭಾಸಕರ ಘಟನೆ ಜರುಗಿದೆ.ಇಲ್ಲಿನ ಗಾಂಧಿ ಚೌಕದಲ್ಲಿ ಮೂಡಲಗಿ ತಹಶೀಲ್ದಾರ ಡಿ ಜಿ ಮಹಾತ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಇಡೀ ತಾಲೂಕಾಡಳಿತವೇ ಹಾಜರಿದ್ದು ಧ್ವಜವು ಕೆಳ ಮಟ್ಟಕ್ಕೆ ಹಾರಿದ್ದು ಯಾರ ಗಮನಕ್ಕೂ ಬರದೇ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group